“ಸಮಸ್ಯೆಯನ್ನು ಆರೋಗ್ಯಕರವಾಗಿ ಸ್ವೀಕರಿಸಿ, ಸರ್ಕಾರದ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಇಚ್ಛಾಶಕ್ತಿ, ಆಸಕ್ತಿ ಮತ್ತು ಆತ್ಮವಿಶ್ವಾಸದಿಂದ ಉದ್ಯಮದಲ್ಲಿ ಅಭಿವೃದ್ಧಿಗೊಂಡು ಇತರರಿಗೆ ಮಾದರಿಯಾಗಿರಿ, ಸಮಾಜದ ಮುಖ್ಯವಾಹಿನಿಗೆ ಬಂದು ಸಹಜ ಜೀವನವನ್ನು ನಡೆಸುವಂತಾಗಲಿ.” ಎಂದು ಮೈಸೂರು ಜಿಲ್ಲೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರಾದ ಶ್ರೀಮತಿ ನಿರ್ಮಲಾರವರು ಧನಶ್ರೀ ಯೋಜನೆಯಡಿ ಹಮ್ಮಿಕೊಂಡ 3 ದಿನದ ಉದ್ಯಮಶೀಲತಾ ತರಬೇತಿಯನ್ನು ದೀಪ ಬೆಳಗಿಸುವ ಮುಖೇನ ಚಾಲನೆ ನೀಡಿ ಅಭಿವ್ಯಕ್ತಪಡಿಸಿ ಫಲಾನುಭವಿಗಳಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶುಭಕೋರಿದರು.
“ಮಹಿಳೆಗೆ ಸಮಾಜದಲ್ಲಿ ಸ್ಥಾನಮಾನ ಗೌರವ ತುಂಬುವಲ್ಲಿ ಆದಾಯ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸುವುದು ಅಗತ್ಯವಿದೆ. ಈಗಿನ ಬೆಲೆ ಏರಿಕೆ ದಿನಗಳಲ್ಲಿ ಆರೋಗ್ಯಕರ ಕುಟುಂಬಕ್ಕಾಗಿ ಮನೆಯ ಗೃಹಿಣಿಯು ಕುಟುಂಬದ ನಿರ್ವಹಣೆಗೆ ಆದಾಯಕ್ಕಾಗಿ ಕೈ ಜೋಡಿಸುವುದು ಅಗತ್ಯವಿದೆ. ಸರ್ಕಾರವು ಮಹಿಳೆಯರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಈ ಧನಶ್ರೀ ಯೋಜನೆ ಕೂಡಾ ಒಂದಾಗಿದೆ. 3 ದಿನದ ಈ ತರಬೇತಿಯಲ್ಲಿ ನಿಮಗೆ ಲಭ್ಯವಿರುವ ಉದ್ಯೋಗ ಅವಕಾಶಗಳು, ಉದ್ಯಮ ಗುಣ ಲಕ್ಷಣಗಳು, ಉದ್ಯೋಗಕ್ಕೆ ಯೋಜನೆ, ಕೌಶಲ್ಯಗಳು, ಹಣಕಾಸು ಯೋಜನೆ ಮತ್ತು ಸೌಲಭ್ಯಗಳು ಮುಂತಾದ ವಿಷಯಗಳನ್ನು ತಿಳಿಸಿಕೊಡಲಾಗುವುದು. ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಆಶಯ ಹೊಂದಿದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿಶೇಷ 71 ನೇ ಹುಟ್ಟು ಹಬ್ಬದ ಈ ದಿನದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಕಾರದಲಿ ಹಮ್ಮಿಕೊಂಡ ಧನಶ್ರೀ ಯೋಜನೆಯ ಕಾರ್ಯಕ್ರಮವನ್ನು ಸರಿಯಾಗಿ ಬಳಸಿಕೊಂಡು ತರಬೇತಿಯನ್ನು ಯಶಸ್ವಿಗೊಳಿಸಿಕೊಳ್ಳಿರಿ.” ಎಂದು ಮೈಸೂರಿನ ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ವಿಶಾಲಾ ಅಕ್ಕಿಯವರು ಮಹಿಳೆಯರನ್ನು ಉದ್ದೇಶಿಸಿ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಲಿ ಎಂದು ಆಶಿಸಿದರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಧನ್ಯವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿಯಾಗಿರುವ ಕು||ರಂಜಿತ ಎನ್. ಇವರು ನೆರವೆರಿಸಿಕೊಟ್ಟರು. ಮೈಸೂರಿನ ಕುವೆಂಪುನಗರದ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ದಿ.25.11.2019 ರಿಂದ 27.11.2019 ರ ವರೆಗೆ 3 ದಿನಗಳ ಈ ತರಬೇತಿ ಇದ್ದು, ವಿವಿಧ ತಾಲೂಕುಗಳಿಂದ ಧನಶ್ರೀ ಯೋಜನೆಯ ಆಯ್ದ ಒಟ್ಟು 50 ದುರ್ಬಲ ವರ್ಗದ ಮಹಿಳಾ ಫಲಾನುಭವಿಗಳು ಪಾಲ್ಗೊಂಡಿರುತ್ತಾರೆ.
ಮಹಿಳಾ ಅಭಿವೃದ್ಧಿ ನಿಗಮದ ‘ಧನಶ್ರೀ’ ಯೋಜನೆಯಡಿ “ಉದ್ಯಮಶೀಲತಾ ತರಬೇತಿ”

2 thoughts on “ಮಹಿಳಾ ಅಭಿವೃದ್ಧಿ ನಿಗಮದ ‘ಧನಶ್ರೀ’ ಯೋಜನೆಯಡಿ “ಉದ್ಯಮಶೀಲತಾ ತರಬೇತಿ””
ನಾನು ಗೃಹಿಣಿ ನನ್ನಗೆ ಸ್ವಂ ಉದ್ಯೋಗದ ಅವಶ್ಯಕತೆ ತುಂಬ ಇದೆ
Sir nannge job avasy Kate ede plz yavdadaru job edare hello belagavi yalli