NewsTraining

ಸ್ವ ಉದ್ಯೋಗ ಮಾಡಿ ಬದುಕು ಹಸನಾಗಿಸಿ

 ಮಹಿಳೆಯರಿಗೆ ಸ್ವ ಉದ್ಯೋಗ ಮಾಡಿ ಜೀವನ ಸಾಗಿಸಲು ಇಂತಹ ಟೈಲರಿಂಗ್ ತರಬೇತಿಗಳು ಬಹಳ ಪ್ರಾಮುಖ್ಯತೆ ವಹಿಸುತ್ತದೆ ಎಂಬುದಾಗಿ, ಕೈ ಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ, ಗ್ರಾಮೀಣ ಶೇಷ್ಠತಾ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದಲ್ಲಿ ಸಿರಿ ಗ್ರಾಮೊದ್ಯೋಗ ಸಂಸ್ಥೆ ರಾಜಮಹಲ್ ಬೆಳ್ತಂಗಡಿಯಲ್ಲಿ ನಡೆದ ಸಿದ್ದ ಉಡುಪು ತಯಾರಿಯ ಉದ್ಘಾಟನಾ ಸಮಾರಂಭದಲ್ಲಿ ತರಬೇತಿಯನ್ನು ಉದ್ಘಾಟನೆ ಮಾಡಿದ ಶ್ರೀಮತಿ ವೀಣಾ ರಾವ್, ಅಧ್ಯಕ್ಷರು, ಗ್ರಾಮ ಪಂಚಾಯತ್ ಲಾೈಲ ರವರು ಟೈಲರಿಂಗ್ ತರಬೇತಿ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಚಂದ್ರಶೇಖರ್ ನಿರ್ದೇಶಕರು ಶ್ರೀ.ಕ್ಷೇ.ಧ.ಗ್ರಾ.ಯೋಜನೆ ದ.ಕ ಇವರು ಮಾತನಾಡಿ ಸ್ವ-ಉದ್ಯೋಗದ ಮೂಲಕ ಮಹಿಳೆಯರು ಸ್ವಾವಲoಬಿಗಳಾಗಬೇಕು. ಜೀವನದಲ್ಲಿ ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು ಎಂಬುದಾಗಿ ತಿಳಿಸಿದರು. ಹಾಗೂ ಯಾವುದೇ ಸ್ವ ಉದ್ಯೋಗದ ಬಗ್ಗೆ ಕೀಳಾಗಿ ಕಾಣುವುದು ತಪ್ಪು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಕೆ.ಬೂದಪ್ಪ ಗೌಡ, ನಿರ್ದೇಶಕರು ಗ್ರಾಮೀಣ ಶೇಷ್ಠತಾ ಕೇಂದ್ರ ಬೆಳ್ತಂಗಡಿ ರವರು ಮಾತನಾಡಿ ಈ ತರಬೇತಿಯು 45 ದಿನ ನಡೆಯಲಿದ್ದು ಈ ತರಬೇತಿಯು ಆರ್ಥಿಕ ವರ್ಷದ ಪ್ರಥಮ ತರಬೇತಿ ಆಗಿರುತ್ತದೆ. ಇದು 23 ನೇ ಬ್ಯಾಚ್‍ನ ತರಬೇತಿ ಆಗಿರುತ್ತದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ 3,500/-ಗಳನ್ನು ಗೌರವಧನವನ್ನು ನೀಡುತ್ತಿದೆ ಎಂದು ತಿಳಿಸಿದರು. ಹಾಗೆಯೇ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ಸ್ವ ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ತರಬೇತಿ ಪಡೆದ ನಂತರದಲ್ಲಿ ನಿಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ದೃಡ ನಿರ್ಧಾರದಿಂದ ತರಬೇತಿಯನ್ನು ಪಡೆದುಕೊಳ್ಳಿ ಎಂದು ಹೇಳುತ್ತಾ ಶುಭಹಾರೈಸಿದರು.
ವೇದಿಕೆಯಲ್ಲಿ ಶ್ರೀ ಜಯಕರ್ ಶೆಟ್ಟಿ ಯೋಜನಾಧಿಕಾರಿಗಳು ಬೆಳ್ತಂಗಡಿ ತಾಲೂಕು, ಶ್ರೀ ರೋಹಿತಾಕ್ಷ ಯೋಜನಾಧಿಕಾರಿಗಳು ಸಿರಿ ಗ್ರಾಮೋದ್ಯೋಗ ಸಂಸ್ಥೆ, ಇವರುಗಳು ಉಪಸ್ಥಿತಿ ಇದ್ದರು.
ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಶೇಖರ್ ಸ್ವಾಗತಿಸಿದರು. ಅನಿತಾ ಬಿ.ಜಿ ಪ್ರಾರ್ಥನೆ ಮಾಡಿದರು. ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಗೋಪಾಲ.ಯು ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಗೋಪಾಲ ಯು.
ಉಪನ್ಯಾಸಕರು

Leave a Reply

Your email address will not be published. Required fields are marked *