NewsTrainingWomen Empowerment

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಸಿದ್ಧ ಉಡುಪು ತಯಾರಿಕಾ’ ತರಬೇತಿ

ಮೈಸೂರು ಮಾರ್ಚ್ 26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದು ತತ್ಸಂಬಂಧ ದಿನಾಂಕ:26.03.2017 ರಿಂದ 30.03.2017 ರವರೆಗೆ ‘ಸಿದ್ಧ ಉಡುಪು’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಿದ್ಧ ಉಡುಪು ತಯಾರಿಕಾ ತರಬೇತಿಯ ತೃತೀಯ ತಂಡವನ್ನು ಶ್ರೀಯುತ ಸೋಮನಾಥ್, ಆಡಳಿತ ಯೋಜನಾಧಿಕಾರಿಗಳು, ಮೈಸೂರು ಪ್ರಾದೇಶಿಕ ಕಛೇರಿ, ಇವರು ಉದ್ಘಾಟಿಸಿ ಈ ಹಿಂದಿನ ಹಲವಾರು ತರಬೇತಿಗಳನ್ನು ಅನುಪಾಲನಾ ವರದಿಯಂತೆ ಕೇವಲ 5 ದಿನಗಳಲ್ಲೇ ಹಲವಾರು ಬಗೆ ಬಗೆಯ ಡಿಸೈನ್‍ಗಳನ್ನು ಕಲಿತು ಅವುಗಳಿಂದ ಸ್ವ ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವವರ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದ್ದು, ಈ ರೀತಿ ತಲ್ಲೀನರಾಗಿ ಕಲಿತಲ್ಲಿ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗುವ ಉದ್ಯಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಮ್ಮದೇ ಆದ ‘ಸ್ವ-ಉದ್ಯೋಗ’ವನ್ನು ಕಂಡುಕೊಳ್ಳುವಲ್ಲಿ ಈ ತರಬೇತಿಯು ಧೈರ್ಯವನ್ನು ನೀಡಬಹುದಾಗಿದೆ. ನೈಸರ್ಗಿಕವಾಗಿ ಮಹಿಳೆಯರಿಗೆ ಹೆಚ್ಚಿನ ಕಲಿಕಾ ಆಸಕ್ತಿ ಜೊತೆಗೆ ಕಲಿತ ವಿಚಾರಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿದ್ದು, ಇಂತಹ ಅಸಾಮಾನ್ಯ ಶಕ್ತಿಯನ್ನು ಸಾಧನೆ ಮಾಡುವಲ್ಲಿ ಇಲ್ಲವೇ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳುವಲ್ಲಿ ಬಳಸಿಕೊಳ್ಳಬಹುದಾಗಿದೆ. ಈ ರೀತಿಯ ಬೆಳವಣಿಗೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದ್ದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸ್ವ-ಸಹಾಯ ಸಂಘಗಳ ಆಶಯವೂ ಇದಾಗಿದ್ದು ಸದೃಢ ಕುಟುಂಬ, ಉತ್ತಮ ಸಮಾಜ ನಿರ್ಮಾಣಕ್ಕೆ ಇವೆಲ್ಲವೂ ಪ್ರಾರಂಭಿಕ ಹೆಜ್ಜೆಗಳಾಗಿದ್ದು ಸಿಗುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಪ್ರಯತ್ನ ಪಟ್ಟು ಗೆಲ್ಲುವ ಹೆಜ್ಜೆಯನ್ನಿಡಬೇಕಾಗಿ ಆಶಿಸಿದರು.
ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯು ತನ್ನ 4 ತರಬೇತಿ ಕೇಂದ್ರಗಳ ಮೂಲಕ 16 ವಿಷಯಗಳೊಂಡ ಸ್ವ-ಉದ್ಯೋಗಾಧಾರಿತ ತರಬೇತಿಗಳನ್ನು ಆಯೋಜಿಸುತ್ತಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಮ್ಮರವಾಗಿ ಬೆಳೆಯುತ್ತಿದ್ದು, ಇತರ ಸಂಸ್ಥೆಗಳಲ್ಲಿನ ಕೆಲಸದ ಅವಕಾಶಗಳಿಗೆ ಕಾದು ಕುಳಿತುಕೊಳ್ಳದೆ ತನ್ನ ವಿವೇಚನೆಯಿಂದ ಸ್ವ-ಉದ್ಯೋಗವನ್ನು ನಿರ್ವಹಿಸುವಲ್ಲಿ ಹೆಜ್ಜೆಯಿಡಬೇಕಾಗಿದೆ. ಹಾಗೇಯೇ ಇಂತಹ ಉದ್ಯೋಗಗಳಿಗೆ ಬಹು ಬೇಡಿಕೆ ಇದ್ದು ಪ್ರಚಲಿತವಾಗಿ ಅವಶ್ಯವಿರುವ ‘ಸಿದ್ಧ ಉಡುಪು ತಯಾರಿಕೆ’ಗೆ ಉತ್ತಮ ಬೇಡಿಕೆಯಿದ್ದು ಈ ಅವಕಾಶವನ್ನು ಅವಶ್ಯವಾಗಿ ಬಳಸಿಕೊಳ್ಳಬಹುದಾಗಿದೆ. ಯಾವುದೇ ಕೆಲಸವಾಗಲಿ ಯಶಸ್ಸಿನ ಮೆಟ್ಟಿಲ್ಲನ್ನು ಹತ್ತಬೇಕಾದಲ್ಲಿ ‘ಆಸಕ್ತಿ’ ಎಂಬುದು ಬಹುಮುಖ್ಯ ಆದ ಕಾರಣ ಆಸಕ್ತಿದಾಯವಾಗಿ ಈ ತರಬೇತಿಯಲ್ಲಿ ತೊಡಗಿಸಿಕೊಳ್ಳುವಂತೆ ತರಬೇತಿಯ ಸಮಗ್ರ ರೂಪುರೇಷೆಯ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್, ಟೈಲರಿಂಗ್ ಶಿಕ್ಷಕಿಯಾದ ಶ್ರೀಮತಿ ಶ್ವೇತಾ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಯಶೋಧಾರವರು ಉಪಸ್ಥಿತರಿದ್ದರು.
5 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 15 ಮಂದಿ ಭಾಗವಹಿಸುತ್ತಿದ್ದು, ಮಾಹಿತಿ, ವಿವಿಧ ರೀತಿಯ ಬ್ಲೌಸ್ ತಯಾರಿಕೆ, ಅವುಗಳ ಮೌಲ್ಯವರ್ಧನೆ, ಕಟ್ಟಿಂಗ್ ವಿಧಾನಗಳು, ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಬಟ್ಟೆಯ ಮಾದರಿಗಳ ಕುರಿತಾದ ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಸ್ವ ಉದ್ಯೋಗವನ್ನು ನಿರ್ವಹಿಸುತ್ತಿರುವ ಉದ್ಯಮಿಗಳ ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *