ಮುರ್ಡೇಶ್ವರ ಶ್ರೀ ರಾಘವೇಶ್ವರ ಹವ್ಯಕ ಸಭಾಭವನದಲ್ಲಿ ದಿನಾಂಕ : 23.01.2019 ರಿಂದ ದಿನಾಂಕ : 30.01.2019ರ ವೆರಗೆ ಮದ್ಯವರ್ಜನ ಶಿಬಿರ ನಡೆದಿದ್ದು, ಜಿಲ್ಲಾ ಪಂಚಾಯತ್ ಅರ್ಧಕ್ಷರಾದ ಜಯಶ್ರೀ ಮೊಗೇರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶಂಕರ ಶೆಟ್ಟಿ ನಿರ್ದೇಶಕರು ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ (ರಿ,)ಕುಮಟಾ ನಿರ್ದೇಶನಾಲಯ, ಹಾಗೂ ಶಿಬಿರಾಧಿಕಾರಿಗಳಾದ ಶ್ರೀ ವಿದ್ಯಾಧರ್ ಹಾಗೂ ಆರೋಗ್ಯ ಸಹಾಯಕಿಯರು ಮಂತಾದ ಗಣ್ಯ ವ್ಯಕ್ಷಿಗಳು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಒಟ್ಟು 100 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ವೈದ್ಯಾಧಿಕಾರಿಗಳಾದ ಡಾ|| ಆಯ್.ಆರ್.ಭಟ್ , ಡಾ|| ವಾದಿರಾಜ್, ಡಾ|| ಸುನೀಲ್ ಕೆ ಜತ್ತನ್ ಇವರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ಮಾಡಿದರು.ಶಿಬಿರಾಧಿಕಾರಿಗಳಿಂದ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ದಿನಾಂಕ : 30.01.2019 ಬೆಳಿಗ್ಗೆ 9 ಗಂಟೆಗೆ ಕುಟುಂಬ ದಿನವನ್ನು ತಿಮ್ಮಯ್ಯ ನಾಯ್ಕರವರು ನೆರವೆರಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಶೇಟ್ರವರು ವಹಿಸಿದ್ದರು, 100 ಶಿಬಿರಾರ್ಥಿಗಳನ್ನೊಳಗೊಂಡ ಈ ಶಿಬಿರವು ಯಶಸ್ವಿಯಾಯಿತು.
1323ನೇ ಮದ್ಯವರ್ಜನ ಶಿಬಿರ
