NewsWomen Empowerment

ತಾಲ್ಲೂಕು ಮಟ್ಟದ ಪ್ರಗತಿಬಂಧು ಹಾಗೂ ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಸಾಧನಾ ಸಮಾವೇಶ ಕಾರ್ಯಕ್ರಮ

ದಿನಾಂಕ 06-06-2018 : ದಾವಣಗೆರೆ ತಾಲೂಕಿನಲ್ಲಿ ದಿನಾಂಕ:06.06.2018 ರಂದು ನಗರದ ಶಾಮನೂರು ಶಿವಶಂಕರ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿಬಂದು ಹಾಗೂ ಸ್ವ-ಸಹಾಯ ತಂಡಗಳ ಒಕ್ಕೂಟದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಪರಮಪೂಜ್ಯ ಖಾವಂದರು ಹಾಗೂ ತಾಲೂಕಿನ ಇತರ ಗಣ್ಯವ್ಯಕ್ತಿಗಳಿಂದ ಉದ್ಘಾಟನೆ ಮಾಡಲಾಯಿತು.ತಾಲೂಕು ಮಟ್ಟದ ಪ್ರಗತಿಬಂದು ಹಾಗೂ ಸ್ವ-ಸಹಾಯ ತಂಡಗಳ ಒಕ್ಕೂಟದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಪರಮಪೂಜ್ಯ ಖಾವಂದರು ಮಹಿಳೆಯರು ಆರ್ಥೀಕ ಸಬಲೀಕರಣ, ಸ್ವಾವಲಂಬಿತನದ ಮೂಲಕ ಶ್ರೇಷ್ಠಮಟ್ಟದ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ವ-ಸಹಾಯ ತಂಡಗಳು ಹಲವು ಮಕ್ಕಳ ತಾಯಿ ಇದ್ದಂತೆ, ತಂಡದ ಎಲ್ಲಾ ಸದಸ್ಯರು ಒಟ್ಟಾಗಿ ಚರ್ಚಿಸಿ ಒಳ್ಳೆಯ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.ರಾಜ್ಯದ ನಗರ ಹಾಗೂ ಗ್ರಾಮೀಣ ಮಹಿಳೆಯರು ಆರ್ಥೀಕ ಸಬಲೀಕರಣದ ಜೊತೆಗೆ ಸ್ವಾವಲಂಭಿಗಳಾಗಿ ತಮ್ಮ ಜೀವನವನ್ನು ತಾವೇ ಕಟ್ಟಿಕೊಳ್ಳುವಂತಾಗಬೇಕು ಎಂಬ ಸದುದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ತಂಡದ ಸದಸ್ಯರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಪ್ರಗತಿನಿಧಿ ಸೌಲಭ್ಯವನ್ನು ನೀಡುತ್ತಿದ್ದಾರೆ ಅದರಂತೆ ಸದಸ್ಯರು ಪಡೆದ ಪ್ರಗತಿನಿಧಿ ಮೊತ್ತವನ್ನು ಸರಿಯಾದ ಉದ್ದೇಶಕ್ಕೆ ಬಳಿಸಿಕೊಂಡು ಬದುಕನ್ನು ಸದೃಡಗೊಳಿಸಿಕೊಳ್ಳಬೇಕು ಹಾಗೂ ಪಡೆದ ಪ್ರಗತಿನಿಧಿ ಮೊತ್ತವನ್ನು ಸರಿಯಾದ ಕಂತಿನಲ್ಲಿ ಮರುಪಾವತಿ ಮಾಡಿ ಆರ್ಥೀಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯಡಿ 20 ಸಾವಿರ ಮಹಿಳೆಯರು ಹೈನುಗಾರಿಕೆಯಡಿ ತೊಡಗಿಸಿಕೊಂಡಿರುತ್ತಾರೆ. 14 ಸಾವಿರ ಮಹಿಳೆಯರು ವ್ಯಾಪಾರೋಧ್ಯಮ ನಡೆಸುತ್ತಿದ್ದಾರೆ. 8265 ಮಹಿಳೆಯರು ವಾಹನ ಸಾಲ ಪಡೆದಿರುತ್ತಾರೆ. 3 ಸಾವಿರ ಮಹಿಳೆಯರು ಗೃಹೋತ್ಪನ್ನ ಉದ್ಯಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಎಲ್ಲದರ ಹಿಂದಿನ ಮಹತ್ತರ ಉದ್ದೇಶ ಮಹಿಳೆಯರ ಆರ್ಥೀಕ ಸಬಲೀಕರಣ. ಇದಲ್ಲದೇ ಯೋಜನೆಯ ಮೂಲಕ ಕೃಷಿ, ಕೃಷಿಯೇತರ, ಅಭೀವೃದ್ದಿ, ವೃದ್ದಾಪ್ಯ, ಶೀಷ್ಯವೇತನ, ಸೌರಶಕ್ತಿ, ಕೆರೆ ಹೂಳೆತ್ತುವ ಮುಂತಾದ ಅಭೀವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಸಭಲೀಕರಣದ ಹಿಂಡ ದಾಂಪತ್ಯದ ಮೂಲ ಮಂತ್ರ ಇದೆ. ಅಂದರೆ ಸಮಾನ ಜವಾಬ್ದಾರಿ. ತಂಡದ ಪ್ರತಿಯೊಬ್ಬ ಸದಸ್ಯರು ಪ್ರಗತಿನಿಧಿ ಪಡೆಯುವುದು, ಮರುಪಾವತಿ ಮಾಡುವ ಜವಾಬ್ದಾರಿಯನ್ನು ಸರಿ ಸಮಾನವಾಗಿ ನಿಭಾಯಿಸಬೇಕು, ತಂಡದ ಸದಸ್ಯರು ಪ್ರಗತಿನಿಧಿ ಹಾಗೂ ಇತರೆ ಸೌಲಭ್ಯವನ್ನು ಕೇಳಿ ಪಡೆಯಬಾರದು, ಹಕ್ಕಿನಿಂದ ಪಡೆಯಬೇಕು, ಹಕ್ಕಿನಿಂದ ಪಡೆದುಕೊಂಡದ್ದನ್ನು ಸಮರ್ಥವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು.