ಜಗಳೂರು ತಾಲೂಕು ಸೂರಡ್ಡಿಹಳ್ಳಿ ಎಂಬ ಪುಟ್ಟ ಗ್ರಾಮದ ನಂದಿನಿ ಕೋಂ ವೀರೇಶ್ ಎಸ್.ಡಿ. ಇವರದು 2 ಮಕ್ಕಳ ಪುಟ್ಟ ಸಂಸಾರ. ವಯಸ್ಸು 29, ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ನಂದಿನಿಯವರು ಕ್ರಿಯಾಶೀಲ ಹೆಣ್ಣು, ನಾಯಕತ್ವದ ಗುಣ ಹೊಂದಿರುವ ಇವರು ಸಂಸಾರಕ್ಕೆ ಪತಿ ಜೊತೆ ಸಾತ್ಕೊಟ್ಟು ಏನಾದರೊಂದು ಕೆಲಸ ಮಾಡಲೇ ಬೇಕು, ಖಾಲಿ ಕುಳಿತುಕೊಳ್ಳುವುದು ಸೋಮಾರಿತನ ಎಂದು ತಿಳಿದ ಇವರು ಹಾಲಿನ ಡೈರಿಯನ್ನು ನಡೆಸುತ್ತಾ ಜೊತೆಯಲ್ಲಿ ಹಿಟ್ಟಿನ ಗಿರಣಿಯನ್ನು ನಡೆಸುತ್ತಿದ್ದರು. ಇದೆಲ್ಲದರ ನಡುವೆ ಸಮಯವನ್ನು ಹೊಂದಿಸಿಕೊಂಡು ಧರ್ಮಸ್ಥಳ ಸಂಸ್ಥೆಯ ಸೇವಾಪ್ರತಿನಿಧಿಯಾಗಿ ಯೋಜನೆಯ ನಿಯಮಾನುಸಾರ 3 ವರ್ಷ ಶಿಸ್ತಿನಿಂದ ಕೆಲಸವನ್ನು ಮಾಡಿದ ಪಲವಾಗಿ ಹಾಗೂ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದರಿಂದ ಇವರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕಯಾಗುತ್ತಾರೆ.
ವೀರಭದ್ರೇಶ್ವರ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾಗಿ ಸೇರಿಕೊಂಡು. ಕೇಂದ್ರದ ಸ್ವ-ಉದ್ಯೋಗ ಮಾಹಿತಿಯಿಂದ ಪ್ರಾರಂಭದಲ್ಲಿ ರೂ.10000/- ಗ್ಯಾಸ್ ಅಂಗಡಿಗೆ, ರೂ.15000/- ಸಾಲ ಮರುಪಾವತಿಗೆ, ರೂ.50000/- ಅಗರಬತ್ತಿ ತಯಾರಿಕೆಗೆ ಪ್ರಗತಿನಿಧಿ ಪಡೆದುಕೊಂಡು. ರೂ.1,75,000/- ಮೊತ್ತದ ಅಗರಬತ್ತಿ ಮಿಷಿನ್ ಖರೀದಿ ಮಾಡಿದರು. ಮೊದಲು ರೂ.50000/- ಮೆಟಿರಿಯಲ್ಸ್ ಖರೀದಿಸಿ ಮಾಡಿ, ಅಗರಬತ್ತಿ ತಯಾರಿಸಿ ಹೋಲ್ ಸೇಲ್ ಅಂಗಡಿಗೆ ಮಾರುತಿದ್ದರು. ನಂತರ ಹೋಲ್ ಸೇಲ್ ಅಂಗಡಿಗೆ ಕೊಟ್ಟರೆ ಕಡಿಮೆ ಲಾಭವೆಂದು ತಿಳಿದು. ನಂದಿನಿ ಅಗರಬತ್ತಿ ಹೆಸರಿನಲ್ಲಿ ಸ್ವಂತ ಪ್ರೋಡಕ್ಟ್ ಹೆಸರಿನಲ್ಲಿ ಹಳ್ಳಿ ಹಳ್ಳಿಗಳ ಅಂಗಡಿಗಳಿಗೆ ವ್ಯಾಪಾರವನ್ನು ಮಾಡುತ್ತಾರೆ. ವಾರಕ್ಕೆ 80 ಕೆ.ಜಿ. ಅಗರಬತ್ತಿ ಬೇಡಿಕೆಯಿದ್ದು, 1 ಕೆ.ಜಿ.ಗೆ ರೂ.58/- ಖರ್ಚಿದ್ದು, ರೂ.150/-ಕ್ಕೆ ಮಾರಾಟ ಮಾಡುತ್ತಾರೆ. ಬೆಳಗ್ಗೆ 6.00 ಗಂಟೆಯಿಂದ 7.00 ಗಂಟೆಯವರೆಗೆ ಹಾಲಿನ ಡೈರಿ ನಡೆಸಿ ನಂತರ 7.00 ಗಂಟೆಯಿಂದ 8:00 ಚಿm ವರೆಗೆ ಹಿಟ್ಟಿನಗಿರಾಣಿ ನಡುಸುತ್ತಾರೆ. ನಂತರ ಮನೆ ಕೆಲಸ ಮುಗಿಸಿ ನಂತರ ಬಿಡುವೇಳೆಯಲ್ಲಿ ಅಗರಬತ್ತಿಯನ್ನು ಮಾಡಿ ತಿಂಗಳಿಗೆ ಒಟ್ಟು 35000/- ರಷ್ಟು ಆದಾಯ ಗಳಿಸುತ್ತಾರೆ.
ಇದೆಲ್ಲದರ ಜೋತೆಗೆ ಗ್ರಾಮಪಂಚಾಯ್ತಿ ಸದ್ಯರಾಗಿರುವ ಇವರು ಕೆಲಸದ ಒತ್ತಡದ ನಡುವೆಯು ತಮ್ಮ ಹಳ್ಳಿಯ ಜನರ ಕಷ್ಟಗಳಿಗೆ ಸ್ಪಂದಿವುದನ್ನು ಹಾಗು ಯೋಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮರೆತಿಲ್ಲ.ನನ್ನ ಈ ಬೆಳವಣಿಗೆಗೆ ಧೈರ್ಯ ತುಂಬಿ ನನ್ನನ್ನು ಗುರುತಿಸಿ ಸ್ವ-ಉದ್ಯೋಗ ಮಾಡಬೇಕು ಎಂಬ ಹಂಬಲಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿರುವ ಧರ್ಮಸ್ಥಳ ಯೋಜನೆಗೆ ಸದಾ ಋಣಿಯಾಗಿರುತ್ತೇನೆ ಎನ್ನುತ್ತಾರೆ ನಂದಿನಿ.