Agriculturesuccess storyWomen Empowerment

ಕೃಷಿ ಸಂವಹನ ತಂದಿತು ಆದಾಯದ ಚಿಂತನ

ಗ್ರಾಮೀಣ ಅಭಿವೃದ್ಧಿಯಾಗಬೇಕಾದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಉಪಯುಕ್ತ ಆಲೋಚನೆಗಳು, ವಿಚಾರಗಳ ವಿನಿಮಯ ಮಾಡಿದಾಗ. ಇದಕ್ಕಿಂತ ಮಹತ್ವದ ಪಾತ್ರ ಬೇರಾವುದು ಇಲ್ಲ. ಗ್ರಾಮಸ್ಥರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ, ಅನಕ್ಷರತೆ, ಬಡತನದಿಂದ ಇವುಗಳನ್ನು ಮೇಲೆ ಎತ್ತುವ ಕೆಲಸದಲ್ಲಿ ಒಬ್ಬ ವಿಸ್ತರಣಾ ಕಾರ್ಯಕರ್ತನು ತೊಡಗಿಸಿಕೊಳ್ಳಬೇಕಾಗಿರುವುದು ಅಗತ್ಯವನ್ನು ನಾವು ಒಪ್ಪಲೇ ಬೇಕು.

ಆಹಾರ ಧಾನ್ಯ, ಉದ್ಯೋಗವನ್ನು ಸೃಷ್ಠಿಸುವ ಕಾರ್ಖಾನೆ ಎಂದು ಗುರುತಿಸಬಹುದು. ಪ್ರಾಚೀನ ಮತ್ತು ಆಧುನಿಕ ಕೃಷಿಯ ನಡುವೆ ವ್ಯತ್ಯಾಸವಿಲ್ಲ. ಆರ್ಥ ಶಾಸ್ತ್ರಜ್ಞರ ಪ್ರಕಾರ, ಈ ಕೃಷಿಗೆ ಮೊದಲು ಯಾವ ರೀತಿ ಭೂಮಿ, ಕಾರ್ಮಿಕರು, ದುಡ್ಡು ಮತ್ತು ನಿರ್ವಹಣೆಯು 4 ಅಂಶಗಳ ಅಗತ್ಯವಿತ್ತೋ ಹಾಗೇಯೇ ಈ ಆಧುನಿಕ ಕೃಷಿಯ ಉತ್ಪಾದನೆಯಲ್ಲಿ ಹೊಸತನ ಪದ್ಧತಿಗಳಾದ ವೈಜ್ಞಾನಿಕತೆ ಮತ್ತು ತಂತ್ರಜ್ಞಾನಗಳ ಅಳವಡಿಕೆಯಲ್ಲಿ ತೊಡಗಿಸಿಕೊಂಡು ಸಾಗುವುದೇ 5ನೇ ಮುಖ್ಯ ಉದ್ದೇಶವಾಗಿದೆ.

