NewsStudy ToursTraining

ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಯನಕ್ಕಾಗಿ ಚೆನೈಯ ಸರ್ವೋದಯ ಸೇವಾ ಸಂಸ್ಥೆಯ ಪ್ರತಿನಿಧಿಗಳ ಭೇಟಿ

ಚೆನೈ ಸರ್ವೋದಯ ಸೇವಾ ಸಂಸ್ಥೆಯ 18 ಜನ ಪ್ರತಿನಿಧಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಅವರು ದಿನಾಂಕ 06.06.2018 ರಿಂದ 08.06.2018 ರವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಕೈಗೊಂಡ ಕೃಷಿ ಹಾಗೂ ಕೃಷಿಯೇತರ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಎಚ್.ಮಂಜುನಾಥ್ ನೀಡಿದರು.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕಂಬಳದಡ್ಡ ಪ್ರಗತಿಬಂಧು ತಂಡ, ಸವಣಾಲು ಗ್ರಾಮದ ವಾಣಿಶ್ರೀ ಜ್ಞಾನವಿಕಾಸ ಕೇಂದ್ರ ಹಾಗೂ ಲಾೈಲ ಗ್ರಾಮದ ಶ್ರೀ ದುರ್ಗಾ ಸ್ವಸಹಾಯ ಸಂಘಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು. ನಂತರ ಕನ್ಯಾಡಿ ಗ್ರಾಮದ ಶ್ರೀಮತಿ ರೂಪಾರವರ ತಿಂಡಿ ತಯಾರಿಕಾ ಘಟಕ ಹಾಗೂ ದೊಂಡೊಲೆಯ ಸುಂದರಿಯವರ ಹಾಳೆ ತಟ್ಟೆ ಘಟಕಗಳನ್ನು ವೀಕ್ಷಿಸಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಅಧ್ಯಯನ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ರಾವ್, ಸಂವಹನ ವಿಭಾಗದ ಯೋಜನಾಧಿಕಾರಿ ಜಗದೀಶ್ ಅಲ್ಸೆ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಕೇಂದ್ರ ಕಚೇರಿಯ ತಂತ್ರಜ್ಞಾನ ವಿಭಾಗದ ಜೆಸಿಂತಾ ಮತ್ತು ಅಶ್ವಿತಾ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕ ರಾಜೇಶ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Leave a Reply

Your email address will not be published. Required fields are marked *