NewsTrainingWomen Empowerment

ಮಹಿಳಾ ಸಬಲೀಕರಣ ಡಿಪ್ಲೋಮಾ ತರಬೇತಿಯ ಉದ್ಘಾಟನಾ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)ಯ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರಗಳನ್ನು ನಿರ್ವಹಿಸುತ್ತಿರು ಸಂಯೋಜಕಿಯರಿಗೆ ಆಯೋಜಿಸಲಾದ ಮಹಿಳಾ ಸಬಲೀಕರಣ ಡಿಪ್ಲೋಮಾ (WED) ಪ್ರಥಮ ಹಂತದ ತರಬೇತಿಯ ಉದ್ಘಾಟನೆಯನ್ನು ದಿನಾಂಕ 11.07.2019 ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದ್ರಿ ತರಬೇತಿಯ ಉದ್ಘಾಟನೆಯನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಕಾಶ್ ಭಟ್ ಇವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ‘ವಿವಿಧ ತಾಲೂಕುಗಳಿಂದ ತರಬೇತಿಗೆ ಆಗಮಿಸಿದ್ದು ಸಂತಸದ ವಿಷಯ. ಸ್ಥಾನಮಾನಗಳ ವಿಷಯ ಬಂದಾಗ ಹೆಣ್ಣು ಎಂದರೆ ಪುರುಷರಿಗಿಂತ ಕೆಳಗಿನ ಸ್ಥಾನ ಎಂದು ನಮ್ಮ ಸಮಾಜ ನಿರ್ಧರಿಸಿದೆ. ಅದಕ್ಕೆ ಬದ್ಧವಾಗಿ ಮಹಿಳೆಯು ಅದನ್ನು ಒಪ್ಪಿಕೊಂಡಿದ್ದಾಳೆ. ತನ್ನ ಒಡಲಲ್ಲಿ ಎಷ್ಟೇ ನೋವಿದ್ದರೂ ಅದನ್ನು ತನ್ನಲ್ಲಿ ಬಂಧಿಸುತ್ತಾಳೆ ಮತ್ತು ಕಷ್ಟ ಪಡುತ್ತಾಳೆ. ಇಂತಹ ಮಹಿಳೆಯರಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಆಶಾಕಿರಣ ಮೂಡಿಸುತ್ತಿದೆ. ಸ್ವ ಸಹಾಯ ಸಂಘಗಳು ಮತ್ತು ಜ್ಞಾನವಿಕಾಸ ಕೇಂದ್ರಗಳ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಮಾಹಿತಿ ಕಾರ್ಯಕ್ರಮಗಳ ಮುಖೇನ ಅವಳಲ್ಲಿ ಜ್ಞಾನದ ಅಮೃತವನ್ನು ಉಣಿಸುತ್ತಿದೆ. ಇವರಿಂದ ಅವಳು ತನ್ನ ನೋವನ್ನು ಪುರುಷರಿಗೆ ಅರ್ಥಮಾಡಿಸುವಲ್ಲಿ ಸಫಲಳಾಗುತ್ತಿದ್ದಾಳೆ ಇದರಿಂದ ಗಂಡಸರಿಗೂ ಕಷ್ಟವಿಲ್ಲ ಮಹಿಳೆಗೂ ದುಃಖವಿಲ್ಲ. ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮಾಹಿತಿ ಕಾರ್ಯಕ್ರಮಗಳ ಮುಖೇನ ಅವಳಲ್ಲಿ ಜ್ಞಾನದ ಬುತ್ತಿ ಉಣಬಡಿಸುವ ಕೆಲಸ ನೀವು ಮಾಡಬೇಕು ಅದಕ್ಕೆ ಪೂರಕವಾಗಿ ಈ ತರಬೇತಿಯನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ ಸಂತೋಷ್ ರಾವ್ ಶ್ರೀ ಜೈವಂತ್ ಪಟಗಾರ, ಶ್ರೀಮತಿ ವಿಜಯಲಕ್ಷ್ಮಿ ನೆಗಳೂರು ಮತ್ತು ಕು. ವೈಷ್ಣವಿ ರೆಡ್ಡಿ ಉಪಸ್ಥಿತರಿದ್ದರು. ಧಾರವಾಡ ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಒಟ್ಟು 84 ಮಂದಿ ಸಂಯೋಜಕಿಯರು ಮೂರು ದಿನಗಳ ಕಾಲ ನಡೆಯಲಿರುವ ತರಬೇತಿಯ ಪ್ರಯೋಜನವನ್ನು ಪಡೆಯಲಿದ್ದಾರೆ.

One thought on “ಮಹಿಳಾ ಸಬಲೀಕರಣ ಡಿಪ್ಲೋಮಾ ತರಬೇತಿಯ ಉದ್ಘಾಟನಾ ಸಮಾರಂಭ

Leave a Reply

Your email address will not be published. Required fields are marked *