AgricultureNewsTechnologyTraining

CHSC ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ಕಾರ್ಯಾಗಾರ

ದಿನಾಂಕ: 29.05.2018 ರಂದು ಧಾರವಾಡದ ರಾಯಾಪುರದಲ್ಲಿರುವ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ CHSC ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ಕಾರ್ಯಾಗಾರ ನಡೆಸಲಾಯಿತು.
ತರಬೇತಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ ಇವರು ಪ್ರಬಂಧಕರಿಗೆ ರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮಗಳಲ್ಲಿ CHSC ಕಾರ್ಯಕ್ರಮ ಕೂಡಾ ಒಂದಾಗಿದೆ. ಯಾವುದೇ ತಪಾವತು ಆಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು. ರಾಜ್ಯದಲ್ಲಿಯೇ ಧಾರವಾಡ ಪ್ರಾದೇಶಿಕ ವ್ಯಾಪ್ತಿಯು CHSC ಕಾರ್ಯಕ್ರಮದ ಅನುಷ್ಠಾನದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಇದರೊಂದಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆಯನ್ನು ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರೈತರಿಗೆ ಸ್ಪಂದಿಸುತ್ತಾ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇನ್ನಷ್ಟೂ ಸಾಧನೆ ಮಾಡಲು ಸಾಧ್ಯ. ವಾಸ್ತವಿಕ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಂಡು ಉತ್ತಮವಾಗಿ ಕೆಲಸ ಮಾಡಿ. ‘ಮಿತವ್ಯಯ ಸಾಧಿಸೋಣ, ಸಮಾಜ ಸೇವೆ ಮಾಡೋಣ’ ಎನ್ನುವ ಈ ವರ್ಷದ ಯೋಜನೆಯ ಧ್ಯೇಯವಾಕ್ಯವನ್ನು ಅರ್ಥಪೂರ್ಣವಾಗಿ ಅನುಷ್ಠಾನಿಸೋಣ ಎಂದು ಉಪಯುಕ್ತವಾದ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಈ ಕಾರ್ಯಾಗಾರದಲ್ಲಿ CHSC ವಿಭಾಗದ ನಿರ್ದೇಶಕರಾದ ಶ್ರೀ ಗಣೇಶ ಕುಡ್ವ ಇವರು CHSC ಪ್ರಬಂಧಕರ ಪ್ರಮುಖ ಜವಾಬ್ದಾರಿಗಳು, ಕಛೇರಿ ನಿರ್ವಹಣೆ, ರೈತರ ಬುಕ್ಕಿಂಗ್ ಮಾಡುವ ವಿಧಾನಗಳು ಹಾಗೂ ವ್ಯವಹಾರ ಯೋಜನೆ ತಯಾರಿಸುವ ಬಗ್ಗೆ ತಿಳಿಸಿಕೊಟ್ಟರು.
CHSC ವಿಭಾಗದ ಮುಖ್ಯ ಸಮನ್ವಯಾಧಿಕಾರಿಗಳಾದ ಶ್ರೀ ಹರೀಶ್ ಕೆ, ಆರ್ ರವರು ಮುಖ್ಯವಾಗಿ CHSC ಕೇಂದ್ರದಲ್ಲಿ ನಿರ್ವಹಿಸಬೇಕಾದ ಲೆಕ್ಕಪತ್ರ ನಿರ್ವಹಣೆಯಲ್ಲಿ ಅಕೌಂಟಿಗ್ ಮತ್ತು ಬ್ಯಾಲೆನ್ಸ್ ಶೀಟ್ ಹಾಗೂ ವೋಚರ್ ತೆಗೆದು ಫೈಲ್ ಮಾಡುವ ವಿಧಾನ ಕುರಿತು ಮನದಟ್ಟಾಗುವಂತೆ ಮಾಹಿತಿ ನೀಡಿದರು.
ಭಾಗವಹಿಸಿದ CHSC ಪ್ರಬಂಧಕರಿಗೆ ಅವರ ಕರ್ತವ್ಯ ನಿರ್ವಹಣೆಗೆ ಪೂರಕವಾದ ಮಾಹಿತಿಯನ್ನು ಒದಗಿಸಲಾಯಿತು. ಈ ತರಬೇತಿಯಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ 36 CHSC ಪ್ರಬಂಧಕರು ಭಾಗವಹಿಸಿದ್ದರು. ಪ್ರಾದೇಶಿಕ ಸಮನ್ವಯಾಧಿಕಾರಿಗಳಾದ ಶ್ರೀ ಬಸವರಾಜ ಅಂಗಡಿ, ಶ್ರೀ ಗಿರೀಶ್ ಮತ್ತು ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ನಿಂಗಪ್ಪ ಜಿ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *