NewsTechnology

ಮೊಬೈಲ್ ಸಂದೇಶಗಳೇ. . . ಒಂದ್ ನಿಮಿಷ . . . .

ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಬಳಕೆ ವ್ಯಾಪಕವಾಗಿ ಬೆಳೆದು ಬಂದು, ಕುಟುಂಬ ಸದಸ್ಯರು, ಗೆಳೆಯ/ ಗೆಳತಿಯರು ಸನಿಹ ಇಲ್ಲದಿದ್ದರೂ ಪರವಾಗಿಲ್ಲಾ ಮೊಬೈಲ್ ಇಲ್ಲದಿದ್ದರೆ ಸಾಧ್ಯವಿಲ್ಲವೆನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣ ಮಾಡುವಾಗ, ತಿರುಗಾಡುವಾಗ ಕೈಯಲ್ಲೇ ಇದ್ದು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಎಲ್ಲರೂ ತಮ್ಮ ಪಕ್ಕದಲ್ಲಿಯೇ ಇಟ್ಟುಕೊಂಡು “ನೀನಿಲ್ಲದೆ ನಾನಿಲ್ಲ” ಎಂಬಂತೆ, ಮೊಬೈಲ್ ಇಂದು ನಮ್ಮನ್ನೆಲ್ಲಾ ಆವರಿಸಿಕೊಂಡುಬಿಟ್ಟಿದೆ. ಸ್ಮಾರ್ಟ್ ಫೋನ್ ಚಾಲ್ತಿಗೆ ಬಂದ ಮೇಲಂತೂ ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಅದನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಒದಗಿದೆ. ಅದಕ್ಕೆ ಸರಿಯಾಗಿ ಟೆಲಿಫೋನ್ ಕಂಪೆನಿಗಳು ಅತ್ಯಾಕರ್ಷಕ ಪ್ಲಾನ್ ಗಳನ್ನು ಚಾಲ್ತಿಗೆ ತಂದು, ಇಂಟರ್ನೆಟ್ ಉಚಿತ, ಕರೆ ಉಚಿತ, 4G ಡಾಟ ನೀಡಿ ಮೊಬೈಲ್ ಬಳಕೆ ವ್ಯಾಪಕವಾಗಿ ಹರಡುವಂತೆ ಮಾಡಿರುತ್ತಾರೆ. ತಂತ್ರಜ್ನಾನದ ಅಭಿವೃದ್ದಿಯಾದಂತೆ ಹಲವಾರು ಮೊಬೈಲ್ ಅಪ್ಲಿಕೇಶನ್‍ಗಳು ತರ ತರಹದ ವ್ಯವಹಾರಗಳನ್ನು ಮೊಬೈಲ್ ಯಂತ್ರದ ಮುಲಕ ಮಾಡುವಲ್ಲಿ ಸಹಕಾರಿಯಾಗಿದೆ. ಬ್ಯಾಂಕ್ ವ್ಯವಹಾರ, ವಸ್ತುಗಳ ಖರೀದಿ ಮತ್ತು ಮಾರಾಟ, ಪ್ರಯಾಣಕ್ಕೆ ಟಿಕೆಟ್ ಬುಕ್ಕಿಂಗ್, ನ್ಯೂಸ್ ಅಪ್‍ಡೇಟ್‍ಗಳು, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಿಗಳ ಜೊತೆ ಸಂಪರ್ಕ, ಹೀಗೆ, ಇಲ್ಲಿ ಎಲ್ಲವನ್ನೂ ಉಲ್ಲೆಖಿಸಲು ಅಸಾಧ್ಯ.
ಎಲ್ಲವೂ ಚೆನ್ನಾಗಿದ್ದರೆ ಸರಿ. ಆದರೆ “ಎಲ್ಲದರಲ್ಲಿಯೂ ಒಳಿತೂ ಇದೆ, ಕೆಡುಕೂ ಇದೆ” ಎಂಬಂತೆ ಮೊಬೈಲ್ ಆವಿಷ್ಕಾರಗಳಿಂದಾಗಿ ನೂರಾರು ವ್ಯವಸ್ಥೆಗಳು ಮೊಬೈಲ್ ಮೂಲಕ ಮಾಡಬಹುದಾದ್ದರಿಂದ, ಮೊಬೈಲ್ ಬಳಕೆದಾರರ ವೈಯುಕ್ತಿಕ ಮಾಹಿತಿಯು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕವಾಗಿ ಲಭ್ಯವಿರುವುತ್ತದೆ. ಇದರಿಂದಾಗಿ ದುರುದ್ದೇಶ ಪೂರ್ವಕವಾಗಿ ಬ್ಲಾಂಕ್ ಕರೆಗಳನ್ನು ಮಾಡುವುದು, ಮೊಬೈಲ್ ಸಂದೇಶಗಳನ್ನು ಕಳುಹಿಸುವುದು, ಅಸಹ್ಯ ಚಿತ್ರಗಳನ್ನು ಕಳುಹಿಸುವುದು, ಲಾಟರಿ ಬಹುಮಾನ ಬಂದಿದೆ ಎಂದು ಸಂದೇಶ ಕಳುಹಿಸುವುದು, ಕರೆ ಮಾಡಿ ಮನವೊಲಿಸುವ ಮಾತುಗಳನ್ನಾಡಿ ವೈಯುಕ್ತಿಕವಿಚಾರಗಳನ್ನು ಪಡೆದುಕೊಂಡು ಸ್ನೇಹ ಬೆಳೆಸಲು ಪ್ರಯತ್ನಿಸುವುದು, ಅನಗತ್ಯ ಆಫರ್ ಗಳನ್ನೂ ಕಳುಹಿಸುವುದು ಇತ್ಯಾದಿ ವಿಚಾರಗಳಿಂದ ಮುಗ್ದ ಮನಸ್ಸಿನ ಹೆಣ್ಣು ಮಕ್ಕಳು, ಮಹಿಳೆಯರು, ಯುವಕರು ಮೋಸದ ಜಾಲದಲ್ಲಿ ಬೀಳುವುದೇ ತಿಳಿಯುವುದಿಲ್ಲ. ಈ ಹಿಂದೆ ಈ ಸಂದೇಶಗಳು ಇಂಗ್ಲಿಷ್ ಭಾಷೆಯಲ್ಲಿ ಬರುತ್ತಿದ್ದವು. ಆದರೆ ಈಗ ಕನ್ನಡ (ಸ್ಥಳೀಯ)ಭಾಷೆಯಲ್ಲಿ ಬರುತ್ತಿದ್ದು ಗ್ರಾಮೀಣ ಭಾಗದ ಜನತೆಯನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ.