ಯೋಜನೆಯಡಿ ನೀಡದ ಸಾಲಕ್ಕೆ ವಿಮಾ ಸೌಲಭ್ಯ ಮಾಡಿಸಿದ್ದು, ಸಾಲ ಪಡೆದುಕೊಂಡಂತವರು ಅಕಾಲಿಕ ದುರ್ಮರಣಕ್ಕಿಡಾದರೆ ವಿಮಾ ಕಂಪನಿ ಸಾಲ ಮರುಪಾವತಿಸಲಿದೆ. ಸದಸ್ಯರು ಮರುಪಾವತಿಗೆ ವಾರದ ಕಂತುಗಳ ಬದಲಿಗೆ ತಿಂಗಳಿನ ಕಂತಿನ ಸೌಲಭ್ಯದ ಬೇಡಿಕೆ ನೀಡುತ್ತಿದ್ದಾರೆ ಆದರೆ ವಾರದ ಕಂತು ಕಟ್ಟದೇ ಹೋದರೇ ಮುಂದಿನ ವಾರ ಕಟ್ಟುವ ಹೊರೆ ಅಷ್ಟಾಗಿರುವುದಿಲ್ಲ, ಆದರೆ ತಿಂಗಳ ಕಂತು ಉಲೀಸಿಕೊಂಡರೆ ಸಾಕಷ್ಟು ಹೊರೆಯಾಗುತ್ತದೆ ಎಂದು ಮಾಹಿತಿ ನೀಡಿದಾಗ ನೆರೆದಿದ್ದ ಸದಸ್ಯರು ವಾರದ ಮರುಪಾವತಿ ಸುಲಭ ಎಂದು ವಾರದ ಕಂತು ಮುಂದುವರೆಸಬೇಕೆಂದು ಹೇಳಿದರು.
ಮುಂದುವರಿದು ಬದಿಕಿನಲ್ಲಿ ಸುಂದರ ಸ್ವಪ್ನ ಕಾಣಬೇಕು, ನಮ್ಮ ಬದುಕನ್ನು ರೂಪಿಸಿಕೊಳ್ಳುವಂತಹ ಕನಸು ಕಾಣಬೇಕು ಒಳ್ಳೆಯ ಜೀವನ ರೂಪಿಸುವ ಕನಸನ್ನು ಸಾಕಾರಗಿಳಿಸಬೇಕು ಎಂದು ಸಲಹೆ ನೀಡಿದರು. ಸಂಸದ ಜಿ.ಎಂ. ಸಿದ್ದೇಶ್ವರ್ ರವರು ಸರ್ಕಾರ ಸಹಾ ಮಾಡಲಿಕ್ಕಾಗದಂತಹ ಕೆಲಸವನ್ನು ಮಾಡುತ್ತಿರುವ ಯೋಜನೆಯು ಒಂದು ಮಿನಿ ಸರ್ಕಾರ ಎಂದರೆ ತಪ್ಪಾಗಲಿಕ್ಕಿಲ್ಲ ಹಾಗೂ ಸಂಘದ ಸದಸ್ಯರು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಿಲ್ಲೆಯ ಅಭೀವೃದ್ದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ ದಾವಣಗೆರೆ ತಾಲುಕಿನಲ್ಲಿ ಸ್ವ-ಸಹಾಯ ಸಂಘಗಳು ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಆಶಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳಾ ಟಿ.ವಿ ರಾಜು, ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಬಸವರಾಜ್, ಗೌಡ್ರ ಚನ್ನಬಸಪ್ಪ, ಎಸ್.ಟಿ ಕುಸುಮಶೆಟ್ಟಿ, ಅಣಬೇರು ಮಂಜಣ್ಣ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶ್ರೀನಿವಾಸಲುರೆಡ್ಡಿ, ಸುರೇಶ್ ಹೊಸ್ಕೆರಿ ಯೋಜನೆಯ ಕೇಂದ್ರ ಕಛೇರಿ ಪ್ರಾದೇಶಿಕ ನೀರ್ದೇಶಕರಾದ ಜಯಶಂಕರ್ ಶರ್ಮ, ಧಾರವಾಡ ಪ್ರಾದೇಶಿಕ ನೀರ್ದೇಶಕರಾದ ಸಿತಾ ರಾಮ ಶೆಟ್ಟಿ, ಜಿಲ್ಲೆಯ ನಿರ್ದೇಶಕರಾದ ಜಯಂತ್ ಪೂಜಾರ್, ತಾಲೂಕಿನ ಯೋಜನಾಧಿಕಾರಿಗಳಾದ ಪದ್ಮಯ್ಯ, ಜಿಲ್ಲೆಯ ಯೋಜನಾಧಿಕಾರಿಗಳಾದ ವಿಜೇಂದ್ರ ಶ್ಯಾನಾಬಾಗ್ ಹಾಗೂ ತಾಲೂಕಿನ ಹಾಗೂ ಜಿಲ್ಲಾ ಕಛೇರಿ ಎಲ್ಲಾ ಸಿಬ್ಬಂದಿಗಳು, ಸೇವಾಪ್ರತಿನಿದಿಗಳು, ಒಕ್ಕೂಟದ ಅಧ್ಯಕ್ಷರು ಉಪಾಧ್ಯಕ್ಷರು ತಂಡದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

