Communnity DevelopmentNewsTraining

ಕೆರೆ ಸಂಜೀವಿನಿ ನೋಡಲಾಧಿಕಾರಿಗಳ ತರಬೇತಿ ಕಾರ್ಯಗಾರದ ಉದ್ಘಾಟನೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ಸರ್ಕಾರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಕರ್ನಾಟಕ ರಾಜ್ಯದ ಬಹುತೇಕ ಹೂಳು ತುಂಬಿ ದುಸ್ಥಿತಿಯಲ್ಲಿರುವ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಪುನಶ್ಚೇತನಗೊಳಿಸಲು ತಿರ್ಮಾನಿಸಿದೆ. ಕೆರೆಯ ಪುನಶ್ಚೇತನವನ್ನು ಸರ್ಕಾರದ ಕೆರೆ ಪ್ರಾಧಿಕಾರದ ನಿಯಮದಂತೆ ಅನುಷ್ಠಾನಿಸಬೇಕಾಗಿರುವ ನಿಟ್ಟಿನಲ್ಲಿ ಕೆರೆ ಸಂಜೀವಿನಿ ನೋಡಲ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ದಿನಾಂಕ 03.07.2019 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಕಛೇರಿಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಎ. ಶ್ರೀಹರಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಂತರ ನೋಡಲ್ ಅಧಿಕಾರಿಗಳನ್ನು ಉದ್ಧೇಶಿಸಿ “ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುದೀರ್ಘವಾದ ಇತಿಹಾಸವಿದೆ. ಈ ಸುಧೀರ್ಘವಾದ ಇತಿಹಾಸದಲ್ಲಿ ಕ್ಷೇತ್ರವು ಸಮಾಜಕ್ಕೆ ತುಂಬಾ ಕೊಡುಗೆಗಳನ್ನು ನೀಡಿದೆ. ಸಮಾಜದಲ್ಲಿ ಆಸ್ತಿಗೆ ಒಡೆಯರಾಗಬಹುದು, ಒಡೆಯರೇ ಆಸ್ತಿಯಾಗಬೇಕಾದರೆ ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಇದಕ್ಕೆ ಪೂಜ್ಯರೇ ಉತ್ತಮ ನಿದರ್ಶನ. ಸಮಾಜಮುಖಿ ಕೆಲಸಗಳನ್ನು ಸರ್ಕಾರ ಮಾಡಬಹುದು ಆದರೆ, ದೇಶದಲ್ಲಿರುವ ಸಮಸ್ಯೆಗಳ ತೀವ್ರತೆ ಕಡಿಮೆಯಾಗಬೇಕಾದರೆ ಸಂಘ ಸಂಸ್ಥೆಗಳ ಕೈ ಜೋಡಿಸಬೇಕಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಸೇವೆಯನ್ನು ಮಾಡುವುದರ ಮೂಲಯೀ ರೀತಿಯ ಸೇವೆಯನ್ನು ಮಾಡುತ್ತಿದೆ. ಯೋಜನೆಯ ಕಾರ್ಯಕರ್ತರಾದ ನಾವು ಸಮಾಜದ ಜನರ ಕಣ್ಣೀರು ಒರೆಸಿ ನಗುವನ್ನು ತರಿಸುವ ಕೆಲಸ ಮಾಡಬೇಕು. ಮುಖ್ಯವಾಗಿ ನಮ್ಮ ಮುಖದಲ್ಲಿ ನಗುವಿರಬೇಕು. ಪೂಜ್ಯರ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾದ ನಾವುಗಳ ಅವರ ನಂಬಿಕೆಗೆ ಎಷ್ಟು ಅರ್ಹರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ವಿಶ್ಲೇಷಿಸಿಕೊಳ್ಳಬೇಕಾಗಿದೆ. ಕರ್ನಾಟಕ ಸರ್ಕಾರದ ಕೆರೆ- ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದವರು ಪೂಜ್ಯರ ಭರವಸೆ ಮೇರೆಗೆ ಕೆರೆ ಸಂಜೀವಿನಿ ಕಾರ್ಯಕ್ರಮವನ್ನು ನೀಡಿದ್ದು ಪ್ರಾಧಿಕಾರದವರ ನಿಯಮಗಳ ಪ್ರಕಾರ ಯೋಜನೆಯನ್ನು ಅನುಷ್ಠಾನಿಸಬೇಕಾದ್ದರಿಂದ ಈ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ನಾವುಗಳ ನಿರ್ಜೀವಿಗಳಾಗಿ ವರ್ತಿಸಿದರೇ ಪೂಜ್ಯರ ನಂಬಿಕೆ ಹುಸಿಯಾಗುತ್ತದೆ. ಇಲ್ಲಿಯವರೆಗೆ ಯಾವುದೇ ಕಾರ್ಯಕ್ರಮ ಅನುಷ್ಠಾನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಹಿನ್ನಡೆಯಾಗಿಲ್ಲ ಈ ಕಾರ್ಯಕ್ರವನ್ನು ನಿಯಮದ ಪ್ರಕಾರ ಅನುಷ್ಠಾಸೋಣ” ಎಂದು ಸ್ಪೂರ್ತಿಯ ಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಕಾಶ್ ಭಟ್, ಶುದ್ಧಗಂಗಾ- ಕೆರೆ ವಿಭಾಗ ನಿರ್ದೇಶಕರಾದ ಲಕ್ಷ್ಮಣ್ ಎಂ, ಯೋಜನಾಧಿಕಾರಿಗಳಾದ ಶ್ರೀ ಪ್ರವೀಣ್ ಕುಮಾರ್, ಧಾರವಾಡ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ಮಾದವ್ ಗೌಡ್ ಮತ್ತು ಕಛೇರಿ ಪರಿವೀಕ್ಷಕರು, ಕೆರೆ ವಿಭಾಗದ ಇಂಜಿನಿಯರ್‍ಗಳು ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.

4 thoughts on “ಕೆರೆ ಸಂಜೀವಿನಿ ನೋಡಲಾಧಿಕಾರಿಗಳ ತರಬೇತಿ ಕಾರ್ಯಗಾರದ ಉದ್ಘಾಟನೆ ಕಾರ್ಯಕ್ರಮ

  1. ಈ ಸಂಸ್ಥೆ ಕೇಂದ್ರ ಸರ್ಕಾರದ. ಜೊತೆ ಸೇರಿ ಭಾರತದಾದ್ಯಂತ, ಈ ಸಂಸ್ಥೆಯ ಯೋಜನೆ ಗಳು ಜಾರಿಗೆ ತಂದರೆ , ತುಂಬಾ ಚೆನ್ನಾಗಿರುತ್ತೆ..

Leave a Reply

Your email address will not be published. Required fields are marked *