Communnity DevelopmentNews

ದೇವಸ್ಥಾನ ಜೀಣೋದ್ಧಾರಕ್ಕೆ ಆರ್ಥಿಕ ನೆರವು

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸ್ಥ ಸಮಾಜ ಸಮುದಾಯ ಆಭಿವೃದ್ಧಿ ಕಾರ್ಯಕ್ರಮಗಳಾದ ಹಿಂದು ರುದ್ರ ಭೂಮಿ ಆಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನ ಹಾಲು ಉತ್ಪಾದಕರ ಕಟ್ಟಡ, ನಿರ್ಗತಿಕರ ಮಾಶಾಸನ, ಸುಜ್ಞಾನ ನಿಧಿ, ಗೊಶಾಲೆ, ಸಾರ್ವಜನಿಕ ಶೌಚಾಲಯ, ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ತಮ್ಮ 71ನೇ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಮೈಸೂರು ತಾಲೂಕಿನ ಆರಾಧ್ಯ ಮಹಾ ಸಭಾದ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಉಮಾಮಹೇಶ್ವರ ಹಾಗೂ ಜಗದ್ಗುರು ಪಂಚಾಚಾರ್ಯ ಮಂಟಪ ನಿರ್ಮಾಣಕ್ಕಾಗಿ ರೂ 1.50 ಲಕ್ಷ ಆರ್ಥಿಕ ನೆರವನ್ನು ಮಂಜೂರು ಮಾಡಿದ್ದು, ಈ ಮೊತ್ತವು ನಮ್ಮ ಸಂಸ್ಥೆಗೆ ವರದಾನವಾಗಿ ಬಂದಿದೆ ಎಂದು ಶ್ರೀ ಉಮಾಮಹೇಶ್ವರ ಹಾಗೂ ಜಗದ್ಗುರು ಪಂಚಾಚಾರ್ಯ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪಿ. ನಾಗಭೂಷಣ ಆರಾಧ್ಯರವರು ತಿಳಿಸಿದರು. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬಗಳ ಜನರನ್ನು ಸಂಘಟಿಸಿ ಅವರಲ್ಲಿ ಅಭಿವೃದ್ಧಿ ಎಂಬ ಕನಸುಗಳನ್ನು ಬಿತ್ತಿ ಅವುಗಳನ್ನು ನನಸು ಮಾಡುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಜಿಲ್ಲಾ ನಿರ್ದೇಶಕರಾದ ವಿ.ವಿಜಯಕುಮಾರ್ ನಾಗನಾಳರವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪರಿಸರದಲ್ಲಿರುವ ಮಹಿಳೆಯ ಆತ್ಮ ವಿಶ್ವಾಸವನ್ನು ಮೂಡಿಸಲು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ತನ್ನದೇ ಆದ ಮಾದರಿಯೊಂದನ್ನು ಸೃಷ್ಠಿಸಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ಆತ್ಮ ವಿಶ್ವಾಸ ಹಲವಾರು ಶಕ್ತಿಗಳ ಒಗ್ಗೂಡಿಕೆಯಿಂದ ನಿರ್ಮಿಸಬಹುದೆಂದು ತೀರ್ಮಾನಿಸಿದ ಅವರು ಮೊದಲಾಗಿ ಮಹಿಳೆಯರಲ್ಲಿ ಕೀಳರಿಮೆ, ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವುದು, ಬಡವರಲ್ಲಿ ಆರ್ಥಿಕ ಶಕ್ತಿಯನ್ನು ಮೂಡಿಸುವುದು ಮತ್ತು ಸಮುದಾಯ ಅಭಿವೃದ್ಧಿಗಾಗಿ ಅನುದಾನಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡಲಾಗುತ್ತಿದೆ ಎಂದರು.
ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ಉಮಾಮಹೇಶ್ವರ ಹಾಗೂ ಜಗದ್ಗುರು ಪಂಚಾಚಾರ್ಯ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಚೆನ್ನವೀರರಾಧ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಆನಂದ್.ಕೆ, ಮೇಲ್ವಿಚಾರಕರಾದ ಮಂಜುನಾಥ, ಸಮಿತಿಯ ಪದಾಧಿಕಾರಿಗಳಾದ ಸೋಮಶೇಖರ ಆರಾಧ್ಯ, ಚಂದ್ರಶೇಖರ ಆರಾಧ್ಯ, ನಂಜುಂಡ ಆರಾಧ್ಯ, ಪಂಡಿತ ಆರಾಧ್ಯ, ಶ್ರೀಮತಿ ಗೌರಮ್ಮಣ್ಣಿ, ಲಲಿತಾ, ರೇಣುಕಾ ಆರಾಧ್ಯ, ಸೇವಾಪ್ರತಿನಿಧಿಯಾದ ಉಮಾಶಂಕರಿಯವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

One thought on “ದೇವಸ್ಥಾನ ಜೀಣೋದ್ಧಾರಕ್ಕೆ ಆರ್ಥಿಕ ನೆರವು

Leave a Reply

Your email address will not be published. Required fields are marked *