AgricultureNewsTraining

ಕೃಷಿ ಅಧಿಕಾರಿಗಳ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ತರಬೇತಿ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯದ 32 ಮಂದಿ ಕೃಷಿ ಅಧಿಕಾರಿಗಳಿಗೆ 8 ದಿನಗಳ ಕಾಲ ತರಬೇತಿ ಕಾರ್ಯಾಗಾರÀ ಇತ್ತೀಚೆಗೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್.ಎಚ್.ಮಂಜುನಾಥ್‍ರವರು ಮಾತನಾಡುತ್ತಾ ಪ್ರತಿಯೊಬ್ಬ ಕಾರ್ಯಕರ್ತರು ಸೇವಾ ಮನೋಭಾವದೊಂದಿಗೆ ಕೆಲಸವನ್ನು ಸಮರ್ಪಣಾ ಮನೋಭಾವದಿಂದ ನಿರ್ವಹಿಸಬೇಕು. ಕೃಷಿ ಅಧಿಕಾರಿಗಳು ಬರಿಗಾಲ ವೈದ್ಯರಾಗಿ ಅಧ್ಯಯನಶೀಲರಾಗಬೇಕು. ಬೇರೆ ಬೇರೆ ಮಾಧ್ಯಮಗಳಿಂದ ಕೃಷಿಗೆ ಸಂಬಂಧಪಟ್ಟ ವಿಷಯಗಳನ್ನು ಸಂಗ್ರಹಿಸಿ ರೈತರಿಗೆ ಮಾಹಿತಿ ನೀಡಬೇಕು ಎಂಬುದಾಗಿ ತರಬೇತಿ ಉದ್ಘಾಟಕರಾಗಿ ಆಗಮಿಸಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ವಿಭಾಗದ ನಿರ್ದೇಶಕರಾದ ಶ್ರೀ ಮನೋಜ್ ಮಿನೇಜಸ್, ತರಬೇತಿ ಸಂಸ್ಥೆಯ ನಿರ್ದೇಶಕರಾದ ಬೂದಪ್ಪ ಗೌಡ, ಹಾಗೂ ಪ್ರಾಂಶುಪಾಲರಾದ ಚಂದ್ರಶೇಖರ್, ಯೋಜನಾಧಿಕಾರಿಗಳಾದ ಶ್ರೀ ಲವ ಕುಮಾರ್ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಮಾದರಿ ಕೃಷಿ ತಾಕುಗಳ ಭೇಟಿ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಸಾವಯವ ಗ್ರಾಮ ಭೇಟಿ, ಕಡಮ್ಮಾಜೆ ಫಾರ್ಮ್ ಭೇಟಿ, ರತ್ನಮಾನಸ, ಕೊಕ್ಕಡ ಗೋಶಾಲೆ, ಸಿದ್ಧವನ ನರ್ಸರಿ, ಕೃಷಿ ಇಲಾಖೆ ಹಾಗೂ ಕೃಷಿ ಯಂತ್ರಧಾರೆ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಶ್ರೀ ಪದ್ದತಿ ನಾಟಿಯನ್ನು ತರಬೇತಿ ಕೃಷಿ ಅಧಿಕಾರಿಗಳಿಂದ ಪ್ರಾತ್ಯಾಕ್ಷಿಕೆ ಮಾಡಿಸಲಾಯಿತು.
ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕರಾದ ಶ್ರೀ ಬಾಲಕೃಷ್ಣ.ಯಂ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *