ಸ್ವಚ್ಛತೆ, ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಬೇಡಿಕೆ ಹೆಚ್ಚು: ಕೇಶವ ಗೌಡ, ನಿರ್ದೇಶಕರು, ಗ್ರಾಮಾಭಿವೃದ್ಧಿ ಯೋಜನೆ
ಬೆಳ್ತಂಗಡಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕ ಸೇವೆ ಉತ್ತಮವಾಗಿದ್ದಲ್ಲಿ ಉದ್ಯಮದಲ್ಲಿ ಸಫಲತೆಯನ್ನು ಕಾಣಬಹುದು. ಪ್ರಸ್ತುತ ಜನರು ಆಹಾರ ತಯಾರಿಕೆಯಲ್ಲಿ ಸ್ವಚ್ಛತೆಯ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಉತ್ಪಾದಕರು ಇದರ ಕಡೆ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ ಎಂದು ಯೋಜನೆಯ ನಿರ್ದೇಶಕ ಕೇಶವ ಗೌಡ ಹೇಳಿದರು. ಅವರು ಅವರು ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ ಹೊಟೇಲ್ ಉದ್ಯಮ ಮತ್ತು ಬೇಕರಿ ಉತ್ಪನ್ನಗಳ ತಯಾರಿ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ತರಬೇತಿಯು ಉಚಿತವಾಗಿ ನಡೆಯುತ್ತಿದ್ದು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಜಿಲ್ಲೆಯ ಜಂಟಿ ಬಾಧ್ಯತಾ ಸಂಘ/ಸ್ವಸಹಾಯ ಸಂಘ/ಪ್ರಗತಿಬಂಧು ಸಂಘದ ಒಟ್ಟು 26 ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಯೋಜನಾಧಿಕಾರಿ ಜಯಂತಿ, ತರಬೇತಿ ಸಂಯೋಜಕರಾದ ದೇವಪ್ಪ ಎಂ.ಕೆ, ರಾಜೇಶ್ ಉಪಸ್ಥಿತರಿದ್ದರು.