ಪರಮಪೂಜ್ಯ ಖಾವಂದರು ಇಂದು ದಾವಣಗೆರೆ ತಾಲೂಕಿನ ಓಂ ಸ್ವ ಸಹಾಯ ಸಂಘದ ಮಂಜುಳ ಎಂಬುವರು ಯೋಜನೆಯ ಪ್ರೇರಣೆಯಿಂದ ಶ್ರೀ ಕರಿಯಮ್ಮದೇವಿ ಸಿದ್ಧಉಡುಪು ಘಟಕ ಪ್ರಾರಂಬಿಸಿದ್ದನ್ನು ವೀಕ್ಷಣೆ ಮಾಡಿದರು, ಯೋಜನೆಯ ಪ್ರೇರಣೆಯಿಂದ ಇನ್ನೂ ಹೆಚ್ಚಿನ ಮಹಿಳೆಯರು ಸ್ವ ಉದೋಗವನ್ನು ಪ್ರಾರಂಭಿಸಲಿ… ಶ್ರೀಮತಿ ಮಂಜುಳಾ ರವರು ಪೂರ್ವಜನ್ಮದ ಪುಣ್ಯದಿಂದ ದೊಡ್ಡ ಧೈರ್ಯ ಮಾಡಿ ಸುಮಾರು 50 ಜನ ಕಾರ್ಮಿಕರೊಂದಿಗೆ ದೊಡ್ಡಮಟ್ಟದ ಬಂಡವಾಳ ಹೂಡಿಕೆ ಮಾಡಿ ಸ್ವ ಉದ್ಯೋಗ ಪ್ರಾರಂಬಿಸಿದ್ದು ಅದಕ್ಕೆ ಇಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತುಂಬಾ ಪ್ರಾಮಾಣಿಕತೆ ನಿಷ್ಟೆ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಬೇಕು,ನೌಕರರ ಪ್ರಾಮಾಣಿಕತೆಯೇ ಯಜಮಾನ /ಸಂಸ್ಥೆಯ ಯಶಸ್ಸು ಎಂದು ಹಿತ ನುಡಿಯನ್ನು ಹೇಳುವ ಮೂಲಕ ಶುಭಾಶಿರ್ವಾದ ಮಾಡಿದರು.

Leave a Reply

Your email address will not be published. Required fields are marked *