“ಶ್ರೀ ಮಾರ್ಕಂಡೇಶ್ವರ ಗ್ರಾಮಾಭಿವೃದ್ಧಿ ಸಮಿತಿ (ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ) ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ರೂ. 1,00,000/- ಧನಸಹಾಯ”
ಉಳವಿ ವಲಯದ ಚಿಟ್ಟೂರು ಗ್ರಾಮದ “ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನಿರ್ಮಾಣ” ಕಾರ್ಯದ ಬಗ್ಗೆ ಧರ್ಮಸ್ಥಳಕ್ಕೆ ಅರ್ಜಿ ಸಲ್ಲಿಸಿದ್ದು ಶ್ರೀ ಧರ್ಮಸ್ಥಳದಿಂದ ಪೂಜ್ಯರು ಮಂಜೂರು ಮಾಡಿದ ಧನಸಹಾಯ ರೂ.1,00,000/- ಮೊತ್ತದ ಡಿ.ಡಿಯನ್ನು ಸದ್ರಿ ಸಮಿತಿಯ ಅದ್ಯಕ್ಷರಾದ ಶ್ರೀ ಸುಭಾಶ್ಚಂದ್ರ, ಶ್ರೀ ಹೇಮಂತ್, ರಾಜು, ಗ್ರಾ. ಪಂ ಅಧ್ಯಕ್ಷಾರಾದ ಶ್ರೀಮತಿ ಎಲ್ಲಮ್ಮ, ಗ್ರಾ.ಪಂ ಸದಸ್ಯರಾದ ವೀರೇಶ್ ಗೌಡ್ರು ಇವರುಗಳ ನೇತೃತ್ವದಲ್ಲಿ, ಸೊರಬ ತಾಲೂಕಿನ ಮಾನ್ಯ ಯೋಜನಾಧಿಕಾರಿಯಾದ ಶ್ರೀ ರಮೇಶ್ ಪಿ.ಕೆ ರವರು ಹಸ್ತಾಂತರಿಸಿದರು. ಉಳವಿ ವಲಯದ ಮೇಲ್ವಿಚಾರಕರಾದ ಶ್ರೀ ಸಂತೋಷ್ರವರು, ಸೇವಾಪ್ರತಿನಿಧಿಗಳು ಪಾಲ್ಗೊಂಡಿದ್ದರು.