NewsWomen Empowerment

ಜ್ಞಾನ ವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ

ಜ್ಞಾನ ವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತುರುಗನೂರು ಗ್ರಾಮ, ತಿ.ನರಸೀಪುರ ತಾಲೂಕಿನಲ್ಲಿ 16.10.2017ರಂದು ನಡೆಸಲಾಯಿತು.

ಜ್ಞಾನ ವಿಕಾಸ ಕಾರ್ಯಕ್ರಮ ತಾಲೂಕಿನಲ್ಲಿ ಪ್ರಾರಂಭವಾಗಿ 05 ವರ್ಷಗಳನ್ನು ಪೂರೈಸಿದ್ದು, ಇದರ ಪ್ರಯಕ್ತ ಮಹಿಳಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಮತ್ತು ಸಾಂಸ್ಕ್ರುತಿಕ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಂಜುನಾಥ್ ಜೆ.ಡಿ.ಎಸ್ ಮುಖಂಡರು, ತುರುಗನೂರು ಮಾಡಿದರು.ಹಿಂದೆ ಮಹಿಳೆಯರು ಮನೆಯಿಂದ ಹೊರಗೆ ಬಂದು ಮಾಹಿತಿ ಕೊಡಲು ಕೂಡ ತುಂಬಾ ಭಯಪಡುತ್ತಿದ್ದರು. ಆದರೆ 5 ವರ್ಷದಿಂದ ಈ ಜ್ಞಾನ ವಿಕಾಸ ಕಾರ್ಯಕ್ರಮವನ್ನು ನಾನು ವೀಕ್ಷಿಸುತ್ತಿದ್ದು, ದಿನೇ ದಿನೆ ಮಹಿಳೆಯರು ಎಲ್ಲಾ ರೀತಿಯಲ್ಲಿ ಮುಂದೆ ಬಂದಿದ್ದು, ಜೊತೆಯಲ್ಲಿ ಆಟೋಟ ಸ್ಪರ್ಧೆಯಲ್ಲಿ ಕೂಡ ತಮ್ಮ ವಯಸ್ಸನ್ನು ಮರೆತು ಸಕ್ರಿಯವಾಗಿ ಭಾಗವಹಿಸಿದ್ದನ್ನು ಕಂಡು ನನಗೆ ತುಂಬಾ ಹೆಮ್ಮಿಯಾಗುತ್ತದೆ. ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶ್ರೀಮತಿ ಸುನೀತಾಪ್ರಭು ಯೋಜನಾಧಿಕಾರಿ ತಿ.ನರಸೀಪುರ, ಪ್ರಾಸ್ತಾವಿಕ ಮಾತನಾಡಿ. ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಅವಳಿಗೆ ಧೈರ್ಯ, ನಂಬಿಕೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂದಿನ ದಿನ ನೀವೆಲ್ಲಾ ಇಷ್ಟು ಬದಲಾವಣೆಯಾಗಲು ಕಾರಣ ಜ್ಞಾನ ವಿಕಾಸ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನಿಮಗೆ ಒದಗಿಸಿಕೊಟ್ಟಿರುವ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಾಲೂಕಿನಲ್ಲೇ ನಿಮ್ಮ ಜ್ಞಾನ ವಿಕಾಸ ಕೇಂದ್ರ ಉತ್ತಮವಾಗಿರಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಹಗ್ಗಜಗ್ಗಾಟ, ಹ್ಯಾಂಗರ್ ಜೋಡಿಸುವುದು, ರಂಗೋಲಿ ಸ್ಪರ್ಧೆ, ಫ್ಯಾಷನ್ ಶೋ, ಬಾಲ್ ಪಾಸಿಂಗ್ ಆಟಗಳನ್ನು ಏರ್ಪಡಿಸಿ ವಿಜೇತರಾದ ಮಹಿಳೆಯರಿಗೆ ಬಹುಮಾನವನ್ನು ಸಂಸ್ಥೆ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ, ಗ್ರಾ.ಪಂ. ಅಧ್ಯಕ್ಷರು ಲಕ್ಷ್ಮಿ, ವಲಯದ ಮೇಲ್ವಿಚಾರಕರಾದ ಸವಿತ, ಒಕ್ಕೂಟದ ಅಧ್ಯಕ್ಷರು ವನಜಾಕ್ಷಿ, ಸೇವಾಪ್ರತಿನಿಧಿ ಮಂಜುಳ ಹಾಗೂ 60 ಜನ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.

One thought on “ಜ್ಞಾನ ವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ

Leave a Reply

Your email address will not be published. Required fields are marked *