“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವೈವಿಧ್ಯಮಯ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಲಾಗಿದೆ. ಇದರ ಉದ್ದೇಶ ಮಾತೃವಾತ್ಸಲ್ಯದಿಂದ ಕಟ್ಟಿದ ಸಂಸ್ಥೆ, ತಾಯಿ ಮಗುವಿನಲ್ಲಿ ಪ್ರೀತಿ ಕಾಳಜಿಯ ತತ್ವದ ಆಧಾರವಾಗಿದೆ. ಸಮಾಜದಲ್ಲಿ ಬದಲಾವಣೆ ತರುವಲ್ಲಿ ಉದ್ದೇಶ ಹೊಂದಿರುವ ಯೋಜನೆಯ ಹಲವಾರು ಕಾರ್ಯಕ್ರಮಗಳ ಪೂರಕ ಅವಕಾಶಗಳಿದ್ದು, ಪೂಜ್ಯರ ಆಶಯದಂತೆ ಇವುಗಳನ್ನು ಅಗತ್ಯ ಮತ್ತು ಸೂಕ್ತ ವ್ಯಕ್ತಿಗಳಿಗೆ ತಲುಪಿಸಿ ಅವರನ್ನು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ಮುಖ್ಯವಾಹಿನಿಗೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಯಕರ್ತರೂ ಗಮನ ನೀಡುವುದರೊಂದಿಗೆ ವ್ಯವಸ್ಥಿತವಾಗಿ ಉತ್ತಮ ಸೇವೆಯನ್ನು ನೀಡುವಲ್ಲಿ ಕೈ ಜೋಡಿಸಿ ಕಾರ್ಯಕ್ರಮದ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಸನ್ನದ್ಧರಾಗಬೇಕು.” ಎಂದು ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾಗಿರುವ ಶ್ರೀಯುತ ಆನಂದ್ ಸುವರ್ಣ ರವರು ದೀಪ ಬೆಳಗಿಸುವ ಮೂಲಕ ರುಡ್ಸೆಟ್ ಸಂಸ್ಥೆ ನೆಲಮಂಗಲ ಇಲ್ಲಿ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಾಂಕ: 10.09.2019 ರಂದು ಚಾಲನೆ ನೀಡಿ ಶುಭ ಕೋರಿದರು.
ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರ, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಎಸ್ ಎಚ್ ಜಿ ಲೆಕ್ಕಪರಿಶೋಧನಾ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಅಮರ ಪ್ರಸಾದ್ ಹಾಗೂ ಉಪನ್ಯಾಸಕರಾದ ಶ್ರೀ ಶಿವಕುಮಾರ್ ರವರು ಉಪಸ್ಥಿತರಿದ್ದರು.
ತರಬೇತಿ ಕಾರ್ಯಕ್ರಮದ ನಿರೂಪಣೆಯನ್ನು ಮತ್ತು ಸ್ವ್ವಾಗತವನ್ನು ಹಾಗೂ ಧನ್ಯವಾದ ಕಾರ್ಯಕ್ರಮವನ್ನು ಶಿಭಿರಾರ್ಥಿಗಳು ನೆರವೆರಿಸಿಕೊಟ್ಟರು. ಒಂದು ದಿನಗಳ ಈ ತರಬೇತಿ ಕಾರ್ಯಗಾರಕ್ಕೆ ಬೆಂಗಳೂರು ಪ್ರಾದೇಶಿಕ ಕಛೇರಿ ವ್ಯಾಪ್ತಿಯ ತಾಲೂಕುಗಳಿಂದ ಒಟ್ಟು 55 ಮಂದಿ ಕೃಷಿ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಹಾಗೂ ಲೆಕ್ಕ ಪರಿಶೋಕರು ಪಾಲ್ಗೊಂಡಿರುತ್ತಾರೆ.
ಉತ್ತಮ ಸೇವೆಯನ್ನು ನೀಡುವಲ್ಲಿ ಕೈ ಜೋಡಿಸಿ -ಆನಂದ್ ಸುವರ್ಣ
