AgricultureDharmasthalaNewsStudy ToursTraining

ತೋಟಗಾರಿಕಾ ಮಹಾವಿದ್ಯಾಲಯ ಹಿರಿಯೂರು ಬಿ.ಎಸ್.ಸಿ ಪದವೀಧರ ವಿದ್ಯಾರ್ಥಿಗಳ ಧರ್ಮಸ್ಥಳ ಭೇಟಿ

ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ತರಬೇತಿ ಸಂಸ್ಥೆ ವತಿಯಿಂದ ತೋಟಗಾರಿಕಾ ಮಹಾವಿದ್ಯಾಲಯ ಹಿರಿಯೂರು ಬಿ.ಎಸ್.ಸಿ ಪದವೀಧರ ವಿದ್ಯಾರ್ಥಿಗಳಿಗೆ ಹದಿನಾಲ್ಕು ದಿನಗಳ ಕಾಲ ಪ್ರಾಯೋಗಿಕ ಕಲಿಕೆಗಾಗಿ ಧರ್ಮಸ್ಥಳ ಅರಪ್ಪಾಡಿ ತೋಟದಲ್ಲಿ ನೀರು ಶುದ್ದೀಕರಣ ಘಟಕ ವೀಕ್ಷಣೆ, ಸಾವಯವ ಕೃಷಿಗಾಗಿ ತ್ಯಾಜ್ಯವಸ್ತುಗಳನ್ನು ಬಳಸಿ ಎರೆಗೊಬ್ಬರ ತಯಾರಿಯಾ ಪ್ರಾತ್ಯಕ್ಷಿಕೆ, ಅಡಿಕೆ ಗಿಡಗಳಿಗೆ ಕೀಟನಾಶಕಗಳ ಸಿಂಪಡಣೆ ಕ್ರಮಗಳು, ಜೀವಾಮೃತ ತಯಾರಿಯ ಪ್ರಾತ್ಯಕ್ಷಿಕೆ ಹಾಗೂ ತೋಟಗಾರಿಕಾ ಬೆಳೆಗಳ ನಿರ್ವಹಣೆ, ನೀರಾವರಿ ಪದ್ಧತಿಯ ಕ್ರಮಗಳನ್ನು ತಿಳಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲ್ಪಡುತ್ತಿರುವ ಸಿದ್ಧವನ ನರ್ಸರಿಯಲ್ಲಿ ತಳಿಗಳ ಆಯ್ಕೆ, ಕಸಿಕಟ್ಟುವ ವಿಧಾನ, ಪಾಲಿಹೌಸ್ ನಿರ್ವಹಣೆ, ಗಿಡಗಳ ಆರೈಕೆ, ಮಣ್ಣಿನ ಆಯ್ಕೆ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ರೈತರಿಗೆ ರೈತಕ್ಷೇತ್ರ ಪಾಠಶಾಲೆಯನ್ನು ಕೊರಗಪ್ಪ ಗೌಡರ ಮನೆಯಲ್ಲಿ, ವಿದ್ಯಾರ್ಥಿಗಳು ಅಡಿಕೆ, ತೆಂಗು, ಕರಿಮೆಣಸು, ಕೊಕ್ಕೊ, ಗೇರು ಗಿಡಗಳ ನಾಟಿ ಕ್ರಮ, ಪೋಷಣೆ, ಔಷದೋಪಚಾರಗಳ ಕುರಿತು ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.
54 ಮಂದಿ ವಿದ್ಯಾರ್ಥಿಗಳು ಶ್ರದ್ಧಾ ಕೇಂದ್ರದ ಸ್ವಚ್ಚತೆಯನ್ನು ಚಂದ್ಗುರು ದುರ್ಗಾಪರಮೇಶ್ವರಿ ದೇವಾಸ್ಥಾನದಲ್ಲಿ ಒಂದು ದಿನದ ಶ್ರಮದಾನದ ಮೂಲಕ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಧನಂಜಯ ಅಜ್ರಿ ರವರು, ತರಬೇತಿ ಕೇಂದ್ರದ ಉಪನ್ಯಾಸಕರಾದ ಬಾಲಕೃಷ್ಣ, ಮೇಲ್ವಿಚಾರಕರಾದ ರಾಜೇಶ್, ಸೇವಾಪ್ರತಿನಿಧಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲ್ಪಡುವ ಕೊಕ್ಕಡ ಗೋಶಾಲೆಗೆ ಭೇಟಿ ನೀಡಿ ಅರ್ಕತಯಾರಿ, ವಿಭೂತಿ ತಯಾರಿ, ಗೋಬಾರ್ ಗ್ಯಾಸ್ ತಯಾರಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು. ಟಿ.ಬಿ.