NewsTrainingWomen Empowerment

ಉದ್ಯಮಶೀಲತಾ ತರಬೇತಿ ಸಮಾರೋಪ

(ಧನಶ್ರೀ ಯೋಜನೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮೈಸೂರು)
“ನಾವೆಲ್ಲ ಸಾಮಾನ್ಯ ಮಹಿಳೆಯರು, ನಮಗೆ ಇಲ್ಲಿ ಮೂರು ದಿನಗಳ ಕಾಲ ಆತ್ಮಸ್ಥೈರ್ಯ ತುಂಬಿ, ಕೈಗೊಳ್ಳಲು ನಿರ್ಧರಿಸಿರುವ ಉದ್ಯೋಗಕ್ಕೆ ಬೇಕಾಗುವ ಸಾಕಷ್ಟು ಮಾಹಿತಿ ನೀಡಿದಾರೆ.” ಎಂದು ರೇಣುಕಾ,
“ಒಬ್ಬ ಮಹಿಳೆಯಾಗಿ ನಾವು ನಮ್ಮ ಕುಟುಂಬದೊಂದಿಗೆ ಉದ್ಯೋಗದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು, ನಮ್ಮ ಮಾತುಗಾರಿಕೆ ಹೇಗಿರಬೇಕು, ನಮ್ಮ ಮಾರುಕಟ್ಟೆ ಜ್ಞಾನ, ಉದ್ಯೋಗಕ್ಕೆ ಬಂಡವಾಳವನ್ನು ಹೇಗೆ ಹೊಂದಿಸಿಕೊಂಡು ಕೈಗೊಳ್ಳಬೇಕು, ಎನ್ನುವ ಹಲವಾರು ವಿಷಯಗಳಿಗೆ ತಿಳಿಸಿದರು.” ಎಂದು ಶಿವಮ್ಮ ಮತ್ತು
“ವೀಡಿಯೋ ಚಿತ್ರ, ಆಟೋಟದೊಂದಿಗೆ, ಫಿನಾಯಿಲ್, ಸೋಪುವಾಟರ್,ಪೌಡರ್ ತಯಾರಿಸುವ ಪ್ರಾತ್ಯಕ್ಷಿಕೆಯೊಂದಿಗೆ ನೀಡಿ ನಮಗೆ ಧೈರ್ಯ ತಂದುಕೊಟ್ಟಿದ್ದಾರೆ. ಹತ್ತು ಉದ್ಯಮವನ್ನು ಜೊತೆಜೊತೆಯಾಗಿ ನಿರ್ವಹಿಸಿಕೊಂಡು ಹೆಚ್ಚು ಸ್ವ ಉದ್ಯೋಗಗಳೊಂದಿಗೆ ಆದಾಯ ಮಾಡುತ್ತಿರುವ ಗೃಹಿಣಿಯನ್ನು ಕರೆಯಿಸಿ ಮಾಹಿತಿ ಕೊಡಸಿದ್ದು, ನಮಗೆ ಸಾಧನೆ ಮಾಡಲು ಪ್ರೇರಣೆ ಪಡೆದುಕೊಂಡೆವು” ಎಂದು ಕನ್ಯಾಕುಮಾರಿಯವರು ಹೇಳಿದರು.
ಹೀಗೆ ಸಾಲು ಸಾಲಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡವರು ಬೇರೆ ಯಾರು ಅಲ್ಲ, ಮೈಸೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಧನಶ್ರೀ ಯೋಜನೆಯಡಿ ಆಯ್ದ ಫಲಾನುಭವಿಗಳು. ಇವರೆಲ್ಲರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ)ನ ಮೈಸೂರಿನ ಕುವೆಂಪು ನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ ಉದ್ಯಮಶೀಲತೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ತುಂಬು ವಿಶ್ವಾಸದಿಂದ ಮಾತನಾಡಿದ ಶಿಭಿರಾರ್ಥಿಗಳು. ಈ ತರಬೇತಿಯ ಉದ್ಘಾಟನೆಯನ್ನು ದಿ:24.06.2019ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಪದ್ಮಾ ಇವರು ದೀಪ ಬೆಳಗಿಸುವ ಮುಖೇನ ಚಾಲನೆ ನೀಡಿ, ಶಿಭಿರಾರ್ಥಿಗಳ ಯಶಸ್ವಿಗೆ ಶುಭ ಹಾರೈಸಿದ್ದರು.
ದಿ:26.06.2019ರಂದು ಕೊನೆಯ ದಿನದ ಈ ಸಮಾರಂಭದಲ್ಲಿ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ನಿರ್ಮಲಾವರು ಭಾಗವಹಿಸಿದ ಶಿಭಿರಾರ್ಥಿಗಳಿಗೆ ಸರ್ಟಿಫಿಕೇಟ್‍ಗಳನ್ನು ವಿತರಿಸಿ, ಮಹಿಳಾ ಅಭಿವೃದ್ಧಿ ನಿಗಮದ ಧನಸಹಾಯವನ್ನು ಸದುಪಯೋಗ ಪಡೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಲಹೆಯನ್ನು ನೀಡಿದರು. “ಕೈಗೆ ಕೆಲಸವಿದ್ದರೆ ಆರೋಗ್ಯಕರ ಜೀವನವೂ ತಾನಗೇ ಸೃಷ್ಠಿಗೊಳ್ಳುವುದು’, ಮನುಷ್ಯ ಒಂದಲ್ಲಾ ಒಂದು ರೀತಿ ತೊಂದರೆಯಿಂದ ನೊಂದಲ್ಪಟ್ಟವರೇ, ಈಗಾಗಲೇ ಮುಗಿದ ಕ್ಷಣಗಳ ಬಗ್ಗೆ ಯೋಚಿಸುತ್ತ ಅನ್ಯರಲ್ಲಿ ಅನಗತ್ಯ ಚರ್ಚಿಸಿ ಕಾಲಹರಣ ಮಾಡುವುದಕ್ಕಿಂತ, ಇನ್ನೂಳಿದ ಬದುಕನ್ನು ಪರಿಪೂರ್ಣವಾಗಿಸಿಕೊಳ್ಳುವಲ್ಲಿ ಹೆಜ್ಜೆಯಿಡುವುದು ಲೇಸು”.ಎಂದು ಮಾರ್ಗದರ್ಶಿಸಿ ಶುಭಕೋರಿದರು.
ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಯೋಜನೆಯ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಸ್ವ-ಸಹಾಯ ಸಂಘಗಳ ಮೂಲಕ ಹೆಚ್ಚಿನ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸರ್ಕಾರದ ಸಹಯೋಗದೊಂದಿಗೆ ಇಂತಹ ತರಬೇತಿಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಸಹಕರಿಸುತ್ತಿರುವ ಇಲಾಖೆಗಳಿಗೆ ಧನ್ಯವಾದಗಳನ್ನು ಆದ್ಯಕ್ಷತೆ ಸ್ಥಾನವನ್ನು ವಹಿಸಿದ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರರವರು ತಿಳಿಸಿದರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಶಿವಕುಮಾರ್ ನೆರವೆರಿಸಿಕೊಟ್ಟರು ಹಾಗೂ ಧನ್ಯವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿಯಾಗಿರುವ ಕು|| ರಂಜಿತ.ಎನ್. ಇವರು ನೆರವೆರಿಸಿಕೊಟ್ಟರು. ಮೈಸೂರಿನ ಕುವೆಂಪುನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ 3 ದಿನಗಳ ಈ ತರಬೇತಿಗೆ ಮೈಸೂರು ಜಿಲ್ಲೆಯಿಂದ ಒಟ್ಟು 49 ಫಲಾನುಭವಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

7 thoughts on “ಉದ್ಯಮಶೀಲತಾ ತರಬೇತಿ ಸಮಾರೋಪ

  1. Sir /madam nanu Glubarga hogi interview kottide adre mundina process enu sir namg joining letter yavaga kodtira 3 weeks aytu interview agi please bega mundina process madi sir.

  2. I am interested in skdrdp job in my life
    Because social work in village this is my contact number 7026693129

  3. Sir plz selection list website ali annouce madi intrew agi ally 1 month aythu select agila andre bere job nodkoltive plz sir

  4. ಮಾನ್ಯರೆ ಈ ಪರಿಕ್ಷಾ ಫಲಿತಾಂಶ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದ ಕಾರಣ , ದಯವಿಟ್ಟು ನನ್ನ ಫಲಿತಾಂಶ ತಿಳಿಸಿಕೊಡಿ……….
    ಹೆಸರು-ಮನೋಜ್ ಬಿ
    ಪರಿಕ್ಷಾ ಸ್ಥಳ- ಬೆಂಗಳೂರು, ದೊಡ್ಡ ಬಳ್ಳಾಪುರ,

Leave a Reply

Your email address will not be published. Required fields are marked *