ಗ್ರಾಮೀಣ ಅಭಿವೃದ್ಧಿಯಲ್ಲಿ ಹೈನುಗಾರಿಕೆಯ ಪಾತ್ರ ಅತ್ಯಂತ ಮಹತ್ವದಾಗಿದ್ದು, ವೈಜ್ಞಾನಿಕವಾಗಿ ಈ ಕಸುಬನ್ನು ಅರಿತು ಅಳವಡಿಸಿಕೊಳ್ಳುವುದರಿಂದ ಹೆಚ್ಚು ಲಾಭದಾಯಕವಾಗಿಸಬಹುದೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್.ಮಂಜುನಾಥ್ರವರು ತಿಳಿಸಿದರು. ಬೆಳ್ತಂಗಡಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ಬಳ್ಳಾರಿ ಮತ್ತು ಬೆಳಗಾವಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರುಗಳ 3 ದಿನಗಳ ಚೇತನಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಶಿಕ್ಷಣಾರ್ತಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೂ, ಕೆ.ಎಂ.ಎಫ್ಗೂ ಇರುವ ಮುಖ್ಯ ಉದ್ದೇಶ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣವೆಂದು ತಿಳಿಸಿದ ಅವರು, ಯುವಕರು ಈ ಉದ್ಯಮದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಕುರಿತು ಒತ್ತಿ ಹೇಳಿದರು. ಉತ್ತರ ಕರ್ನಾಟಕದಲ್ಲಿ ಹೈನುಗಾರಿಕೆ ಅಭಿವೃದ್ಧಿ ಇನ್ನಷ್ಟು ಪರಿಣಾಮಕಾರಿಯಾಗಲು ಶ್ರೀ ಕ್ಷೇತ್ರದ ನೆರವು ಸದಾ ಲಭ್ಯವಿದೆಯೆಂದು ತಿಳಿಸುತ್ತಾ, ತರಬೇತಿಯಿಂದ ಉನ್ನತಿ ಎಂದು ಕಿವಿ ಮಾತು ಹೇಳಿ ತಮ್ಮ ಅನುಭವದ ಮಾತುಗಳಿಂದ ಅಧ್ಯಕ್ಷರುಗಳನ್ನು ಹುರಿದುಂಬಿಸಿದರು.
ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಬೂದಪ್ಪ ಗೌಡ, ಉಪಸ್ಥಿತರಿದ್ದು ಶುಭ ಹಾರೈಸಿದರು, ಕೆ.ಎಂ.ಎಫ್ನ ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಎಸ್.ಹೆಗಡೆ ಸ್ವಾಗತಿಸಿ, ನಿರ್ವಹಿಸಿದ ಕಾರ್ಯಕ್ರವiದಲ್ಲಿ ಪ್ರಾಂಶುಪಾಲರು ಚಂದ್ರಶೇಖರ್, ಉಪನ್ಯಾಸಕರಾದ ರಾಜೇಶ್ ಉಪಸ್ಥಿತರಿದ್ದರು.
ಚಂದ್ರಶೇಖರ್
ಪ್ರಾಂಶುಪಾಲರು,
ಗ್ರಾಮೀಣ ಶ್ರೇಷ್ಠತಾ ಕೇಂದ್ರ