“ಒತ್ತಡ ರಹಿತ, ಕೆಲಸದ ಪರಿಪೂರ್ಣತೆಗೆ ತರಬೇತಿ ಅತ್ಯವಶ್ಯಕ, ಆದ್ಯತೆಯ ಆಧಾರದ ಮೇಲೆ ಕೆಲಸ ನಿರ್ವಹಿಸಿದ್ದಲ್ಲಿ ಒತ್ತಡ ನಿವಾರಣೆಯಾಗುವುದು. ಕಳೆದ 2 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಹಳಷ್ಟು ಬದಲಾವಣೆ ಹೊಂದಿದ್ದು ಈಗ ಬ್ಯಾಂಕಿನ ಪ್ರತಿನಿಧಿಯಾಗಿ ಹೆಚ್ಚಿನ ಸಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ತಾಲೂಕಿನ ಎಲ್ಲಾ ಸ್ವಸಹಾಯ ಸಂಘಗಳ ಮತ್ತು ಕಛೇರಿಯ ದೈನಂದಿನ ಆರ್ಥಿಕ ವ್ಯವಾಹರಿಕ ಪರಿಪೂರ್ಣತೆಗೆ ತಾವೆಲ್ಲರೂ ಜವಾಬ್ದಾರಿಯನ್ನು ಹೊಂದಿರುತ್ತೀರಿ, ಪಾರದರ್ಶಕತೆ, ತಪಾವತುಗಳನ್ನು ಕಡಿಮೆ ಮಾಡಲು, ಕ್ಷೇತ್ರದ ಕೆಲಸಗಳಿಗೆ ಮೌಲ್ಯವನ್ನು ತಂದುಕೊಡಲು, ಹೆಚ್ಚಿನ ಸೇವೆ ನೀಡಲು ಎಲ್ಲ ಸಿಬ್ಬಂದಿಗಳು ತಂಡವಾಗಿ ಕೆಲಸವನ್ನು ಮಾಡಿ ಸಮನ್ವಯತೆ ಸಾಧಿಸಿ ಯೋಜನೆ ಹಾಗೂ ತಾವೆಲ್ಲರು ವೈಯುಕ್ತಿಕವಾಗಿ ಅಭಿವೃದ್ಧಿಗೊಳ್ಳಲಿ, ಯಶಸ್ಸು ಕಾಣಿರಿ” ಎಂದು ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಮೈಸೂರು ಜಿಲ್ಲಾ ನಿರ್ದೇಶಕರಾದ ಶ್ರೀಯುತ ವಿಜಯ ನಾಗನಳರವರು ಶುಭಕೋರಿದರು.
ರಾಮಣ್ಣಗೌಡ, ಯೋಜನಾಧಿಕಾರಿ, ಲೆಕ್ಕಪತ್ರ ವಿಭಾಗ, ಪ್ರೇಮನಾಥ್.ಎಸ್.ಹೆಚ್, ಸುವಿಧಾ ವಿಭಾಗ, ಶ್ರೀ ರಾಮ್.ಎನ್.ಪೂಜಾರಿ, ಪ್ರಬಂಧಕರು, ಲೆಕ್ಕ ಪತ್ರ ವಿಭಾಗ, ಕೇಂದ್ರ ಕಛೇರಿ, ಧರ್ಮಸ್ಥಳ ಹಾಗೂ ಶ್ರೀಮತಿ ವಿಶಾಲ ಬಿ. ಮಲ್ಲಪುರ, ಪ್ರಾಂಶುಪಾಲರು, ತರಬೇತಿ ಸಂಸ್ಥೆ , ಶ್ರೀಯುತ ವಿಶ್ವಾಸ್ಶೆಟ್ಟಿ, ಬಿ.ಸಿ.ಯೋಜನಾಧಿಕಾರಿಗಳು, ಪ್ರಾ.ಕಛೇರಿ, ಮೈಸೂರು ಇವರು ಉದ್ಘಾಟನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯಾವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಶಿವಕುಮಾರ್ ನೆರವೆರಿಸಿಕೊಟ್ಟರು. ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಕುವೆಂಪುನಗರ, ಮೈಸೂರು ಇಲ್ಲಿ ಆಯೋಜಿಸಲಾಗಿದ್ದು, ದಿನಾಂಕ:25.02.2019 ರಿಂದ 27.02.2019ರವರೆಗೆ 3 ದಿನಗಳ ಹಣಕಾಸು ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ತರಬೇತಿಗೆ ಮೈಸೂರು, ಬೆಂಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧ ಯೋಜನಾ ಕಛೇರಿಯ ಒಟ್ಟು 35 ಹಣಕಾಸು ಪ್ರಬಂಧಕರು ಪಾಲ್ಘೊಂಡಿರುತ್ತಾರೆ. ತರಬೇತಿಯು ವಿವಿಧ ಬಗೆಯ ವಿಷಯಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಹೊಂದಿರುತ್ತದೆ.
ಹಣಕಾಸು ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

One thought on “ಹಣಕಾಸು ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ತರಬೇತಿ”
Good opportunity for best poor students