NewsTrainingWomen Empowerment

ಹೆಣ್ಣಿಗೆ ಶಿಕ್ಷಣ ಮತ್ತು ಪ್ರಾಧ್ಯನೆತೆ ನೀಡುವಿಕೆ ಅವಶ್ಯಕ – ಪಿ.ಗಂಗಾಧರ ರೈ

“ನಮ್ಮ ಮುಂದೆ ಕಾಣುವ ಪ್ರತ್ಯಕ್ಷ ದೇವರೆಂದರೆ ಅದು ‘ಹೆಣ್ಣು’, ಎಲ್ಲಾ ಗುಣಗಳನ್ನು, ಸರ್ವ ಬದಲಾವಣೆಯನ್ನು ತರುವ ಮತ್ತು ನಿಭಾಯಿಸುವ ಛಲಗಾತಿ ಇವಳು. ಕುಟುಂಬ ಮತ್ತು ಸಮಾಜದ ಬದಲಾವಣೆಯಾಗಬೇಕಾದರೆ ಹೆಣ್ಣಿಗೆ ಶಿಕ್ಷಣ ಮತ್ತು ಪ್ರಾಧ್ಯನೆತೆ ನೀಡುವಿಕೆ ಅವಶ್ಯವಾಗಿರುತ್ತದೆ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾತೃಶ್ರೀ ಹೇಮಾವತಿ ಅಮ್ಮನವರು ‘ಗೆಳತಿ ಕಾರ್ಯಕ್ರಮ’ದಡಿ ಕುಟುಂಬದಲ್ಲಾಗುವ ಸಮಸ್ಯೆಗಳಿಗೆ ಸ್ಪಂದನೆ ಮತ್ತು ‘ಜ್ಞಾನವಿಕಾಸ’ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಪೂರಕವಾಗಿ ಅರಿವು, ಹೊಸ ಚಿಂತನೆಗೆ, ಪ್ರಾಧ್ಯನೆತೆ ನೀಡುವುದಕ್ಕೆ ನಾಂದಿ ಹಾಡಿದ್ದಾರೆ. ಜ್ಞಾನ, ಶಿಸ್ತು, ಉತ್ತಮ ಸಂಸ್ಕಾರದ ಮೂಲಕ ನಿಜವಾದ ಅಭಿವೃದ್ಧಿ ಸಾಧ್ಯ ಹೊರೆತೇ, ಬರಿಯೇ ಹಣದ ಅಭಿವೃದ್ಧಿ ನಿಜವಾದ ಅಭಿವೃದ್ಧಿಯಲ್ಲ. ಆದ್ದರಿಂದ ಸಮಾಜದ ಸಾವಿರಾರು ಕಣ್ಣುಗಳಿಗೆ ಹೆಣ್ಣಿನ ಬಗೆಗಿನ ಸ್ಪಷ್ಠ ದೃಷ್ಠಿಕೋನವನ್ನು ತೋರಿಸುವ ಮೂಲಕ ಮಹಿಳೆಯ ದೌರ್ಜನ್ಯ ಕಡಿಮೆಯಾಗಿ ಆರೋಗ್ಯಕರ ಸಮಾಜ ಹಾಗೂ ಮಾನಸಿಕ ಆರೋಗ್ಯದ ಸಮಾಜ ನಿರ್ಮಾಣದತ್ತ ಎಲ್ಲರೂ ಕೈ ಜೋಡಿಸಬೇಕು” ಎಂದು ಮೈಸೂರು ಪ್ರಾದೇಶಿಕ ನಿರ್ದೇಶಕರಾಗಿರುವ ಶ್ರೀಯುತ ಪಿ.ಗಂಗಾಧರ ರೈ ರವರು ದೀಪ ಬೆಳಗಿಸುವ ಮೂಲಕ ತರಬೇತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‍ನ ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರ, ಕೇಂದ್ರ ಕಛೇರಿಯ ಗೆಳತಿ ಕೌಟುಂಬಿಕ ಸಲಹಾ ಕೇಂದ್ರದ ಆಪ್ತ ಸವiಲೋಚಕರಾದ ಶ್ರೀಮತಿ ಚೈತನ್ಯ.ಎಸ್, ಮೈಸೂರು ಪ್ರಾದೇಶಿಕ ಕಛೇರಿಯ ತಾಂತ್ರೀಕ ಪ್ರಬಂಧಕರಾದ ಶ್ರೀಮತಿ ಧರಣಿ ಹಾಗೂ ತರಬೇತಿ ಕೇಂದ್ರದ ಉಪನ್ಯಾಸಕರಾದ ಶ್ರೀ ಶಿವಕುಮಾರ್‍ರವರು ಉಪಸ್ಥಿತರಿದ್ದರು.