ಕ್ರಾಸ್ ಬಳಿ ಇರುವ ಪ್ರಗತಿ ಸೌಧ ಮದ್ಯವರ್ಜನ ವಿಶೇಷ ಶಿಬಿರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು, ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳ ಬದಲಾವಣೆಯನ್ನು ಕಂಡು ಅಚ್ಚರಿಯನ್ನು ವ್ಯಕ್ತಪಡಿಸಿದರು. ಯೋಜನಾಧಿಕಾರಿಗಳಾದ ತಿಮ್ಮಯ್ಯನಾಯ್ಕ ರವರು ಮದ್ಯವರ್ಜನ ಶಿಬಿರದ ಪ್ರಾಮುಖ್ಯತೆ, ವೇದಿಕೆಯ ಪದಾಧಿಕಾರಿಗಳ ಸೇವಾಮನೋಭಾವವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗಾಗಿ ನಡೆಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.
ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿಯ ಕಾರ್ಯವೈಖರಿ ಕುರಿತು ಮನೋರಮ ಭಟ್ ನಿರ್ದೇಶಕರು ಮಾಹಿತಿ ನೀಡಿದರು. ಸಿರಿ ಸಂಸ್ಥೆಯ ವಿವಿಧ ಘಟಕಗಳ ವೀಕ್ಷಣೆಯನ್ನು ಮಾಡಲಾಯಿತು. ರತ್ನಮಾನಸ ಗುರುಕುಲ ಮಾದರಿಯ ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಯ ವಾರ್ಡನ್ ಕೃಷ್ಣ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಬದುಕುವ ಶಿಕ್ಷಣ ಹಾಗೂ ಸಂಸ್ಕಾರವನ್ನು ಕಳುಹಿಸಿಕೊಡುವ ಕುರಿತು ಮಾಹಿತಿ ನೀಡಿದರು. ಸುಮಾರು ಹತ್ತು ಎಕ್ರೆಯ ಸಮಗ್ರಕೃಷಿಯ ಕುರಿತು ವೀಕ್ಷಣೆಯೊಂದಿಗೆ ಮಾಹಿತಿ ನೀಡಿದರು.
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಒಕ್ಕೂಟದ ಅಧ್ಯಕ್ಷರಾದ ಮೋಹನ್ ರವರ ಬಟ್ಯಾರಡ್ಕಪ್ರಗತಿಬಂಧು, ನಾರಾಯಣ ಪೂಜಾರಿಯವರ ಬರೆಮೇಲು ಪ್ರಗತಿಬಂಧು, ಹಿಮರಡ್ಕ ದಿವಾಕರ್ ರವರ ಶ್ರೀ ದುರ್ಗಾ ಪ್ರಗತಿಬಂಧು ಸಂಘಗಳ ಶ್ರಮವಿನಿಮಯದಲ್ಲಿ 54 ಮಂದಿ ವಿದ್ಯಾರ್ಥಿಗಳು 3 ಬ್ಯಾಚ್ ಮೂಲಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ವಿದ್ಯಾರ್ಥಿಗಳಿಗೆ ಊಟ, ತಿಂಡಿಯ ವ್ಯವಸ್ಥೆಯನ್ನು ಮಾಡಿರುತ್ತಾರೆ. ಸಂಘದ ಎಲ್ಲ ಸದಸ್ಯರು ಭಾಗವಹಿಸಿರುತ್ತಾರೆ. ವಲಯದ ಮೇಲ್ವಿಚಾರಕಾರಾದ ರಾಜೇಶ್, ದಿನೇಶ್, ಸೇವಾಪ್ರತಿನಿಧಿಗಳು ಹಾಗೂ ಕೃಷಿ ಮೇಲ್ವಿಚಾರಕರಾದ ಹರಿಪ್ರಸಾದ್, ತರಬೇತಿ ಸಂಸ್ಥೆಯ ಉಪನ್ಯಾಸಕರು ಬಾಲಕೃಷ್ಣ ಭಾಗವಹಿಸಿರುತ್ತಾರೆ.
ಸುರ್ಯ ಪಂಚಮಿ ಜ್ಞಾನವಿಕಾಸ ಕೇಂದ್ರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಜಾಮೂನು ತಯಾರಿಯಾ ಪ್ರಾತ್ಯಾಕ್ಷಿಕೆಯನ್ನು ಮಾಡಿ ತೋರಿಸಿರುತ್ತಾರೆ. ಕೇಂದ್ರದ ಸದಸ್ಯರು ವಿವಿಧ ಸಾಂ

