ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕಾರ್ಯಕ್ರಮಗಳಲ್ಲಿ ಒಂದಾದ ಕೌಶಲಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ಆಯೋಜಿಸಲಾದ ಬ್ಯೂಟಿಶೀಯನ್ ಸೇವಾಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಗದು ಸಹಾಯಕರಿಗೆ ಕಾರ್ಯಕ್ಷಮತೆ ಹೆಚ್ಚಿಸಲು ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮವನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ| ಪ್ರಕಾಶ್ ಭಟ್ ಇವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಅಭ್ಯರ್ಥಿಗಳನ್ನು ಉದ್ದೇಶಿಸಿ “ಸತ್ಯಂ ಶಿವಂ ಸುಂದರಂ ಎಂಬುದರಲ್ಲಿ ಸೌಂದರ್ಯ ಎನ್ನುವುದು ಒಂದು ಸೂಕ್ಷ್ಮವಾದ ಪರಿಧಿಯನ್ನು ಹೊಂದಿದ್ದು. ನಾವೀ ಸೌಂದರ್ಯವನ್ನು ಎಲ್ಲದರಲ್ಲೂ ಕಾಣುತ್ತೇವೆ, ಅದನ್ನು ಗುರುತಿಸುವ ಕಣ್ಣು ನಮ್ಮದಾಗಬೇಕು. ಸೌಂದರ್ಯದಲ್ಲಿ ಶಿವನಿದ್ದಾನೆ. ಅಂತಹ ತೇಜಸ್ಸು, ಕಾಂತಿ ಸೌಂದರ್ಯದಲ್ಲಿದೆ. ಸೌಂದರ್ಯದ ಕಲ್ಪನೆಯನ್ನು ಜನರಲ್ಲಿ ಬ್ಯೂಟಿಶೀಯನ್ ತಜ್ಞರಾದ ನಾವುಗಳು ಬೆಳೆಸಿಕೊಳ್ಳಬೇಕು ಹಾಗೆಯೇ ಯೋಜನೆಯ ಸಿಬ್ಬಂದಿ ವರ್ಗದವರಾದ ನಗದು ಸಹಾಯಕರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಹಣಕ್ಕೆ ಮೌಲ್ಯ ನೀಡಿದವನು ಮನುಷ್ಯ, ಆದರೆ ಹಣವೇ ನಮ್ಮ ಜೀವನವಲ್ಲ, ಹಣ ಮನುಷ್ಯನ ಕೈಯಲ್ಲಿ ಬಂದರೇ ಸಹಜವಾಗಿ ಮನಸ್ಸು ವಿಚಲಿತಗೊಳ್ಳುತ್ತದೆ. ಆದರೆ ಯೋಜನೆಯು ನಿಮ್ಮ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಜವಾಬ್ದಾರಿಯನ್ನು ನೀಡಿದೆ. ಅದನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ” ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಸಂತೋಷ್ ರಾವ್, ಉಪನ್ಯಾಸಕರಾದ ಶ್ರೀ ನಿಂಗಪ್ಪ ಜಿ, ಶ್ರೀ ಜೈವಂತ್ ಪಟಗಾರ ಉಪಸ್ಥಿತರಿದ್ದು, ತರಬೇತಿಯಲ್ಲಿ ವಿವಿಧ ತಾಲೂಕುಗಳಿಂದ ಒಟ್ಟು 25 ಮಂದಿ ಬ್ಯೂಟಿಷಿಯನ್ ಅಭ್ಯರ್ಥಿಗಳು ಮತ್ತು 26 ಮಂದಿ ನಗದು ಸಂಗ್ರಾಹಕರು ಭಾಗವಹಿಸಿ ಪ್ರಯೋಜನ ಪಡೆಯುತ್ತಿದ್ದಾರೆÉ.
ಬ್ಯೂಟಿಶೀಯನ್ ಕೌಶಲಾಭಿವೃದ್ಧಿ ಹಾಗೂ ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

2 thoughts on “ಬ್ಯೂಟಿಶೀಯನ್ ಕೌಶಲಾಭಿವೃದ್ಧಿ ಹಾಗೂ ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ”
S S L C pail
Butycian job