ಕೆಲವೊಂದು ಸಂದೇಶಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. (* ಎಂದರೆ ಸಂದೇಶದಲ್ಲಿ ನಮೂದಿಸಿರುವ ಸಂಪರ್ಕ ಸಂಖ್ಯೆ)
ಆತ್ಮೀಯ ಗ್ರಾಹಕರೇ, ವಿಶೇಷ ಆಫರ್ ಇದೆ. ******** ಸಂಖ್ಯೆಗೆ ಕರೆ ಮಾಡಿ ಮತ್ತು ಕಾರನ್ನು ಗೆಲ್ಲಿರಿ.

ಅಭಿನಂದನೆಗಳು!! ನಿಮ್ಮ ಮೊಬೈಲ್ ಸಂಖ್ಯೆ ಗೆ ಹೊಸ ವಿಶೇಷ ಆಫರ್ ಗಳಿವೆ, ಡಯಲ್ ಮಾಡಿ *******.
ವಾಟ್ಸಾಪ್ ************(ನಿಮ್ಮ ಮೊಬೈಲ್ ನಂಬರ್ ಇರುತ್ತದೆ) ಈಗ ಕರೆ ಮಾಡಿ ***********.
ರಮ್ಮಿ ಆಟ ಆಡಿ ಮೊತ್ತವನ್ನು ಗೆಲ್ಲಿರಿ. ಬೋನಸ್ ಗಾಗಿ ಈ ******** ವೆಬ್ ಲಿಂಕನ್ನು ಕ್ಲಿಕ್ ಮಾಡಿ.
ಗ್ರಾಹಕರೇ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಬೈಕ್ ನ್ನು ಗೆಲ್ಲಿರಿ. ಕರೆ ಮಾಡಿ **********.
ಪ್ರೀತಿಯ ಗ್ರಾಹಕರೇ, ಕರೆ ಮಾಡಿ ********* (ಈ ಸಂದೇಶವು ಪದೇ ಪದೇ ಬರುವುದು)
ನಿಮ್ಮ ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ. ದಯವಿಟ್ಟು ನಿಮ್ಮ ವಿವರಣೆಯನ್ನು ತುಂಬಿಸಿ ಮತ್ತು ನಿಮಗೆ ಕಾರ್ಡ್ ಸಿಕ್ಕಿದ ಬಗ್ಗೆ ದ್ರಢೀಕರಿಸಿ. ಈ *********** ವೆಬ್ ಲಿಂಕ್ ಗೆ ಕ್ಲಿಕ್ ಮಾಡಿ. (ಇದು ನಮ್ಮ ಎ.ಟಿ.ಎಂ. ಕಾರ್ಡ್ ನ, ಬ್ಯಾಂಕ್ ಖಾತೆಯ ವಿವರಣೆಯನ್ನು ಪಡೆದು ಮೋಸದಿಂದ ನಮ್ಮ ಮೊತ್ತವನ್ನು ವರ್ಗಾವಣೆ ಮಾಡಿಕೊಳ್ಳುವ ವಿಧಾನ.
ರೂ.500/- ರಿಚಾರ್ಜ್ ಮಾಡಿ ಮೊತ್ತವನ್ನು ಗೆಲ್ಲಿರಿ. ಈ ಪ್ರಶ್ನೆಗೆ ಉತ್ತರಿಸಿರಿ , ತಮಿಳುನಾಡಿನ ರಾಜಧಾನಿ ಯಾವುದು? ಅ) ಕೇರಳ ಆ) ಚೆನ್ನೈ. ನಿಮ್ಮ ಉತ್ತರವನ್ನು ******* ಇದಕ್ಕೆ ಕಳುಹಿಸಿರಿ.
ನಿಮ್ಮ ಹತ್ತಿರ ಮಾತನಾಡಬೇಕು ಅಂತ ಅನಿಸುತ್ತಿದೆ. ********* ಸಂಖ್ಯೆಗೆ ಕರೆ ಮಾಡಿ
ನಾನು ಒಬ್ಬನೇ/ಳೇ ಇದ್ದೇನೆ, ನಿಮ್ಮ ದ್ವನಿಗಾಗಿ ಕಾಯುತ್ತಿದ್ದೇನೆ ಈ ಸಂಖ್ಯೆಗೆ ಕರೆ ಮಾಡಿ **********.
ಅಭಿನಂದನೆಗಳು, ನಿಮ್ಮ ಫೋನ್  ನಂಬರ್ ಲಕ್ಕಿ ಡ್ರಾ ದಲ್ಲಿ ಆಯ್ಕೆಯಾಗಿದೆ. ನೀವು ರೂ. 1 ಕೋಟಿ ಗೆದ್ದಿದ್ದೀರಿ. ಈ ಸಂಖ್ಯೆಗೆ ಕರೆ ಮಾಡಿ ********** (ಈ ಸಂದೇಶ ಪದೇ ಪದೇ ಬರುತ್ತದೆ).
ಅಭಿನಂದನೆಗಳು !!, ನೀವು ಲಕ್ಕಿ ಡ್ರಾ ದಲ್ಲಿ ಗೆದ್ದಿದ್ದೀರಿ. ನಿಮಗೆ ಮೊತ್ತ ವರ್ಗಾವಣೆ ಮಾಡಲು ನಿಮ್ಮ ಬ್ಯಾಂಕ್ ವಿವರಣೆಯನ್ನು ಈ ವೆಬ್ ಲಿಂಕ್ ನಲ್ಲಿ ನೀಡಿರಿ *************(ಈ ಸಂದೇಶ ಪದೇ ಪದೇ ಬರುತ್ತದೆ).