ಸ್ಕøತಿಕ ಕಾರ್ಯಕ್ರಮವನ್ನು ನೀಡಿದರು. ಹಿರಿಯೂರು ತೋಟಗಾರಿಕಾ ವಿದ್ಯಾಲಯದ ಡಾ.ಅಮರೇಶ್ ಹಾಗೂ ಡಾ.ಶಶಿಕಲಾ ರವರು ಭಾಗವಹಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ನ್ಯಾಚುರೋಪತಿ ಆಸ್ಪತ್ರೆ ಹಾಗೂ ವಿವಿಧ ಪ್ರೇಕ್ಷಣಿಯ ಸ್ಥಳಗಳ ಭೇಟಿಯನ್ನು ಮಾಡಿಸಲಾಯಿತು. ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಮುಂದೆ ನಿಷ್ಠವಂತ ಅಧಿಕಾರಿಗಳಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳಾಗಬೇಕು ಎಂಬುದಾಗಿ ಮಾರ್ಗದರ್ಶನ ಮಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಹೆಚ್.ಮಂಜುನಾಥ್ ರವರು ಮಾತನಾಡಿ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ಪ್ರಜೆಗಳು ಆಗಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ದಿಪಡಿಸುವ ಕುರಿತು ಸರಿಯಾದ ತಿಳುವಳಿಕೆ ನೀಡುವ ಅಗತ್ಯತೆ ಇದೆ ಎಂಬುದಾಗಿ ತಿಳಿಸಿದರು.
14 ದಿನಗಳ ತರಬೇತಿಯ ಸಮಾರೋಪ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿಯಲ್ಲಿ ನಡೆಯಿತು. ತರಬೇತಿ ಸಂಸ್ಥೆಯ ನಿರ್ದೇಶಕರಾದ ಬೂದಪ್ಪಗೌಡ ರವರು ವಿದ್ಯಾರ್ಥಿಗಳು ಹೃದಯವಂತಿಕೆಯೊಂದಿಗೆ ಕೆಲಸ ನಿರ್ವಹಿಸುವಂತೆ ಪ್ರೇರಣೆ ನೀಡಿದರು. ಸಿಬ್ಬಂದಿ ಹಾಗೂ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಶ್ರೀಮತಿ ಮಮತಾರಾವ್ ಆಗಮಿಸಿ ವಿದ್ಯಾರ್ಥಿಗಳು ಜೀವನದಲ್ಲಿ ಸರಳತೆಯೊಂದಿಗೆ ದೇಶದ ಉತ್ತಮ ಪ್ರಜೆಗಳಾಗುವಂತೆ ತಿಳಿಸಿದರು. ಅದೇ ರೀತಿ ಕೃಷಿ ವಿಭಾಗದ ನಿರ್ದೇಶಕರಾದ ಮನೋಜ್ ಮಿನೇಜಸ್ ಮಾತಾನಡಿ ರೈತರಿಗೆ ಪುಸ್ತಕದ ವಿಚಾರಗಳ ಕುರಿತು ತಿಳಿಸುವ ಬದಲು ಪ್ರಾಕ್ಟಿಕಲ್ ಅನುಭವದ ವಿಜ್ಞಾನವೆಂಬ ಜ್ಞಾನದ ಅಂಶಗಳನ್ನು ತಿಳಿಸುವ ಅಗತ್ಯತೆ ಇದೆ ಎಂಬುದಾಗಿ ತಿಳಿಸಿದರು. ತೋಟಗಾರಿಕಾ ವಿದ್ಯಾಲಯದ ಡಾ.ಗಣೇಶ್ ರವರು ತರಬೇತಿ ಸಂಸ್ಥೆಯ ಹಾಗೂ ಧರ್ಮಸ್ಥಳ ಕ್ಷೇತ್ರದ ಕಾರ್ಯವೈಖರಿ ವಿಶ್ವಕ್ಕೆ ಮಾದರಿ ಎಂಬುದಾಗಿ ತಿಳಿಸಿದರು. ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಚಂದ್ರಶೇಖರ್ ಉಪಸ್ಥಿತರಿದ್ದರು. ತರಬೇತಿ ಸಂಯೋಜಕಾರದ ಬಾಲಕೃಷ್ಣ ಉಪನ್ಯಾಸಕರು ವಂದಿಸಿದರು. ವಿದ್ಯಾರ್ಥಿಗಳು ಮನದಾಳದ ಮಾತುಗಳಿಂದ ಸಂಸ್ಥೆಯ ಹಾಗೂ ಅಧಿಕಾರಿವರ್ಗದ ಅವಿರತ ಶ್ರಮದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂಸ್ಥೆಯಲ್ಲಿ ಕಲಿತ ಅನುಭವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

ಬಾಲಕೃಷ್ಣ ಎಮ್.
ಉಪನ್ಯಾಸಕರು

Leave a Reply

Your email address will not be published. Required fields are marked *