AgricultureNewsTraining

ಹಸಿರು ತಂತ್ರಜ್ಞಾನದ ಬರಿಗಾಲ ತಂತ್ರಜ್ಞರ ತರಬೇತಿಯ ಉದ್ಘಾಟನಾ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಿ.ಸಿ ಟ್ರಸ್ಟ್ (ರಿ.) ಇದರ ವತಿಯಿಂದ ಹಸಿರು ತಂತ್ರಜ್ಞಾನಗಳಾದ ಸೋಲಾರ್ ಲ್ಶೆಟಿಂಗ್ಸ್ ಮತ್ತು ವಾಟರ್ ಹೀಟರ್, ಬಯೋಗ್ಯಾಸ್, ಗ್ರೀನ್‍ವೇ ಕುಕ್‍ಸ್ಟವ್, ಡೊಮೆಸ್ಟಿಕ್ ವಾಟರ್ ಪ್ಯೂರಿಫಾಯರ್, ನೀರಿನ ಶುದ್ಧೀಕರಣದ ಸಮುದಾಯ ಘಟಕ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ರಿಪೇರಿ ಮಾಡಬಲ್ಲ ಹಾಗೂ ಸೇವೆಯನ್ನು ನೀಡಬಲ್ಲ ಬರಿಗಾಲ ತಂತ್ರಜ್ಞರ ತರಬೇತಿಯನ್ನು ದಿನಾಂಕ 13.01.2020 ರಿಂದ 24.01.2019 ರವರೆಗೆ ಧಾರವಾಡದ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾvದೆ. ಸೆಲ್ಕೊ ಸೋಲಾರ್ ಮತ್ತು ಗ್ರೀನ್ ವೇ ಅಪ್ಲೈಯನ್‍ಸೆಸ್, ಗೆಟಿಟ್ ಕಾರ್ಟ್ ಮತ್ತು ಅಕ್ವಸಾಫಿ ಸಂಸ್ಥೆಗಳು ತರಬೇತಿಯ ಸಹಭಾಗಿತ್ವದಲ್ಲಿ ಒದಗಿಸಿವೆ.
ತರಬೇತಿಯ ಉದ್ಘಾಟನೆಯನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಕಾಶ ಭಟ್ ಇವರು ಸಸಿಗೆ ನೀರೆರೆಯುವ ಮೂಲಕ ಮಾಡಿದರು. ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ‘ಇಂದು ಪ್ರಾಪಂಚಿಕವಾಗಿ ನಾವೆಲ್ಲಾ ಇಂಧನದ ಕ್ಷೇತ್ರದಲ್ಲಿ ಕೊರತೆಯನ್ನು ಎದುರಿಸುತ್ತಿದ್ದು ಮುಗಿದುಹೋಗುವ ಇಂಧನಗಳಿಗೆ ಪರ್ಯಾಯವಾಗಿ ಮುಗಿದುಹೋಗದ ಇಂಧನಗಳನ್ನು ಬಳಸುವ ಅನಿವಾರ್ಯತೆ ಇದೆ. ಆದ್ದರಿಂದ ನಾವೆಲ್ಲರೂ ಇಂದಿನ ದಿನಗಳಲ್ಲಿ ಸೌರಶಕ್ತಿ, ಪವನಶಕ್ತಿ ಮತ್ತು ಸಮುದ್ರದ ಅಲೆಗಳ ಶಕ್ತಿಯನ್ನು ಬಳಸುವ ಆಸಕ್ತಿಯನ್ನು ತೋರಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸೌರದೀಪಗಳು, ಸೌರಬಿಸಿನೀರು ಕಾಯಿಸುವ ವ್ಯವಸ್ಥೆ, ಹೊಗೆರಹಿತ ಒಲೆಗಳು, ಗೋಬರ್ ಗ್ಯಾಸ್, ಬಯೋ ಗ್ಯಾಸ್ ಮತ್ತು ನೀರು ಶುದ್ಧೀಕರಣ ಘಟಗಳನ್ನು ಅನುಷ್ಠಾನಿಸಲು ಫಲಾನುಭವಿಗಳಿಗೆ ಪ್ರೇರಣೆಯನ್ನು ನೀಡಿ ಅನುಪಾಲನೆ ಮಾಡುತ್ತಿದೆ.
ಈ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಘಟಕಗಳ ಅಳವಡಿಕೆ, ಸೇವೆ ಮತ್ತು ರಿಪೇರಿಯನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಲು ಆಸಕ್ತ ನಿರುದ್ಯೋಗಿ ಯುವಕ ಯುವತಿಯರನ್ನು ಆಯ್ಕೆ ಮಾಡಿ ಹಸಿರು ಇಂಧನದ ಬರಿಗಾಲ ತಂತ್ರಜ್ಞರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯನ್ನು ತಜ್ಞ ತಂತ್ರಜ್ಞರಿಂದ ಪಡೆದುಕೊಂಡು ಗ್ರಾಮೀಣ ಮಟ್ಟದಲ್ಲಿ ಫಲಾನುಭವಿಗಳಿಗೆ ಪಾವತಿಸಹಿತ ಸೇವೆಯನ್ನು ನೀಡಿ ಸ್ವ-ಉದ್ಯೋಗಿಗಳಾಗಿ ಆರ್ಥಿಕ ಅಭಿವೃದ್ಧಿಯನ್ನು ಹೊಂದಿರಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ಹಿರಿಯ ಪ್ರಬಂಧಕರಾದ ಶ್ರೀ ಸುಬ್ರಾಯ ಹೆಗಡೆ, ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಸಂತೋಷ್ ರಾವ್ ಪಿ, ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರಾದೇಶಿಕ ಕಛೇರಿ ಮಣಿಪಾಲದ ಗ್ರಾಹಕ ಸಂಪರ್ಕ ವಿಭಾಗದ ಹಿರಿಯ ಪ್ರಬಂಧಕರಾದ ಶ್ರೀ ಪ್ರವೀಣ್.ವೈ, ಧಾರವಾಡ ಜಿಲ್ಲಾ ಗ್ರಾಹಕ ಸಂಪರ್ಕ ವಿಭಾಗದ ಹಿರಿಯ ಪ್ರಬಂಧಕರಾದ ಶ್ರೀ ಪ್ರವೀಣ್.ಬಿ, ಬಳ್ಳಾರಿ ಗ್ರಾಹಕ ಸಂಪರ್ಕ ವಿಭಾಗದ ಪ್ರಬಂಧಕರಾದ ಶ್ರೀ ಫಣೀಂದ್ರ ಇವರು ಉಪಸ್ಥಿತರಿದ್ದರು. 12 ದಿನಗಳ ಕಾಲ ನಡೆಯಲಿರುವ ಈ ತರಬೇತಿಯಲ್ಲಿ ಒಟ್ಟು 44 ಮಂದಿ ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ.

One thought on “ಹಸಿರು ತಂತ್ರಜ್ಞಾನದ ಬರಿಗಾಲ ತಂತ್ರಜ್ಞರ ತರಬೇತಿಯ ಉದ್ಘಾಟನಾ ಸಮಾರಂಭ

Leave a Reply to Dyamanna Cancel reply

Your email address will not be published. Required fields are marked *