AgricultureNewsTechnologyTraining

ಗ್ರಾಮಾಭಿವೃದ್ಧಿ ಯೋಜನೆ ರೈತರಿಗೆ ತಂತ್ರಜ್ಞಾನ ಅಳವಡಿಕೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟ, ಚಂದ್ರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮೈಸೂರಿನ ಮಹಾರಾಜ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಸಹಯೋಗದಲ್ಲಿ 50 ಜನ ರೈತರಿಗೆ ವೈರ್‍ಲೆಸ್ ಸೆನ್ಸರ್ ನೆಟ್‍ವರ್ಕ್ (wirless Sensor Network) ನ್ನು ಕಾಲೇಜಿನ ಉಪನ್ಯಾಸ ಬಾಲಕೃಷ್ಣ ವಿತರಿಸಿ ರೈತರಿಗೆ ವೈಜ್ಞಾನಿಕ ಬೆಳೆಗಳು
ಮತ್ತು ತರಕಾರಿ ಬೆಳೆಯುವಂತ ರೈತರಿಗೆ ಈ ಡಿವೈಸ್ ಅವಶ್ಯಕವಾಗಿದೆ. ನೀರಿನ ಮಿತಬಳಕೆ, ಫ್ರರ್ಟಲೈಸರ್‍ನ ಪ್ರಮಾಣ, ಮಣ್ಣಿನ ಗುಣಲಕ್ಷಣದ ಪ್ರಮಾಣ, ಇತ್ಯಾದಿಗಳ ಹೆಚ್ಚಿನ ಮಾಹಿತಿಯನ್ನು ರೈತರಿಗೆ ಮೊಬೈಲ್ ಮೂಲಕ ಸಂದೇಶ ರವಾನಿಸುತ್ತದೆ ಎಂದು ಇದನ್ನು ರೈತರು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಕೃಷಿ ಅಧಿಕಾರಿ ಗಣೇಶ್ ಬಾನಪ್ಪನವರ್ ಮಾತನಾಡಿ ಎಲ್ಲೇಡೆ ನೀರಿನ ಕೊರತೆ ಹೆಚ್ಚಾಗಿರುತ್ತದೆ, ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅಳವಡಿಸಿದ ತಂತ್ರಜ್ಞಾನವು ರೈತರಿಗೆ ಸಹಾಯವಾಗಲಿದೆ. ಏಕೆಂದರೆ ಪ್ರತಿದಿನ ರೈತರ ಮೊಬೈಲ್‍ಗೆ ನೀರಿನ ಪ್ರಮಾಣ ಎಷ್ಟು ಇದೆ. ಫರ್ಟಲೈಸರ್‍ನ ಪ್ರಮಾಣ ಎಷ್ಟು ಇದೆ ಎಂಬುದನ್ನು ತಿಳಿಸುವುದರಿಂದ ರೈತರು ಕಡಿಮೆ ನೀರನ್ನು ಬಳಸಿ ಅಧಿಕ ಇಳುವರಿ ಪಡೆಯಲು ಸಹಾಯಕವಾಗಲಿದೆ ಪ್ರಸ್ತುತ ದಿನಗಳಲ್ಲಿ ತಾಲೂಕಿನ 2 ಗ್ರಾಮಗಳಲ್ಲಿ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂಧ ತಂತ್ರಜ್ಞಾನ ಅಳವಡಿಸಿದವರು ಈ ತಂತ್ರಜ್ಞಾನವನ್ನು ಬಹಳ ಜಾಗೃಕತೆಯಿಂದ ಅಳವಡಿಸಿಕೊಳ್ಳಬೆಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಮುನೇಶ್, ಸೇವಾಪ್ರತಿನಿಧಿ ಭವ್ಯ, ಹರೀಶ್ ಫಲಾನುಭವಿಗಳು ಭಾಗವಹಿಸಿದರು

Leave a Reply

Your email address will not be published. Required fields are marked *