ಹೀಗೆ ಕೃಷಿ ಉತ್ಪಾದನೆಯ ಕುರಿತು ಜ್ಞಾನ ಮತ್ತು ಮಾಹಿತಿಗಳನ್ನು ಹಂತ ಹಂತವಾಗಿ ಮುಟ್ಟಿಸುವ ಗುರುತರ ಜವಾಬ್ದಾರಿಯ ಅಗತ್ಯವನ್ನು ಮನಗಂಡು, ವಿಸ್ತರಣಾ ಕಾರ್ಯಕರ್ತನನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನಿರಂತರವಾಗಿ ಮಾಹಿತಿ ಮಾರ್ಗದರ್ಶನದೊಂದಿಗೆ ಬದಲಾವಣೆಯ ಗಾಳಿಯನ್ನು ಬೀಸುವಲ್ಲಿ ಎಲೆಯ ಮರೆಯ ಕಾಯಿಯಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕೃಷಿ ಕಾರ್ಯಕ್ರಮವು ಒಂದಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ಡಾವಣಗೇರಿ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹುಣಸಗಟ್ಟಿ ಗ್ರಾಮದ ನಿವಾಸಿ ಶ್ರೀಮತಿ ನಿರ್ಮಲಾರವರು ಕೂಡಾ ಒಬ್ಬ ಕೃಷಿಕರೆನ್ನಬಹುದು. ಇವರಿಗೆ ಇರುವ 3 ಎಕರೆ ಕೃಷಿ ಭೂಮಿಯಲ್ಲಿ ಕೇವಲ ಮೆಕ್ಕೆಜೋಳ ಮತ್ತು ರಾಗಿ ಬಿತ್ತನೆಯಲ್ಲಿ ತೊಡಗಿಸಿಕೊಂಡವರು. ಜೊತೆಗೆ ಏರುತ್ತಿರುವ ಮನೆಯ ಖರ್ಚು ಇವರಿಗೆ ಸವಾಲಾಗಿ ಹೊರೆಯಾಗುತ್ತಾ ಸಾಗಿತ್ತು. ವರ್ಷಾನುಗಟ್ಟಲೇ ಬೆಳೆ ತೆಗೆದೆರೂ ರೂ.100/- ಕೂಡಾ ಉಳಿಸಲಾಗದ ದುಃಸ್ಥಿತಿ. ಆದರೆ ಆರು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೊನ್ನಾಳಿ ತಾಲ್ಲೂಕಿಗೆ ಬಂದಾಗ ಎಲ್ಲರಂತೆ ಇವರು ಕೂಡಾ ಸಂಘ ಕಟ್ಟಿದರು.’ಸುಬ್ರಹ್ಮಣ್ಯ’ ಸ್ವ ಸಹಾಯ ಸಂಘಕ್ಕೆ ಸೇರಿದ ನಂತರ ತಮ್ಮ ಕುಟುಂಬಕ್ಕೆ ಆಧಾರವಾದ ಕೃಷಿ ಭೂಮಿಯಲ್ಲಿ ಬದಲಾವಣೆ ತರಲು ಸಾಧ್ಯವಾಯಿತು ಎಂಬೋದು ಇವರ ಅನುಭವದ ಮಾತು.

ಗುಲಾಬಿ ಕೃಷಿಯ ಗಂಧವೇ ಇರದ ಈ ಊರಿನಲ್ಲಿ ತಮಗೆ ಮಾಡಲು ಸಾಧ್ಯವಿಲ್ಲ ಅಂದುಕೊಂಡವರಿಗೆ ಸಾಧ್ಯ ಎಂದು ಯೋಜನೆಯಿಂದ ತೋರಿಸಿಕೊಟ್ಟರು. ಎನ್ನುವ ಬಗ್ಗೆ ಹೃತ್ಪೂರ್ವಕತೆಯನ್ನು ತೋರುತ್ತಾರೆ. ಸ್ವ ಸಹಾಯ ಸಂಘದಲ್ಲಿ ಸೇರಿದ ನಂತರ ಪಡೆದ ಮಾಹಿತಿಯಿಂದ ಉತ್ತಮ ಗುಲಾಬಿ ಕೃಷಿ ತೋಟವನ್ನು ಕೇವಲ ಅರ್ಧ ಎಕರೆಯಲ್ಲಿ ಮಾಡಿದ್ದಾರೆ. ಬೆಂಗಳೂರಿನಿಂದ ತಂದ ಬೇರನ್ನೂ ಪೂರ್ವದಲ್ಲಿಯೇ ನಾಟಿಗೆ ಸಿದ್ಧ ಪಡಿಸಿದ ಗುಂಡಿಯಲ್ಲಿ ಮಾಹಿತಿಯ ಜ್ಞಾನದೊಂದಿಗೆ ವ್ಯವಸ್ಥಿತವಾಗಿ ನಾಟಿ ಮಾಡಿ ಈಗ ನಿರಂತರ ಆದಾಯವನ್ನು ಪಡೆಯುತ್ತಿದ್ದಾರೆ. ಈಗ ಒಂದು ಗುಲಾಬಿಗೆ ರೂ.5/-ರಂತೆ ಮಾರಾಟ ಮಾಡಿ ದಿನಕ್ಕೆ ರೂ. 300 ರಿಂದ ರೂ.500ರ ಆದಾಯವನ್ನು ಪಡೆಯುತ್ತಿದ್ದಾರೆ. ಹೀಗೆ ವಾರ್ಷಿಕ ಕನಿಷ್ಟ ರೂ.1 ಲಕ್ಷ ಆದಾಯವನ್ನು ಪಡೆಯುವ ಹೆಮ್ಮೆ ಇವರಿಗೆ ಇದೆ. ಉಳಿದ ಬಾಕಿ 2.5 ಎಕರೆ ಭೂಮಿಯಲ್ಲಿ ಈಗ ಬಟನ್ ಗುಲಾಬಿ ಮತ್ತು ಅಡಿಕೆ ಮರವನ್ನು ನಾಟಿ ಮಾಡಿದ್ದು, ಇನ್ನೂ 6 ತಿಂಗಳಲ್ಲಿ ಲಕ್ಷಾನುಗಟ್ಟಲೇ ಲಾಭವು ಇವರ ಕೈಸೇರಲಿದೆ.

