NewsTraining

ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

“ಹೊಸ ಹೊಸ ವಿಚಾರಗಳ ಕುರಿತಾಗಿ ಹಂಬಲವನ್ನು ಬೆಳೆಸಿಕೊಂಡರೆ ಅಭಿವೃದ್ಧಿ ಸಾಧ್ಯ”. ಎಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿಯನ್ನು ದೀಪ ಬೆಳಗಿಸುವ ಮುಖೇನ ಉದ್ಘಾಟಿಸಿ, ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಎ.ಶ್ರೀಹರಿ ರವರು ಶುಭಕೋರಿದರು.
“ದುಡಿಮೆ ಅನುಭವವನ್ನು ಹೆಚ್ಚಿಸುತ್ತದೆ ನಮ್ಮ ಸಾಮಥ್ರ್ಯ ಎಷ್ಟೇಂದು ಅನುಭವಕ್ಕೆ ಬರಬೇಕಾದರೆ ನಿರಂತರವಾಗಿ ಕೆಲಸವನ್ನು ಹೊರೆಯಂದುಕೊಳ್ಳದೇ, ಕಲಿಕೆಯ ಮನಸ್ಥಿತಿಯಲ್ಲಿ ಒಪ್ಪಿಕೊಂಡರೆ ಮನುಷ್ಯನಿಗೆ ತಿಳಿಯದೇ ಅಡಗಿರುವ ಪ್ರತಿಭೆ ಹೊರಬರಲು ಸಾಧ್ಯ, ಆದ್ದರಿಂದ ಫಲಾನುಭವಿಗಳಿಗೆ ಉತ್ತಮ ಸೇವೆ ನೀಡಲು ಕಛೇರಿ ಸಹಾಯಕರು ತಮ್ಮನ್ನು ಸಮಾಜ ಸೇವಾ ಮನೋಭಾವದಲ್ಲಿ ತೊಡಗಿಸಿಕೊಳ್ಳಬೇಕು. ನಿರ್ವಹಿಸುತ್ತಿರುವ ಕೆಲಸದಲ್ಲಿ ಶ್ರದ್ಧೆ, ಬದ್ಧತೆಯೊಂದಿಗೆ ಸಲ್ಲಿಸಿದ್ದೇ ಆದಲ್ಲಿ ಮುಂಬಡ್ತಿ ಅವಕಾಶವನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಕೇಂದ್ರ ಕಛೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶನದಂತೆ ಕಾರ್ಯಕರ್ತರ ಕುಂದು ಕೊರತೆ ನೀಗಿಸಲು, ಸಾಮಥ್ರ್ಯಾವನ್ನು ವೃದ್ಧಿಸಲು, ಯೋಜನೆಯ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಲು ಪ್ರತಿ ವರ್ಷ ಪ್ರತಿ ಸಿಬ್ಬಂದಿಗೂ ತರಬೇತಿಯನ್ನು ನೀಡಲಾಗುತ್ತಿದ್ದು, ಹೊಸದಾಗಿ ಸೇರ್ಪಡೆಯಾದ ಕಛೇರಿ ಸಹಾಯಕರಿಗೆ ಕ್ಷೇತ್ರದ ಹಿನ್ನಲೆ, ಯೋಜನೆಯ ಕಾರ್ಯಕ್ರಮ ಹಾಗೂ ಹೊಸ ತಂತ್ರಜ್ಞಾನದ ಮಾಹಿತಿ, ವ್ಯಕ್ತಿತ್ವ ವಿಕಾಸ…ಇತ್ಯಾದಿ ವಿಷಯಗಳು ಈ ತರಬೇತಿಯಲ್ಲಿ ಅಳವಡಿಸಲಾಗಿದ್ದು ಪ್ರಾಯೋಗಿಕ ಹಾಗೂ ಇತರ ಚಟುವಟಿಕೆಗಳು ಹೊಂದಿರುತ್ತದೆ ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರ ಪ್ರಾಸ್ತವಿಕ ನುಡಿಯಲ್ಲಿ ತರಬೇತಿಯ ರೂಪು ರೇಷೆಗಳನ್ನು ತಿಳಿಸಿಕೊಟ್ಟರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯಾವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೇಯ ಉಪನ್ಯಾಸಕರಾದ ಶಿವಕುಮಾರ್‍ರವರು ನೆರವೆರಿಸಿಕೊಟ್ಟರು. ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಕುವೆಂಪುನಗರ, ಮೈಸೂರು ಇಲ್ಲಿ ಆಯೋಜಿಸಲಾಗಿದ್ದು ಈ ತರಬೇತಿಗೆ ಮೈಸೂರು, ಬೆಂಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧ ಜಿಲ್ಲಾ ಹಾಗೂ ಯೋಜನಾ ಕಛೇರಿಯ ಒಟ್ಟು 19 ಕಛೇರಿ ಸಹಾಯಕರು ಪಾಲ್ಘೊಂಡಿರುತ್ತಾರೆ. ತರಬೇತಿಯು ವಿವಿಧ ಬಗೆಯ ವಿಷಯಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಹೊಂದಿರುತ್ತದೆ.

Leave a Reply

Your email address will not be published. Required fields are marked *