ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಕಾರ್ಕಳ ತಾಲೂಕಿನ ಬೈಲೂರು ವಲಯದ ಬೈಲೂರು ಎರ್ಲಪಾಡಿ ಕಾರ್ಯಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯನ್ನು ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರಿನಲ್ಲಿ ನಡೆಸಲಾಯಿತು. ಧಾರ್ಮಿಕ ಪ್ರವಚನಕಾರರಾಗಿ ಯುವ ಪತ್ರಕರ್ತರಾದ ಶ್ರೀಯುತ ಶ್ರೀಕಾಂತ್ ಶೆಟ್ಟಿ ನಿಟ್ಟೆ ಇವರು ವರಮಹಾಲಕ್ಷ್ಮಿ ಪೂಜೆಯ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷರಾದ ಶಕೀಲಾ ಡಿ ಶೆಟ್ಟಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಮಲ್ಲಿಕಾ ಉಪಸ್ಥಿತರಿದ್ದರು. ಕಾಂತರಗೋಳಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಉಷಾ ಗೋವಿಂದೂರು ಒಕ್ಕೂಟದ ಉಪಾಧ್ಯಕ್ಷೆ ಸುಮತಿ, ನೂತನವಾಗಿ ಉದ್ಘಾಟನೆಗೊಂಡ ಜಾರ್ಕಳ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಆಶಾ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಜಾರ್ಕಳ ಒಕೂಟವನ್ನು ಉದ್ಘಾಟಿಸಲಾಯಿತು. ಬೈಲೂರು ವಲಯ ಮೇಲ್ವಿಚಾರಕರಾದ ಹರೀಶ್ ಸ್ವಾಗತಿಸಿ ಕಾಂತರಗೋಳಿ ಒಕ್ಕೂಟದ ಸೇವಾಪ್ರತಿನಿಧಿ ಕಾರ್ಯಕ್ರಮ ನಿರೂಪಿಸಿ ಗೋವಿಂದೂರು ಒಕ್ಕೂಟದ ಸೇವಾಪ್ರತಿನಿಧಿ ಸುನೀಲ್ ವಂದಿಸಿದರು. ಸುಮಾರು 320 ಕ್ಕೂ ಮಿಕ್ಕಿದ ವೃತದಾರಿಗಳು ಪೂಜೆಯಲ್ಲಿ ಭಾಗವಹಿಸಿದರು. ಮದ್ಯಾಹ್ನ ನಂತರ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಕೃಷ್ಣ ಟಿ
ಯೋಜನಾಧಿಕಾರಿ