ಡಿ.12: ಸ್ವಉದ್ಯೋಗ ಎನ್ನುವುದು ಹಾವು ಏಣಿ ಆಟದ ಹಾಗೆ. ಲಾಭ ನಷ್ಟಗಳನ್ನು ಸಮಾನವಾಗಿ ಸ್ವೀಕಾರ ಮಾಡಿದಾಗ ಮಾತ್ರ ಯಶಸ್ವೀ ಉದ್ಯಮಿ ಎನಿಸಿಕೊಳ್ಳಬಹುದು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|. ಎಲ್. ಎಚ್. ಮಂಜುನಾಥ್ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 5 ದಿನಗಳ ‘ಹೈನುಗಾರಿಕೆ’ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಸ್ವಉದ್ಯೋಗಿಗೆ ಇರಬೇಕಾದ ಗುಣಲಕ್ಷಣಗಳು ಹಾಗೂ ಉದ್ಯೋಗ ಮತ್ತು ಸ್ವಉದ್ಯೋಗಕ್ಕಿರುವ ವ್ಯತ್ಯಾಸಗಳ ಕುರಿತು ಮತ್ತು ಹೈನುಗಾರಿಕೆಯ ಪಂಚಸೂತ್ರಗಳನ್ನು ತಿಳಿಸಿದರು.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಜಿಲ್ಲೆಯ ಜಂಟಿ ಬಾಧ್ಯತಾ ಸಂಘ/ಸ್ವಸಹಾಯ ಸಂಘ/ಪ್ರಗತಿಬಂಧು ಸಂಘದ ಒಟ್ಟು 42 ಮಂದಿ ಭಾಗವಹಿಸಿ ಪ್ರಯೋಜನ ಪಡಕೊಳ್ಳುತ್ತಿದ್ದಾರೆ. ಸಮಾರಂಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾ ರಾವ್, ಸಂಸ್ಥೆಯ ಯೋಜನಾಧಿಕಾರಿ ಶ್ರೀಮತಿ ಜಯಂತಿ, ಉಪನ್ಯಾಸಕರಾದ ಶ್ರೀ ದೇವಪ್ಪ ಎಂ.ಕೆ, ಶ್ರೀ ಬಾಲಕೃಷ್ಣ ಹಾಗೂ ತರಬೇತಿ ಸಂಯೋಜಕ ಶ್ರೀ ರಾಜೇಶ್ ಉಪಸ್ಥಿತರಿದ್ದರು.