ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲ್ಲಿ ದಿನಾಂಕ 06.02.2018 ರಿಂದ 09.02.2018ವರೆಗೆ ವ್ಯಾಪಾರ ಮತ್ತು ಉದ್ದಿಮೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗಿದ್ದು ಸದರಿ ತರಬೇತಿಯ ಅಭ್ಯರ್ಥಿಗಳನ್ನು ದಿನಾಂಕ 08.02.2018ರಂದು ಕ್ಷೇತ್ರ ಭೇಟಿಗಾಗಿ ಧಾರವಾಡ ಸಪ್ತಾಪೂರ, ಚಿಕ್ಕಮಲ್ಲಿಗವಾಡ, ಟಿಕಾರೆ ನಗರ ಮತ್ತು ಹುಬ್ಬಳ್ಳಿಯ ನವನಗರದ ಕಿರಾಣಿ ವ್ಯಾಪಾರ, ಬಟ್ಟೆ ವ್ಯಾಪಾರ, ಹೋಳಿಗೆ ವ್ಯಾಪಾರ , ಸ್ಟೇಶನರಿ ವ್ಯಾಪಾರ, ಜೆರಾಕ್ಸ ಮತ್ತು ತಿಂಡಿ ತಿನಿಸು ವ್ಯಾಪಾರಿಗಳ ಭೇಟಿ ಮಾಡಿಸಲಾಗಿದ್ದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 18 ಜನ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಉದ್ಯಮಶೀಲತೆ, ಉದ್ಯಮ ನಿರ್ವಹಣೆ, ಗುಣಮಟ್ಟಕ್ಕೆ ಆದ್ಯತೆ, ಮಾರುಕಟ್ಟೆಯ ತಂತ್ರಗಳು, ಬಂಡವಾಳದ ಆಯ್ಕೆ, ಬಂಡವಾಳದ ಜೋಡಣೆ, ಗ್ರಾಹಕ ಸಂಪರ್ಕದೊಂದಿಗೆ ನಿರಂತರತೆ ಕಾಯ್ದುಕೊಳ್ಳುವ ಕುರಿತು ಮಾಹಿತಿ ಪಡೆದುಕೊಂಡಿರುತ್ತಾರೆ.
“ವ್ಯಾಪಾರ ಮತ್ತು ಉದ್ದಿಮೆ” ಕೌಶಲ್ಯಾಭಿವೃದ್ಧಿ ತರಬೇತಿಯ ಕ್ಷೇತ್ರ ಭೇಟಿ
