NewsTechnologyTraining

ಕೌಶಲಾಭಿವೃದ್ಧಿ ತರಬೇತಿಗಳ ಉದ್ಘಾಟನಾ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾಲುದಾರ ಕುಟುಂಬಗಳು ಸ್ವಾವಲಂಬಿಯಾಗಿ ಜೀವನವನ್ನು ಸಾಗಿಸಲು ಅನುವಾಗುವ ನಿಟ್ಟಿನಲ್ಲಿ ಕೌಶಲಾಬಿವೃದ್ಧಿ ತರಬೇತಿಗಳನ್ನು ಆಯೋಜಿಸುತ್ತಿದೆ. ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಿದ್ಧ ಉಡುಪು ತಯಾರಿಕೆ (ಡಿಸೈನ್‍ಡ್ ಬೌಸ್ ಸ್ಟಿಚ್ಚಿಂಗ್) ಮತ್ತು ಕಂಪ್ಯೂಟರ್ ಸೇವಾಧಾರಿತ (Cyber cafe) ಕೌಶಲಾಭಿವೃದ್ಧಿ ತರಬೇತಿಗಳ ಉದ್ಘಾಟನೆಯನ್ನು ದಿನಾಂಕ 25.12.2018 ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದ್ರಿ ತರಬೇತಿಯ ಉದ್ಘಾಟನಾ ಸಮಾರಂಭವನ್ನು ಜ್ಞಾನದ ಪ್ರತೀಕವಾದ ಜ್ಯೋತಿ ಬೆಳಗುವ ಮೂಲಕ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ| ಪ್ರಕಾಶ್ ಭಟ್ ಇವರು ನೇರವೇರಿಸಿದರು. ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ‘ಜ್ಞಾನ ವಿಕಾಸ ತರಬೇತಿ ಸಂಸ್ಥೆಯು ಧರ್ಮಸ್ಥಳವನ್ನು ಪ್ರತಿನಿಧಿಸುತ್ತದೆ. ಇಲ್ಲಿ ನೀವು ವಿವಿಧ ಕೌಶಲಾಭಿವೃದ್ಧಿ ತರಬೇತಿಗಳಾದ ಸಿದ್ಧ ಉಡುಪು ತಯಾರಿಕೆ ಮತ್ತು ಕಂಪ್ಯೂಟರ್ ಸೇವಾಧಾರಿತ Cyber cafe ತರಬೇತಿಯನ್ನು ಅತ್ಯಂತ ಆಸಕ್ತಿಯಿಂದ ಪಡೆಯಬೇಕು. ಸ್ವ-ಉದ್ಯೋಗ ತರಬೇತಿಗಳ ಪೈಕಿ ಕಂಪ್ಯೂಟರ್‍ನಲ್ಲಿ ಲಭ್ಯವಿರುವ ಎಕ್ಸೆಲ್ ಸಾಫ್ಟ್‍ವೇರ್‍ನಂತೆ ಇದನ್ನು ಬಳಕೆ ಮಾಡಿದಷ್ಟು ನಾವಿನ್ಯತೆ ಹಾಗೂ ಹೊಸತನವನ್ನು ಬಳಕೆದಾರನಿಗೆ ಬೇಕಾದಂತೆ ಅನೂಕೂಲಕರವಾಗಿದ್ದು, ಇದೊಂದು ಕಂಪ್ಯೂಟರ್ ಕ್ಷೇತ್ರ  ಅದ್ಭುತ ಎಂದರೂ ತಪ್ಪಾಗಲಾರದು. ಇಲ್ಲಿ ತಾಂತ್ರಿಕವಾಗಿ ಅಷ್ಟೇ ಅಲ್ಲದೇ ಪ್ರಾಯೋಗಿಕವಾಗಿ ಕಲಿತು ಕೌಶಲವನ್ನು ಪಡೆದುಕೊಂಡು ಸಮಾಜಕ್ಕೆ ಒಳ್ಳೆಯ ಸೇವೆಗಳನ್ನು ನೀಡುವ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಿ ಎಂದು ಭಹಾರೈಸಿದರು.’

ನಂತರದಲ್ಲಿ ಜ್ಞಾನ ಮತ್ತು ಕೌಶಲಗಳು ವ್ಯಕ್ತಿಯೊಬ್ಬನ ಬೆಳವಣಿಗೆಗೆ ಅತ್ಯಂತ ಅವಶ್ಯವಾದುದು, ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಸ್ವ-ಉದ್ಯೋಗ ಕ್ಷೇತ್ರವು ಅತ್ಯಂತ ಉತ್ತಮವಾದ ಆಯ್ಕೆಯಾಗಿದ್ದು, ಮಾನಸಿಕ ಬಡತನದಿಂದ ಹೊರ ಬಂದರಷ್ಟೇ ಸುಂದರ ಹಾಗೂ ಆರ್ಥಿಕವಾಗಿ ಸದೃಢ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಸಂತೋಷ್‍ರಾವ್ ಪಿ ಇವರು ತಿಳಿಸಿದರು. ಉಪನ್ಯಾಸಕರಾದ ಶ್ರೀಮತಿ ವಿಜಯಲಕ್ಷ್ಮಿ ನೆಗಳೂರು, ಹೊಲಿಗೆ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಶಿಗ್ಗಾವಿ ಮತ್ತು ಕಂಪ್ಯೂಟರ್ ಶಿಕ್ಷಕಿಯಾದ ಕು ಅಶ್ವಿನಿ ನಂದಿಹಳ್ಳಿ ಇವರು ಉಪಸ್ಥಿತರಿದ್ದು, ಐದು ದಿನಗಳ ಕಾಲ ನಡೆಯಲಿರುವ ಕಂಪ್ಯೂಟರ್ ತರಬೇತಿಯಲ್ಲಿ 14 ಮಂದಿ, ಟೈಲರಿಂಗ್ ತರಬೇತಿಯಲ್ಲಿ 29 ಮಂದಿ ಭಾಗವಹಿಸುತ್ತಿದ್ದು ಒಟ್ಟು 43 ಮಂದಿ ತರಬೇತಿಯ ಪ್ರಯೋಜನವನ್ನು ಪಡೆಯಲಿದ್ದಾರೆ.

Leave a Reply

Your email address will not be published. Required fields are marked *