NewsWomen Empowerment

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ-ಅಕ್ಟೋಬರ್-2017

ಶಿರಹಟ್ಟಿ ತಾಲೂಕು ಮಹಿಳಾ ದೌರ್ಜನ್ಯ ಹಾಗೂ ಮಕ್ಕಳ ರಕ್ಷಣೆ ಕುರಿತು ಮಾಹಿತಿ

ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಜ್ಞಾನವಿಕಾಸ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ರಕ್ಷಣಾ ಘಟಕ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಸಂಬಂಧಪಟ್ಟ ಆಪ್ತ ಸಮಾಲೋಚಕರು ಮತ್ತು ವಕೀಲರು ಕಾನೂನು ಸೌಲಭ್ಯಗಳು ಮತ್ತು ಕೈಗೊಳ್ಳುವ ಮುಂಜಾಗೃತೆ ಕ್ರಮಗಳ ಕುರಿತು ಮಾಹಿತಿಯನ್ನು ತಿಳಿಸಲಾಯಿತು.ಈ ಮಾಹಿತಿ ಕಾರ್ಯಕ್ರಮದಿಂದ ಮಹಿಳಾ ದೌರ್ಜನ್ಯ ಮತ್ತು ಮಕ್ಕಳ ನಿಷ್ಕಾಳಜಿಯಲ್ಲಿ ಪಾಲಕರ ಪಾತ್ರ ಬಹುಮುಖ್ಯ ಎಂಬುವುದನ್ನು ಮನವರಿತ ಸದಸ್ಯರು ಮಾಹಿತಿ ಸಂಪೂರ್ಣವಾಗಿ ಅರಿತುಕೊಂಡು ಮುಂದಿನ ದಿನಗಳಲ್ಲಿ ಕುಟುಂಬದ ಬಗ್ಗೆ ಮತ್ತು ಮಕ್ಕಳ ಮೇಲೆ ಕಾಳಜಿ ವಹಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಆಕಾಶವಾಣಿ ಬಾನುಲಿ ಕೇಂದ್ರಕ್ಕೆ ಸದಸ್ಯರ ಭೇಟಿ

ಜ್ಞಾನವಿಕಾಸ ಕೇಂದ್ರ ಸದಸ್ಯರನ್ನು ಅದ್ಯಯನ ಪ್ರವಾಸಕ್ಕೆ ಧಾರವಾಡ ಆಕಾಶವಾಣಿ ಬಾನುಲಿ ಕೇಂದ್ರಕ್ಕೆ ಭೇಟಿ ಮಾಡಿಸಲಾಯಿತು. ಹಳ್ಳಿ ಸೊಬಗಿನಲ್ಲಿರುವ ಜನಪದ ಕಲೆಗಳು, ಸೋಬಾನ ಪದಗಳು, ಆರೋಗ್ಯದ ಮಾಹಿತಿಗಳು, ಜ್ಞಾನವಿಕಾಸ ಕಾರ್ಯಕ್ರಮದ ಕುರಿತು ಸಂದರ್ಶನವನ್ನು ನೀಡಲಾಯಿತು. ಈ ಆಕಾಶವಾಣಿ ಕೇಂದ್ರದಲ್ಲಿ ಸದಸ್ಯರು ಪ್ರೇರೇಪಿತರಾಗಿ ಹಳ್ಳಿ ಸೊಬಗಿನಲ್ಲಿ ಮೆರೆಯುವ ಜನಪದ, ಸೋಬಾನ ಪದ, ಹಾಡುಗಳನ್ನು ರಾಗಬದ್ದವಾಗಿ ಆಕಾಶವಾಣಿಯಲ್ಲಿ ಹಾಡಿದರು ಮತ್ತು ಯೋಜನೆಯ ಬಗ್ಗೆ ಜ್ಞಾನವಿಕಾಸ ಕಾರ್ಯಕ್ರಮದ ಬಗ್ಗೆ ಸದಸ್ಯರು ಒಳ್ಳೆಯ ಅಭಿಪ್ರಾಯವನ್ನು ಮತ್ತು ಬದಲಾವಣೆಯಾಗುವ ಬಗ್ಗೆ ಆಬಿಪ್ರಾಯ ವ್ಯಕ್ತಪಡಿಸಿದರು.

