ಬಾಳೆ ಕೃಷಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಪಡೆದಿದ್ದಾರೆ. ಇತ್ತೀಚೆಗೆ ಮನೆ ನಿರ್ಮಾಣ ಮಾಡುತ್ತಿದ್ದು ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ನೆರವು ಪಡೆದಿದ್ದಾರೆ.
ಅವಿಭಕ್ತ ಕುಟುಂಬಗಳಿದ್ದರೆ ತಮ್ಮ ಮಕ್ಕಳ ಭವಿಷ್ಯದ ನೆಪವೊಡ್ಡಿ ಒಬ್ಬೊಬ್ಬರಾಗಿ ವಿಭಕ್ತಗೊಳ್ಳುವ ಕುಟುಂಬಗಳೇ ಜಾಸ್ತಿ. ಆದರೆ ಹೊಂದಾಣಿಕೆಯಿಂದ ಕುಟುಂಬ ನಿರ್ವಹಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಎಲ್ಲರೂ ಸಂತಸದಿಂದ ಇರುವಂತೆ ಸರಿದೂಗಿಸಿಕೊಂಡು ಹೋಗುತ್ತಿರುವ ಈರಮ್ಮ ಇವರ ಸಾಧನೆ ಮಾದರಿಯೇ ಸರಿ.