ಭತ್ತ ಕೃಷಿಯನ್ನು ಲಾಭದಾಯಕವು ರೈತ ಸ್ನೇಹಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಯಂತ್ರಶ್ರೀ ಯೋಜನೆಯ ಅನುಷ್ಠಾನದ ಪೂರ್ವ ತಯಾರಿ ಸಭೆ ಕೇಂದ್ರ ಕಛೇರಿಯಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಎಲ್. ಎಚ್ ಮಂಜುನಾಥ್ರವರ ಉಪಸ್ಥಿತಿಯಲ್ಲಿ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಯಂತ್ರನಾಟಿ ಮೂಲಕ ಭತ್ತ ಕೃಷಿಯನ್ನು ಅನುಷ್ಠಾನಿಸಿದ ಪ್ರಗತಿಪರ ಕೃಷಿಕ ಅನ್ವೇಷಕ ಶ್ರೀ ಸುರೇಶ ಚೇಕೂರಿ ರವರೊಂದಿಗೆ ನಡೆಯಿತು. ಸಭೆಯಲ್ಲಿ ರೈತರ ಆಯ್ಕೆ, ಪ್ರಾದೇಶಗಳ ಆಯ್ಕೆ, ನರ್ಸರಿ ಟ್ರೇ ತಯಾರಿ ಯಂತ್ರಗಳ ಬೇಡಿಕೆ ಕ್ಷೇತ್ರದ ಗದ್ದೆಗಳಲ್ಲಿ ಯಾಂತ್ರಿಕೃತ ಮತ್ತು ಸಾಂಪ್ರಾದಾಯಕ ಪದ್ಧತಿ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು. ಶ್ರೀ ಸುರೇಶ್ ಚೇಕೂರಿ ಇವರನ್ನು ತಾಂತ್ರಿಕ ಸಲಹೆಗಾರರಾಗಿ ಆಯ್ಕೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕ್ಷೇತ್ರದ ಭತ್ತದ ತಾಕುಗಳ ವೀಕ್ಷಣೆ ಮಾಡಲಾಯಿತು.
ಸಭೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಎಲ್. ಎಚ್ ಮಂಜುನಾಥ್, ಪ್ರಗತಿಪರ ಕೃಷಿಕ ಅನ್ವೇಷಕ ಸುರೇಶ ಚೇಕೂರಿ, ದಾವಣಗೆರೆ , ನಾಗರಾಜ್ ವಿ.,ದಾವಣಗೆರೆ. ಮನೋಜ್ ಮಿನೇಜಸ್ , ಅಬ್ರಾಹಾಮ್, ನಿರ್ದೇಶಕರು, ಸುಧೀರ್, ಸುದರ್ಶನ್, ರಾಜೇಂದ್ರ ರೈ ಹಾಜರಿದ್ದರು.