ಕೊಪ್ಪಳ ತಾಲೂಕು ಸುಜಲ ಜಲ ಬಗ್ಗೆ-ಬೀದಿ ನಾಟಕ ಕಾರ್ಯಕ್ರಮ

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸುಜಲ ಜಲ ಬಗ್ಗೆ ಶುದ್ದಗಂಗಾ ಘಟಕ ಆವರಣದಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶುದ್ದಗಂಗಾ ಕುಡಿಯುವ ನೀರಿನ ಬಳಕೆಯಿಂದಾಗುವ ಪ್ರಯೋಜನೆಗಳು ಮತ್ತು ಕುಡಿಯುವ ನೀರಿನಲ್ಲಿ ಕರಗಿರುವ ಅಶುದ್ದ ಲವಣಾಂಶಗಳು ಹಾಗೂ ಇದರ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕಗಳ ಮೂಲಕ ತಿಳಿಸಿದರು.

ದೇವದುರ್ಗ ತಾಲೂಕು ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ-ಬಾಲಕಾರ್ಮಿಕ ಪದ್ದತಿ ಕುರಿತು

ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಿಂದ ಮಹಿಳೆಯರಿಗೆ ತಂದೆ-ತಾಯಿಗಳ ಜವಾಬ್ಧಾರಿ ಬಗ್ಗೆ ತಿಳಿದಿರುತ್ತದೆ ಹಾಗೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸಬೇಕು ಹಾಗೂ ತಂದೆ-ತಾಯಿ ಜವಾಬ್ದಾರಿಯಿಂದ ಶಾಲೆಗೆ ಕಳುಹಿಸಬೇಕೆಂದು ಅರಿವು ಮೂಡಿರುತ್ತದೆ . ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಬಾರದೆಂದು ಮತ್ತು ಹೆಣ್ಣು-ಗಂಡು ಇಬ್ಬರಿಗೂ ಸಮಾನವಾಗಿ ವಿದ್ಯಾಭ್ಯಾಸ ಮಾಡಿಸಬೇಕೆಂದು ಮಹಿಳೆಯರಿಗೆ ಅರಿವು ಮೂಡಿರುತ್ತದೆ.

ರೋಣ ತಾಲೂಕು ಅಧ್ಯಯನ ಪ್ರವಾಸ

ಶಿರಹಟ್ಟಿ/ಮುಂಡರಗಿ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು ಮುಖ್ಯವಾಗಿ ಮಹಿಳೆಯರಿಗಿರುವ ವಿಶೇಷ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಗೆಂದು ವಿವಿಧ ಇಲಾಖೆಗಳಾದ ಮಹಿಳಾ ಪೋಲಿಸ್ ಠಾಣೆ, ಜಿಲ್ಲಾ ನ್ಯಾಯಾಲಯ, ಮಹಿಳಾ ಸಾಂತ್ವನ ಕೇಂದ್ರ, ಸಮೃದ್ಧಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಭೇಟಿ ಮಾಡಿಸಿ ಮಾಹಿತಿ ನೀಡಲಾಯಿತು.

ಬಂಗಾರಪೇಟೆ ತಾಲೂಕು ಮಕ್ಕಳ ರಕ್ಷಣೆಯ ಕುರಿತು ಸ್ಥಳೀಯ ಶಾಲೆಗಳಲ್ಲಿ ಮಾಹಿತಿ ಕಾರ್ಯಕ್ರಮ

ತಾಲೂಕಿನ ಸ್ಥಳೀಯ ಶಾಲೆಗಳ ಮಕ್ಕಳಿಗೆ ಮಕ್ಕಳ ಮೇಲಾಗುವ ವಿವಿಧ ರೀತಿಯ ದೌರ್ಜನ್ಯದ ಕುರಿತಂತೆ ಮತ್ತು ದೌರ್ಜನ್ಯವಾದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Leave a Reply

Your email address will not be published. Required fields are marked *