ಜಗಳೂರು ತಾಲ್ಲೂಕು ಮುಸ್ಟೂರು ಗ್ರಾಮದಲ್ಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿ ಧಾನ್ಯ ಬೆಳೆಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ||ಬ್ರ|| ರುದ್ರಮುನಿ ಶಿವಚಾರ್ಯ ಸ್ವಾಮಿಗಳು ವಹಿಸಿ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಮುಸ್ಟೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಕೆಂಚಮ್ಮ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾವಣಗೆರೆ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಜಯಂತ್ ಪೂಜಾರಿಯವರು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಜಗಳೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ರಾಗಿ, ನವಣೆ. ಸಜ್ಜೆ, ಜೋಳ ಬೆಳೆಗಳನ್ನು ಬೆಳೆದಿರುತ್ತಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲಾ ಸಿರಿ ಧಾನ್ಯ ಬೆಳೆಗಳನ್ನು ಸಮಗ್ರ ರೂಪದಲ್ಲಿ ಬೆಳೆಯುವ ಬಗ್ಗೆ ತಿಳಿಸಿದರು. ಹಾಗೂ ಸಂಪೂರ್ಣ ಸಾವಯವ ಕೃಷಿ ಬೆಳೆಗೆ ಹೆಚ್ಚಿನ ಒತ್ತು ನೀಡಿದಲ್ಲಿ ಪ್ರಕೃತಿ, ಪ್ರಾಣಿ-ಪಕ್ಷಿಗಳು ಮತ್ತು ಮಾನವ ಎಲ್ಲಾ ರೀತಿಂದಲೂ ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಜನಾಧಿಕಾರಿಗಳಾದ ಗಂಗಾಧರ್. ಡಿ, ಸಾವಯವ ಕೃಷಿಕರಾದ ಶ್ರೀ ಈಶ್ವರ್ ಸಜ್ಜನ್, ಮಂಜಲಿಂಗಪ್ಪ ನಿವೃತ್ತ ಪ್ರಾಚಾರ್ಯರು, ತಾಲ್ಲೂಕು ಕೃಷಿ ಅಧಿಕಾರಿಗಳಾದ ಶಿವಾನಂದ್ ಹಾಗೂ ವಲಯ ಮೇಲ್ವಿಚಾರಕರಾದ ಶೇಖರ್ ಗೌಡ ,ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಗಣ್ಯರು ಮತ್ತು ಪ್ರಗತಿ ಬಂಧು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತಿರಿದ್ದರು.