Community HealthDharmasthalaNews

ದುಶ್ಚಟ ನಿರ್ಮೂಲನೆಗೆ ದೈವೀ ಶಕ್ತಿಯೇ ಔಷಧಿ – ಡಾ| ಎಲ್.ಹೆಚ್. ಮಂಜುನಾಥ್

ಉಜಿರೆ, ಜ.13: ಲಕ್ಷೋಪಲಕ್ಷ ಜೀವರಾಶಿಗಳಲ್ಲಿ ಮನುಷ್ಯನನ್ನು ಹೊರತುಪಡಿಸಿದರೆ ಬೇರೆ ಯಾವುದೇ ಪ್ರಾಣಿ ಸಂಕುಲ ಮದ್ಯಪಾನದ ಬಳಕೆ ಮಾಡುವುದಿಲ್ಲ. ತನ್ನ ಕಷ್ಟಗಳಿಗೆ ತಾವೇ ಮದ್ದು ಹುಡುಕುತ್ತಾ ತನ್ನ ಸಮಸ್ಯೆಗಳ ಪರಿಹಾರಕ್ಕೆ ಸಾಂಘಿಕವಾಗಿ ಪ್ರಯತ್ನಿಸುತ್ತವೆ. ಮದ್ಯಪಾನ ಎಂಬ ಕಾಯಿಲೆಗೆ ಮದ್ದಿಲ್ಲ. ಕಾರಣ ಈ ರೋಗದ ಮೂಲವೇ ಗೊತ್ತಿಲ್ಲ. ವೈದ್ಯರು, ವಿಜ್ಞಾನಿಗಳು, ಮನೋರೋಗ ತಜ್ಞರು ಮಾನಸಿಕ ರೋಗವೆಂದರೆ ವ್ಯಸನಿಯು ರೋಗಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಈ ಕಾಯಿಲೆಯು ಮನಸ್ಸು, ಹೃದಯ ಮತ್ತು ಬುದ್ಧಿಗೆ ಅಪಾಯ ತಂದೊಡ್ಡುವುದರಿಂದ ಆಧ್ಯಾತ್ಮಿಕ ಚಿಂತನೆಯೇ ಈ ಕಾಯಿಲೆಗೆ ಪರಿಹಾರವಾಗಿದೆ. ಅಂತರಾತ್ಮದಲ್ಲಿ ಮನಸ್ಸು ಹುಡುಕುವ ಪ್ರಯತ್ನವೇ ಈ ಕಾಯಿಲೆಗೆ ಮದ್ದಾಗಿದೆ. ದೇವರು ಇದ್ದವನ ಮನಸ್ಸಲ್ಲಿ ಕಾಯಿಲೆ ಇಲ್ಲ, ಅಸೂಯೆ, ಅಹಂಕಾರ ಇರುವುದಿಲ್ಲ. ವಿಷ್ಣು ಸಹಸ್ರನಾಮ ಪಠಿಸಿದಾಗ ಸಾವನ್ನು ಗೆಲ್ಲಬಹುದು. ಭಜನೆಯನ್ನು ಮಾಡಿದಾಗ ಸಾಮರಸ್ಯ, ಸಂತೋಷ, ಸಮಾಧಾನ, ತೃಪ್ತಿ, ಸ್ಥಿತಪ್ರಜ್ಞೆ, ಸಂತೋಷ, ವ್ಯಕ್ತಿತ್ವ ಬದಲಾವಣೆ ಹೀಗೆ ದೈವಭಕ್ತನಾಗಿ ಬದಲಾಗಬಹುದಾಗಿದೆ. ಆದುದರಿಂದ ಸ್ವಾಭಿಮಾನ, ಅಹಂಕಾರ, ದ್ವೇಷವನ್ನು ಪ್ರೀತಿಯಿಂದ ಬದಲಾಯಿಸಿ ನೆಮ್ಮದಿಯ ಬದುಕು ನಡೆಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಇದರ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಹೆಚ್. ಮಂಜುನಾಥ್ ತಿಳಿಸಿದರು. ಇವರು ಉಜಿರೆಯ ಧ.ಮ.ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದ ವಿಶೇಷ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸತೀಶ್ ಹೊನ್ನವಳ್ಳಿ ಉಪಸ್ಥಿತರಿದ್ದು, ಶುಭ ಹಾರೈಸಿದರು. 8 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ 86 ಶಿಬಿರಾರ್ಥಿಗಳು ರಾಜ್ಯದ 30 ಜಿಲ್ಲೆಗಳಿಂದಲೂ ಆಗಮಿಸಿ ಮಾಹಿತಿ ಪಡೆದರು. ಮುಂದಿನ ಶಿಬಿರ ಜನವರಿ 20ರಂದು ಪ್ರಾರಂಭಗೊಳ್ಳಲಿದೆ ಎಂದು ವೇದಿಕೆಯ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ತಿಳಿಸಿದರು.

Leave a Reply

Your email address will not be published. Required fields are marked *