ಬೆಳ್ತಂಗಡಿ 06: ಸ್ವ-ಉದ್ಯೋಗದ ಮೂಲಕ ಮಹಿಳೆಯರು ಸ್ವಾವಲ0ಬಿಗಳಾಗಬೇಕು. ಜೀವನದಲ್ಲಿ ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು ಎಂದು ಕೈ ಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಇದರ ಸಹಯೋಗದಲ್ಲಿ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿಯಲ್ಲಿ ನಡೆದ ಸಿದ್ದ ಉಡುಪು ತಯಾರಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಗ್ರಾಮೀಣ ಶ್ರೇಷ್ಠಾತಾ ಕೇಂದ್ರದ ನಿರ್ದೇಶಕರದ ಶ್ರೀ.ಕೆ.ಬೂದಪ್ಪ ಗೌಡರವರು ಟೈಲರಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಶುಭಹಾರೈಸಿದರು.
ನಂತರ ಶ್ರೀಮತಿ ದಿವ್ಯಜೋತಿ ತಾಲೂಕು ಪಂಚಾಯತು ಅದ್ಯಕ್ಷರು ಇವರು ಮಾತನಾಡಿ 45 ದಿನ ಉಚಿತವಾಗಿ ನಡೆಯುವ ಈ ತರಬೇತಿಯಲ್ಲಿ ಎಲ್ಲರು ತಮ್ಮನ್ನು ತಾವು ತೊಡಗಿಸಿಕೊಂಡು ಟೈಲರಿಂಗ್ ಕಳಿತಿದ್ದು ಇದರಿಂದ ನಿಮಗೆ ಮುಂದಿನ ದಿನದಲ್ಲಿ ಒಬ್ಬ ಉತ್ತಮ ಟೈಲರ್ ಆಗಿ ಹೊರಹೊಮ್ಮಲು ಸಾದ್ಯ ಇದೆ ಎಂದು ತಿಳಿಸಿದರು. ಹಾಗೂ ಈ ತರಬೇತಿಯಿಂದ ನಿಮಗೆ ವೇದಿಕೆಯಲ್ಲಿ ನಿಂತು ಮಾತನಾಡಲು ದೈರ್ಯವನ್ನು ಕಳಿಸಿಕೊಟ್ಟಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶ್ರೇಷ್ಠಾತಾ ಕೇಂದ್ರದ ಪ್ರಾಂಶುಪಾಲರಾದ ಚಂದ್ರಶೇಖರ, ಟೈಲರಿಂಗ್ ಶಿಕ್ಷಕಿ ಶ್ರೀಮತಿ ಉಷಾರವರು ಉಪಸ್ಥಿತರಿದ್ಧರು, ನಾಲ್ಕು ಮಂದಿ ತಮ್ಮ 45 ದಿನಗಳ ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಗೋಪಾಲ.ಯು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಸಮಾರೋಪ
