NewsWomen Empowerment

ಜ್ಞಾನವಿಕಾಸ ಕೇಂದ್ರದಲ್ಲಿ ಆಟಿಡೊಂಜಿದಿನ ಮತ್ತು ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಕಾರ್ಕಳ ತಾಲೂಕಿನ ಅಜೆಕಾರು ವಲಯದ ಕಡ್ತಲ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ಆಟಿಡೊಂಜಿದಿನ ಮತ್ತು ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಅರುಣ್ ಕುಮಾರ್‍ರವರು ನೆರವೇರಿಸಿ ಮಹಿಳೆಯರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಸೇವನೆ ಅಗತ್ಯ ಎಂಬುದಾಗಿ ತಿಳಿಸಿದರು. ಮಾಹಿತಿದಾರರಾಗಿ ಆಗಮಿಸಿದ ಶೋಭಾ ಭಾಸ್ಕರ್‍ರವರು ಆಟಿ ತಿಂಗಳ ವಿಶೇಷತೆಯ ಬಗ್ಗೆ ತಿಳಿಸುತ್ತಾ ಆಟಿ ತಿಂಗಳಲ್ಲಿ ಕೆಲವೊಂದು ಆಹಾರ ಪದಾರ್ಥಗಳಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಔಷದಿಯ ಅಂಶಗಳಿವೆ ಎಂದು ತಿಳಿಸಿದರು. ಪೌಷ್ಠಿಕ ಆಹಾರ ಸೇವನೆಯಿಂದ ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ. ಹಾಗೂ ದೇಹಕ್ಕೆ ಎಳೆಯ ವಯಸ್ಸಿನಿಂದಲೇ ಪೌಷ್ಠಿಕ ಆಹಾರ ಸೇವನೆ ಮಾಡಿದ್ದಲ್ಲಿ ದೇಹ ಶಕ್ತಿಯನ್ನು ಹೊಂದಿ ರೋಗವನ್ನು ತಡೆಗಟ್ಟಲು ಸಹಕಾರಿಯಾಗಿದೆ. ಆಟಿಯಲ್ಲಿ ತಯಾರಿಸಿದ ತಿನಿಸುಗಳಲ್ಲಿದ್ದ ಪೌಷ್ಠಿಕಾಂಶಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಆಟಿಯ ವಿಶೇಷತೆಯನ್ನು ಈಗಿನ ಕಾಲದ ಮಕ್ಕಳಿಗೆ ತಿಳಿಸಬೇಕಾಗಿರುವುದು ತಾಯಿಯ ಪ್ರಮುಖ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಒಕ್ಕೂಟದ ಅಧ್ಯಕ್ಷರಾದ ಸುಧಾಕರ್‍ರವರು ಮಾತನಾಡಿ ಕಾರ್ಯಕ್ರಮ ಉತ್ತಮವಾಗಿ ನಡೆದಿದ್ದು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತೀಯೊಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಉಮಾ, ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಂಜನಿ ಪ್ರಸಾದ್, ಸೇವಾಪ್ರತಿನಿಧಿಯಾದ ಸುಪ್ರಿತಾ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸ್ವಾಗತವನ್ನು ಶಮಿತ, ಧನ್ಯವಾದವನ್ನು ಅಕ್ಷತಾರವರು ನೆರವೇರಿಸಿದರು.

ಕೃಷ್ಣ ಟಿ
ಯೋಜನಾಧಿಕಾರಿ

Leave a Reply

Your email address will not be published. Required fields are marked *