ನಂತರದಲ್ಲಿ ಮಾತನಾಡಿದ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರರವರು ಸಂಸ್ಥೆಯಲ್ಲಿ ಶೇ.60-70ರಷ್ಟು ಮಹಿಳಾ ಸಿಬ್ಬಂದಿಗಳಿದ್ದು ಮನೆಕೆಲಸ ಹಾಗೂ ಔದ್ಯೋಗಿಕ ಜೀವನವನ್ನು ಮುನ್ನೇಡಿಸುವ ಸಂದರ್ಭಗಳಲ್ಲಿ ಕಾಡುವ ಒತ್ತಡ, ಗೊಂದಲ ನಿವಾರಣೆ, ಜೀವನ ಶೈಲಿ ಮತ್ತು ಮನೋಭಾವಗಳಲ್ಲಿ ತಂದುಕೊಳ್ಳಬಹುದಾದ ಸಾಧ್ಯತೆ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಪೂರಕವಾಗಿ ಈ ತರಬೇತಿಯನ್ನು ಆಯೋಜಿಸಲಾಗಿರುತ್ತದೆ, ಈ ತರಬೇತಿಯ ಮೂಲಕ ಪ್ರತಿ ಮಹಿಳೆಯಲ್ಲೂ ಆತ್ಮವಿಶ್ವಾಸ ಮೂಡಿ ನೆಮ್ಮದಿಯ ಜೀವನವನ್ನು ನಡೆಸುವಂತಾಗಬೇಕೆಂದು ತರಬೇತಿಯ ರೂಪುರೇಷೆಗಳನ್ನು ತಮ್ಮ ಪ್ರಾಸ್ತವಿಕ ನುಡಿಗಳಲ್ಲಿ ತಿಳಿಸಿದರು.
ತರಬೇತಿ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಶ್ರೀಮತಿ ಆಶಾ, ಸ್ವಾಗತವನ್ನು ಶ್ರೀಮತಿ ನಳೀನಾಕ್ಷಿ ಹಾಗೂ ಧನ್ಯವಾದ ಕಾರ್ಯಕ್ರಮವನ್ನು ಶ್ರೀಮತಿ ಸುಧಾರವರು ನೆರವೆರಿಸಿಕೊಟ್ಟರು. ಮೈಸೂರಿನ ಕುವೆಂಪುನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ 2 ದಿನಗಳ ಈ ತರಬೇತಿಗೆ ವಿವಿಧ ತಾಲೂಕುಗಳಿಂದ ಒಟ್ಟು 47 ಮಂದಿ ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿರುತ್ತಾರೆ.

2 thoughts on “ಹೆಣ್ಣಿಗೆ ಶಿಕ್ಷಣ ಮತ್ತು ಪ್ರಾಧ್ಯನೆತೆ ನೀಡುವಿಕೆ ಅವಶ್ಯಕ – ಪಿ.ಗಂಗಾಧರ ರೈ

 1. Sir Nanu Job ge Apply madidde
  SKDRDP exam nalli Pass aagiddini
  * FS interview Attend aagiddini
  qualification. BSW and family counseling Center nalli experience 1 year and cashier aagi 4 years experience press printing
  * writing language: Kannada, Hindi, Marathi, English
  * languages know : Kannada, Hindi, Marathi, Telugu
  * computer typing languages : Kannada, Hindi, Marathi, English
  Sir Results yavaga bidtira plz sir heli
  Name : Shankar Bandi
  9972790669

Leave a Reply

Your email address will not be published. Required fields are marked *