ಮೈಸೂರು ಫೆಬ್ರವರಿ 07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ನ ಪ್ರಾಯೋಜಿತ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ “ನಮ್ಮೂರು-ನಮ್ಮ ಕೆರೆ”, ನೀರಿನ ಮೂಲಗಳನ್ನು ರಕ್ಷಿಸಲು ಮತ್ತು ಮುಂಬರುವ ಪೀಳಿಗೆಗೆ ಅವುಗಳನ್ನು ಒಪ್ಪಿಸುವ ಮಾನವ ಜವಾಬ್ದಾರಿ ಎಂದು ಆಶಿಸಿರುವ ಪೂಜ್ಯ ಡಾ|| ವಿರೇಂದ್ರ ಹೆಗ್ಗಡೆರವರ ಕನಸಿನ ಯೋಜನೆ “ನಮ್ಮೂರು-ನಮ್ಮ ಕೆರೆ”. ಬತ್ತಿಹೋದ ಕೆರೆಗಳಿಗೆ ಸ್ಥಳೀಯರ ಸಹಯೋಗದೊಂದಿಗೆ ಕೆರೆಗಳನ್ನು ಪುನಸ್ರ್ಥಾಪಿಸುವ ಕಾರ್ಯಕ್ರಮವಾಗಿದೆ, ಜೊತೆಜೊತೆಗೆ ಇತರೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ವಿವಿಧ ಕಾಮಗಾರಿಗಳ ಪರಿವೀಕ್ಷಣೆ, ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅನುಸಾರವಾಗಿ ಹೊಸದಾಗಿ ಆಯ್ಕೆಗೊಂಡ ಅಭಯಂತರರಿಗೆ ಕೆರೆಗಳನ್ನು ಪುನಶ್ಚೇತನಗಳಿಸುವ ನಿಟ್ಟಿನಲ್ಲಿ “ಸಮುದಾಯ ಅಭಿವೃದ್ಧಿ ಅಭಿಯಂತರರ ತರಬೇತಿ”ಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯನ್ನು ಶ್ರೀಯುತ ವಿಜಯಕುಮಾರ ನಾಗನಳ, ನಿರ್ದೇಶಕರು, ಮೈಸೂರು ಜಿಲ್ಲೆ ಹಾಗೂ ಶ್ರೀಯುತ ವಿಲಿಯಂ ಡಿಸೋಜ, ಕಾರ್ಯನಿರ್ವಾಹಕ ನಿರ್ದೇಶಕರು, ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ, ಮೈಸೂರು ಇವರು ಉದ್ಘಾಟಿಸಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ಯೋಜನೆಯಾಗಿದ್ದು, ಪ್ರಮುಖವಾಗಿ ಕೆರೆ ದುರಸ್ತಿ, ಶುದ್ಧಗಂಗಾ, ಯೋಜನೆಯ ಕಟ್ಟಡ ಕಾಮಗಾರಿ ಮುಂತಾದ ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಿಸುವಲ್ಲಿ ಅಭಿಯಂತರರ ಪಾತ್ರ ಹೆಚ್ಚಿನದಾಗಿದ್ದು, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಿಸುವಲ್ಲಿ ಈ ತರಬೇತಿಯು ಹೆಚ್ಚಿನ ಸಹಕಾರಿಯಾಗಲಿದೆ ಎಂದು ಆಶಿಸಿದರು.
ದಿನಾಂಕ: 07.02.2018 ರಿಂದ 12.02.2018ರವರೆಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು 6 ದಿನದ ಈ ತರಬೇತಿಯಲ್ಲಿ ಹೊಸದಾಗಿ ಆಯ್ಕೆಗೊಂಡಿದ್ದ 7 ಅಭಿಯಂತರರು ಭಾಗವಹಿಸಿದ್ದು, ತರಬೇತಿಯಲ್ಲಿ ಮಾಹಿತಿ, ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪೂರ್ಣಗೊಳಿಸಲಾಯಿತು.