ಮನಸ್ಸನ್ನು ಪರಿವರ್ತನೆ ಮಾಡಿ ದುರಭ್ಯಾಸಗಳಿಗೆ ಬಲಿಯಾದವರನ್ನ ಸಮಾಜದ ಮುಖ್ಯವಾಹಿನಿಗೆ ತರುವುದರ ಮುಖೇನ ಕುಟುಂಬದ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ ಎಂಬುದಾಗಿ ರೈತ ಮುಖಂಡರಾಗಿರುವ ಶ್ರೀಮತಿ ಸುನಿತ ಪುಟ್ಟಣ್ಣಯ್ಯರವರು ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಪಾಂಡವಪುರ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮದ್ಯವರ್ಜನ ಶಿಭಿರ ವ್ಯವಸ್ಥಾಪನಾ ಸಮಿತಿ ಎಣ್ಣೆಹೊಳೆಕೊಪ್ಪಲು,ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕ್ಯಾತನಹಳ್ಳಿ ವಲಯ,ಸ್ಥಳಿಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 1312 ನೇ ಮಧ್ಯವರ್ಜನ ಶಿಭಿರ ಉದ್ಘಾಟನೆ ಮಾಡಿ ಮಾತನಾಡಿದರು.
ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರು ವಹಿಸಿಕೊಳ್ಳುವಷ್ಟೆ ಜವ್ದಾರಿಯನ್ನ ಪುರುಷರು ವಹಿಸಿಕೊಳ್ಳಬೇಕು.ಮನಸ್ಸನ್ನ ಬದಲಾವಣೆ ಮಾಡಿಕೊಂಡು ದುರಭ್ಯಾಸಗಳನ್ನ ತ್ಯಜಿಸಿ ವಿಶ್ವಮಾನವರಾಗಿ ಬದುಕಬೇಕೆಂಬುದಾಗಿ ಸಲಹೆ ನೀಡಿದರು. ಜಂಜಾಟದ ಬದುಕಿನಲ್ಲಿ ಮನಸ್ಸು ಒತ್ತಡಕ್ಕೆ ಒಳಗಾಗುವುದು ಸಹಜ ಹಾಗೆಂದ ಮಾತ್ರಕ್ಕೆ ದುರಭ್ಯಾಸಗಳಿಗೆ ಬಲಿಯಾಗುವುದ ಸರಿಯಲ್ಲ ಎಂಬುದಾಗಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಶ್ರೀ ನಿಂಗೇಗೌಡ,ಉಪಾದ್ಯಕ್ಷ ಶ್ರೀ ಶಿವಣ್ಣ,ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ.ಟಿ.ಶಂಕರನಾಂದ ಗೌರವಾದ್ಯಕ್ಷರಾದ ವೈ.ಆರ್.ದೊರೆಸ್ವಾಮಿ,ವಿಶಾಲಾಕ್ಷಿ ಸಮುಧಾಯ ಭವನದ ಅಧ್ಯಕ್ಷರಾದ ವೈ.ಎಸ್.ದಿಲಿಪ್ ಕುಮಾರ್,ಗ್ರಾ.ಪಂ.ಸದಸ್ಯರಾದ ಶ್ರೀ ಮಂಜುನಾಥ್,ತಾ.ಪಂ.ಉಪಾದ್ಯಕ್ಷರಾದ ಲಕ್ಷ್ಮೀ ರಂಗಸ್ವಾಮಿ,ಪಾರ್ಥಸಾರತಿ,ತಾಲೂಕು ಯೋಜನಾಧಿಕಾರಿ ದಯಾನಂದ್ ಮೊದಲಾದವರು ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ಅಮಿತಾ,ನಿಂಗನಾಯಕ್,ಮಂಜು,ವಿಜೇಶ್ ಜೈನ್ ಕಾರ್ಯಕ್ರಮಕ್ಕೆ ಸಹಕರಿಸಿದರು.ಮೇಲ್ವಿಚಾರಕರಾದ ಮುನೇಶ್ ಸ್ವಾಗತಿಸಿದರು,ಕೃಷಿ ಮೇಲ್ವಿಚಾರಕರಾದ ಸಂತೋಷ್ ನಿರ್ವಹಿಸಿದರು.