MicrofinanceNewsTraining

ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿಯ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಗದು ಸಹಾಯಯಕರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಾಮಥ್ರ್ಯಾಭಿವೃದ್ಧಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ: 21.02.2019 ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ, ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ ಪ್ರಕಾಶ್ ಭಟ್ ಇವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ‘ವಿವಿಧ ಪ್ರಾದೇಶಿಕ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಗದು ಸಹಾಯಕರು ಸಾಮಥ್ರ್ಯಾಭಿವೃದ್ಧಿ ತರಬೇತಿಗೆ ಆಗಮಿಸಿದ್ದು ಸಂತಸದ ವಿಷಯ. ಕಾರ್ಯಕರ್ತರ ಕಾರ್ಯಕ್ಷಮತೆ ಹೆಚ್ಚಿಸಲು ಇಂತಹ ತರಬೇತಿಗಳು ಬಹಳ ಅಗತ್ಯವಿದೆ. ಸತ್ಯ ತಿಳಿಯುವುದು ಒಳ್ಳೆಯದು ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಈ ವಿಷಯವನ್ನು ಎಷ್ಟು ಜನ ಬಳಸುತ್ತಿದ್ದಾರೆ ಎನ್ನುವುದು ಮುಖ್ಯ. ಹಲವಾರು ವಿಷಯಗಳು ನಮಗೆ ಗೊತ್ತಿರುತ್ತದೆ. ಆದರೆ ಅದು ಕಾರ್ಯ ರೂಪಕ್ಕೆ ಬಂದಿರುವುದಿಲ್ಲ. ಇಲ್ಲಿ ಇಂತಹ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಖಂಡಿತವಾಗಿ ಸಿಗುತ್ತದೆ, ಇಲ್ಲಿ ಸಿಗುವ ಮಾಹಿತಿಯನ್ನು ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು. ತರಬೇತಿ ಅಂದರೆ ಮಾಹಿತಿ ಮಾತ್ರವಲ್ಲ ನಮ್ಮನ್ನು ನಾವು ಸಂಸ್ಥೆಗೆ ತೊಡಗಿಸಿಕೊಳ್ಳಲು ಇರುವ ಕ್ರಿಯೆ. ಕಾರ್ಯಕರ್ತರು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು. ಸ್ವಯಂ ಸ್ಪೂರ್ತಿಯಿಂದ ಮುಂದುವರೆಯಬೇಕು. ಆಸಕ್ತಿ ಎಂಬ ದಾರಿಯನ್ನು ಹುಡುಕಿಕೊಂಡು ಯಶಸ್ವಿಯಾಗಬೇಕು. ಆಗ ಮಾತ್ರ ಮಾಡುವ ಕೆಲಸಕ್ಕೆ ಒಂದು ಅರ್ಥ ಸಿಗುತ್ತದೆ. ಸ್ವಯಂ ಸ್ಪೂರ್ತಿಯಿಂದ ಮತ್ತು ಅರ್ಥ ಮಾಡಿಕೊಂಡು ಮಾಡಿದ ಕೆಲಸಕ್ಕೆ ಫಲ ಅಧಿಕ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಸಂತೋಷ್ ರಾವ್.ಪಿ, ಶ್ರೀ ನಿಂಗಪ್ಪ ಜಿ ಮತ್ತು ಶ್ರೀ ಜೈವಂತ್ ಪಟಗಾರ ಉಪಸ್ಥಿತರಿದ್ದು, ಯೋಜನೆಯ ವಿವಿಧ ಪ್ರಾದೇಶಿಕ ವ್ಯಾಪ್ತಿಯಿಂದ ಸುಮಾರು 17 ಮಂದಿ ನಗದು ಸಹಾಯಕರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

3 thoughts on “ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿಯ ಉದ್ಘಾಟನೆ

  1. I’m premanath chinnappa teerth
    Qualification: B.com
    Age : 24
    Mob no:8722161008
    Address : A/P Shirahatti.Tq:Athani. Dist :Belagavi

Leave a Reply to Manjula basavaraj chabbi Cancel reply

Your email address will not be published. Required fields are marked *