DharmasthalaEventsNews

‘ನಮ್ಮ ಊರು – ನಮ್ಮ ಶ್ರದ್ಧಾ ಕೇಂದ್ರ’ ಕಾರ್ಯಕ್ರಮದಡಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಆಂದೋಲನಾ

ಸೊರಬ :- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2018- ಆಗಸ್ಟ್ 15ರ ದಿನಾಂಕದಂದು ಗುರಿಯಾಗಿ ಇಟ್ಟುಕೊಂಡು ಸೊರಬ ತಾಲ್ಲೂಕಿನ 54 ಕಡೆಗಳಲ್ಲಿ ‘‘ಸ್ವಚ್ಛ ಭಾರತ – ಸ್ವಚ್ಛ ಮಂದಿರ’’ ಕಾರ್ಯಕ್ರಮದಡಿಯಲ್ಲಿ ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೆಂದ್ರ ಹೆಗ್ಗಡೆಯವರ ಅಪೇಕ್ಷೆ ಹಾಗೂ ಮಾರ್ಗದರ್ಶನದಂತೆ ತಾಲ್ಲೂಕಿನಲ್ಲಿ ದಿನಾಂಕ : 08.08.2018 ರಂದು ಈಗಾಗಲೇ ಆಯ್ಕೆ ಮಾಡಿದ ಒಟ್ಟು 2 ಗ್ರಾಮಗಳಲ್ಲಿ ಹಾಗೂ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಗ್ರಾಮದ ಎಲ್ಲಾ ಒಕ್ಕೂಟದವರು, ಕಾರ್ಯಕರ್ತರು, ಧಾರ್ಮಿಕ ಕೇಂದ್ರದ ಮುಖಂಡರು ಮತ್ತು ಸ್ಥಳೀಯರು ಸಾಮೂಹಿಕವಾಗಿ ಪಾಲ್ಗೊಂಡು ದೇವಸ್ಥಾನಗಳ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛತೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಕಾರ್ಯಕ್ರಮ ಪೂರ್ವ ತಾಲೂಕಿನ ಎಲ್ಲಾ ಶ್ರದ್ಧಾ ಕೇಂದ್ರಗಳಿಗೆ ಪೂಜ್ಯ ಖಾವಂದರು ನೀಡಿದ ಕರಪತ್ರಗಳನ್ನು ನೀಡಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾರತದ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿ ಬಂದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳವು ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಯೋಜನೆಯ ಸ್ವ- ಸಹಾಯ ಸಂಘಗಳ ನೆರವಿನಿಂದ ಸ್ವಚ್ಛತಾಂದೋಲನ ಕಾರ್ಯಕ್ರಮವು 71 ನೇ ಸ್ವಾತಂತ್ರೋತ್ಸವ ಸುಸಂದರ್ಭದಲ್ಲಿ ತಾಲೂಕಿನಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕಾಗಿದ್ದು, ಮತ್ತು ಈ ಕಾರ್ಯಕ್ರಮ ನಿರಂತರವಾಗಿ ನಡೆಸಬೇಕೆಂದು ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಇಚ್ಛೆಯಾಗಿರುತ್ತದೆ.

One thought on “‘ನಮ್ಮ ಊರು – ನಮ್ಮ ಶ್ರದ್ಧಾ ಕೇಂದ್ರ’ ಕಾರ್ಯಕ್ರಮದಡಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಆಂದೋಲನಾ

Leave a Reply

Your email address will not be published. Required fields are marked *