ಸ್ವ ಸಹಾಯ ಸಂಘದಲ್ಲಿ ಸೇರಿದ ನಂತರ ಹಲವಾರು ಕೃಷಿಗೆ ಪೂರಕ ಸಾಲವನ್ನು ಇವರು ಆರು ವರ್ಷದ ಈಚೆಗೆ ಪಡೆದುಕೊಂಡಿದ್ದಾರೆ. ಪ್ರಥಮದಲ್ಲಿ ಎರಡು ಆಕಳೊಂದಿಗೆ ಹೈನು ಮಾಡುತ್ತಿದ್ದ ಇವರು ಮತ್ತೆ 4 ಆಕಳುಗಳನ್ನು ಖರೀದಿಸಲು ಮತ್ತು ಎತ್ತಿನಗಾಡಿಗಾಗಿ ಕ್ರಮವಾಗಿ ರೂ.15 ಮತ್ತು 25 ಸಾವಿರವನ್ನು ಪಡೆದುಕೊಂಡಿದ್ದಾರೆ. ನಂತರ ಹೊರಗಡೆ ಕೈಸಾಲ ತೀರಿಸಲು ಯೋಜನೆಯಿಂದ ರೂ.50 ಸಾವಿರ ಯೋಜನೆಯಿಂದ ಪಡೆದುಕೊಂಡು ತೀರಿಸಿದ್ದಾರೆ. ಕೃಷಿಭೂಮಿಯಲ್ಲಿ ಬೋರ್ ಹಾಕಿಸಲದಕ್ಕೋಸ್ಕರ ರೂ.50 ಸಾವಿರವನ್ನು ಪಡೆದುಕೊಂಡು ಬೋರ್ ಹಾಕಿಸಿದ್ದಾರೆ. ಮಣ್ಣು,ಗೊಬ್ಬರ ಮತ್ತು ತೋಟಕ್ಕಾಗಿ ಭೂಮಿ ಹದಗೊಳಿಸಲು ರೂ.50 ಸಾವಿರ ಪಡೆದುಕೊಂಡು ಯೋಜನೆಯಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ಕೃಷಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಂಡಿರುವುದು ಇವರ ಕೃಷಿಯೋಜನೆಯ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ.

ಕೇವಲ 8ನೇ ವರ್ಗದ ವಿಧ್ಯಾಭ್ಯಾಸವನ್ನು ಮುಗಿಸಿಕೊಂಡಿರುವ 46 ವರ್ಷದ ನಿರ್ಮಲಾರವರ ಕೃಷಿಯ ಕಲೆ ಎಂತಹ ವಿದ್ಯಾವಂತರವರನ್ನು ನಾಚಿಸುವಂತಿರುವುದು. ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವಂತೆ ಇವರೊಟ್ಟಿಗೆ ಒಬ್ಬ ಮಗ, ಪತಿ ಕೈಜೋಡಿಸಿದ್ದಾರೆ. ಒಬ್ಬ ಮಗಳನ್ನು ಮದುವೆ ಮಾಡಿ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇನ್ನೂಬ್ಬ ಮಗನು ಎಸ್.ಎಸ್.ಎಲ್.ಸಿ.ವಿದ್ಯಾಭ್ಯಾಸವನ್ನು ಪಡೆದಿದ್ದು, ಒಂದು ಕಂಪನಿಯಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಕೃಷಿಯಲ್ಲಿ ತೋಟವನ್ನು ಮಾಡಿ ಉನ್ನತ ಸಾಧನೆ ಮಾಡುವ ಇವರ ಗುರಿ ನಿಜಕ್ಕೂ ಯುವ ಸೋಮಾರಿ, ಪಟ್ಟಣಕ್ಕೆ ವಲಸಿಗಾರಾಗುತ್ತಿರುವವರಿಗೆ ನಾಚಿಸುವಲ್ಲಿ ಆದರ್ಶನೀಯ ಎನ್ನಬಹುದು.

Leave a Reply

Your email address will not be published. Required fields are marked *