ಸಹೋದರಿಯರೇ, ಈ ಮೇಲಿನ ಎಲ್ಲಾ ಸಂದೇಶಗಳು ಇಂಟರ್ ನೆಟ್ ಮೂಲಕ ಬರುವಂಥವುಗಳು. ಸಂದೇಶಗಳು ಬಂದ ಯಾವುದೇ ಐ.ಡಿ ಅಥವಾ ಸಂಖ್ಯೆಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಬೇಡಿ. ಅಲ್ಲದೇ ಈ ಸಂದೇಶಗಳಿಗೆ ಉತ್ತರ ನೀಡಲು ಹೋಗಬೇಡಿ. ಇಂಥಹ ಸಂದೇಶಗಳು ನಿಮ್ಮನ್ನು ಮರುಳುಮಾಡುತ್ತವೆ ಮತ್ತು ನೀವು ಮೋಸದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಇಷ್ಠೇ ಅಲ್ಲದೇ ಅನಾವಶ್ಯಕವಾದ ವೆಬ್ ಲಿಂಕ್‍ಗಳು ಇರುವ ಸಂದೇಶಗಳೂ ಬರುತ್ತದೆ. ಇವುಗಳನ್ನು ತಕ್ಷಣ ಅಳಿಸಿ ಹಾಕಿ(ಡಿಲೀಟ್ ಮಾಡಿ).
ಕೆಲವೊಂದು ಬಾರಿ ಇಂಟರ್ ನೆಟ್ ಕರೆಗಳು ಬರುತ್ತವೆ. ಅಂತರಾಷ್ಟ್ರೀಯ ಕರೆಗಳ ರೀತಿಯಲ್ಲಿ ಮಾತನಾಡಿ ನಿಮ್ಮ ಎಲ್ಲಾ ವಿವರಣೆಯನ್ನು ಕೇಳುತ್ತಾರೆ, ಬ್ಯಾಂಕ್‍ನ ವಿವರಣೆಯನ್ನು ಕೇಳುತ್ತಾರೆ. ನಿಮ್ಮ ಪರಿಚಯ ಇರುವ ಸ್ಥಳೀಯರೇ ಇಂಥಹ ಕರೆಗಳನ್ನು ಮಾಡಿ ನಿಮ್ಮನ್ನು ಮೋಸದ ಬಲೆಯೊಳಗೆ ಸೆಳೆಯುತ್ತಾರೆ.
ಕೆಲವೋಂದು ಬಾರಿ ನೀವು ಹೆಣ್ಣು ಮಗಳು/ಮಹಿಳೆಯರು ಮಾತನಾಡುವುದು ಎಂದು ಗೊತ್ತಾದರೆ ನಿಮ್ಮಲ್ಲಿ ಅತೀ ವಿನಯದಿಂದ ಮಾತನಾಡಿ ನಿಮ್ಮ ಜೊತೆ ಸ್ನೇಹ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ನಿಮ್ಮ ತೀರಾ ವೈಯುಕ್ತಿಕ ವಿಚಾರಗಳನ್ನು ತಿಳಿದುಕೊಂಡು ಪ್ರೀತಿ ಮಾಡುವ ನಾಟಕವನ್ನಾಡುತ್ತಾರೆ.
ಸಹೋದರಿಯರೇ, ಇದ್ಯಾವುದಕ್ಕೂ ಮರುಳಾಗದಿರಿ. ಇಂಥಹ ಕರೆಗಳು/ಸಂದೇಶಗಳು ಬಂದಾಗ ಒಂದು ಕ್ಷಣ ಆಲೋಚಿಸಿ. ಸುಮ್ಮ ಸುಮ್ಮನೆ ಯಾಕೆ ನಮಗೆ ಲಾಟರಿ ಹೊಡಿಬೇಕು. ನಮ್ಮ ಮೊಬೈಲ್ ಸಂಖ್ಯೆಗಳು ಯಾಕೆ ಡ್ರಾ ದಲ್ಲಿ ಜಯ ಗಳಿಸಬೇಕು. ಅವರಲ್ಲಿ ನಿಮ್ಮ ಮೊಬೈಲ್ ನಂಬರ್ ನ್ನು ಕೊಟ್ಟವರು ಯಾರು? ಅಥವಾ ನಿಮ್ಮ ನಂಬರ್ ಗೇ ಯಾಕೆ ಬಹುಮಾನ ಬರಬೇಕು? ನಿಮಗಲ್ಲದೆ ಇತರರಿಗೂ ಇಂಥಹ ಸಂದೇಶಗಳು ಬಂದಿವೆಯೇ? ಇದನ್ನೆಲ್ಲಾ ವಿಚಾರಿಸುವುದು ಬಹಳ ಮುಖ್ಯವಲ್ಲವೇ?
ನೆನಪಿನಲ್ಲಿಡಿ, ನಿಮ್ಮ ಮಗ ಅಥವಾ ಮಗಳು ಮೊಬೈಲ್ ಬಳಕೆ ಮಾಡುತ್ತಿದ್ದರೆ ಅವರಿಗೂ ಈ ರೀತಿಯಾದ ಸಂದೇಶಗಳು ಬಂದಿರುತ್ತದೆ ಅವರನ್ನೂ ಕೂಡ ಜಾಗ್ರತಿಗೊಳಿಸಿ. ಅನಾಮಧೇಯ ಕರೆಗಳು ಬಂದ ತಕ್ಷಣ ಫೋಲೀಸ್ ಕಂಪ್ಲೈಂಟ್ ಮಾಡಿರಿ.
ಈ ಮಾಹಿತಿಯು ನನ್ನ ಎಲ್ಲ ಸಹೋದರಿಯರಿಗಾಗಿ. . . . .

2 thoughts on “ಮೊಬೈಲ್ ಸಂದೇಶಗಳೇ. . . ಒಂದ್ ನಿಮಿಷ . . . .

  1. ಸತ್ಯ ಮೇಡಮ್..
    ಇಂತಹ ಕರೆ, ಮೆಸ್ಸೇಜ ಕೂಡಾ ತುಂಬಾ ಮಾನಸಿಕವಾಗಿ ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡುವಂತದಾಗಿರುತ್ತವೆ..
    ಎಲ್ಲರಿಗೂ ಒಳ್ಳೆಯ ಮಾಹಿತಿ ನೀಡಿದ್ದೀರಿ ಥ್ಯಾಂಕ್ಸ್..

Leave a Reply

Your email address will not be published. Required fields are marked *