DharmasthalaNews

ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸ್ವಚ್ಚತಾ ಕಾರ್ಯಕ್ರಮ

ಪರಮ ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಕಾರ್ಕಳ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದಿನಾಂಕ 12.08.2018 ರಂದು ಕಾರ್ಕಳ ನಗರ ವಲಯದ ಜಾರ್ಕಳ ಮುಂಡ್ಲಿ ಕಾರ್ಯಕ್ಷೇತ್ರದ ಬ್ರಹ್ಮಬೈದರ್ಕಳ ಗರಡಿಯ ಸ್ವಚ್ಚತಾ ಕಾರ್ಯಕ್ರಮವನ್ನು ಯುವ ಸ್ಪಂದನ ಸಂಘ ಜಾರ್ಕಳ, ಸೌಹಾರ್ಧ ಫ್ರೆಂಡ್ಸ್ ಜಾರ್ಕಳ, ಗರಡಿಯ ವ್ಯವಸ್ಥಾಪಕರು, ಶಿರ್ಲಾಲು ಪಂಚಾಯತ್ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರ ಸಹಯೋಗದೊಂದಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಆನಂದ್ ಪಿ.ಡಿ.ಒ. , ಸಂಪತ್ ಕುಮಾರ್ ಆಡಳಿತ ಮೊಕ್ತೇಸರರು, ರಘುರಾಮ್ ಶೆಟ್ಟಿ ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಸುಕೇಶ್ ದೇವಾಡಿಗ ಸೌಹಾರ್ಧ ಫೆಂಡ್ಸ್ ಅಧ್ಯಕ್ಷರು, ಮನೋಜ್ ಶೆಟ್ಟಿ ಯುವ ಸ್ಪಂದನ ಅಧ್ಯಕ್ಷರು, ಸುಜಿತ್ ಕುಮಾರ್ ಶೆಟ್ಟಿ ಮಾಜಿ ತಾ.ಪಂ. ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಎಸ್.ಡಿ.ಎಂ. ಅಧ್ಯಕ್ಷರು ಭಾಸ್ಕರ್ ಆಚಾರ್ಯ, ರಘುನಾಥ್ ಜಿ.ಲಾ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಡೆಮೋ ಮಾಡಿ ತೋರಿಸಲಾಯಿತು. ಸದಸ್ಯರಿಗೆ ಕಸವನ್ನು ವಿಲೇವಾರಿ ಮಾಡಲು ಬ್ಯಾಗ್‍ನ್ನು ವಿತರಿಸಲಾಯಿತು. ಯಾವುದೇ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೇ ಚೀಲದಲ್ಲಿ ಹಾಕಿಟ್ಟು 15 ದಿನಕ್ಕೊಮ್ಮೆ ಪಂಚಾಯತ್ ಮುಖಾಂತರ ವಿಲೇವಾರಿ ಮಾಡುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಚ್ಚತೆಯ ಬಗ್ಗೆ ಹಮ್ಮಿಕೊಂಡ ಈ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದ್ದು ಒಂದು ದಿನಕ್ಕೆ ಸೀಮಿತವಾಗದೆ, ತಮ್ಮ ಮನೆಯಲ್ಲಿ ಹಾಗೂ ಸುತ್ತಮುತ್ತ ಪ್ರತೀ ದಿನವೂ ಸ್ವಚ್ಚಗೊಳಿಸಿದರೆ ಇಡೀ ಗ್ರಾಮವನ್ನು ಸ್ವಚ್ಚವಾಗಿಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೃಷ್ಣ ಟಿ
ಯೋಜನಾಧಿಕಾರಿ

Leave a Reply

Your email address will not be published. Required fields are marked *