ಸೃಜನಶೀಲ ಕಾರ್ಯಕ್ರಮದಡಿ ಕಾಲೋನಿ ಅಭಿವೃದ್ಧಿ ಕಾರ್ಯಕ್ರಮ
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸೃಜನಶೀಲ ಕಾರ್ಯಕ್ರಮದ ಕಾಲೋನಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ 32 ಕುಟುಂಬದ ಸದಸ್ಯರಿಗೆ 1) ಆರೋಗ್ಯ ನೈರ್ಮಲ್ಯ, ಶುಚಿತ್ವ, 2) ಮಕ್ಕಳ ಶಿಕ್ಷಣ, 3) ಮಹಿಳೆಯರ ವಯಕ್ತಿಕ ಶುಚಿತ್ವದ ಬಗ್ಗೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯವರಿಂದ ಮಾಹಿತಿಯನ್ನು ನೀಡಲಾಯಿತು. ಅದೇ ರೀತಿ 32 ಕುಟುಂಬಗಳ 2 ಕಾಲೋನಿಗಳಲ್ಲಿ 3 ಬಟ್ಟೆ ತೊಳೆಯುವ ಕಲ್ಲನ್ನು ಹಾಕಿಸಿಕೊಡಲಾಯಿತು. ತಾಲುಕು ಪಂಚಾಯತಿಯವರು ನಳದ ವ್ಯವಸ್ಥೆಯನ್ನು ಸಹ ಮಾಡಿಕೊಟ್ಟಿರುತ್ತಾರೆ.
ಮಹಿಳಾ ಜ್ಞಾನವಿಕಾಸ ಅಧ್ಯಯನ ಪ್ರವಾಸ
ಸೊರಬ ತಾಲೂಕಿನ ಮಹಿಳಾ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸಿವಿಲ್ ಹಾಗೂ ಕ್ರಿಮಿನಲ್ ಕೋರ್ಟ್, ಪೋಲೀಸ್ ಸ್ಟೇಶನ್, ಸರ್ಕಾರಿ ಆಸ್ಪತ್ರೆಗಳು ಸಾಂತ್ವನ ಕೇಂದ್ರದ ಭೇಟಿ ಮಾಡಲಾಯಿತು. ಕೋರ್ಟ್ನಲ್ಲಿ ಗೌರವಾನ್ವಿತ ನ್ಯಾಯಾಧೀಶರು ಮಾಹಿತಿಯನ್ನು ನೀಡಿದರು.