ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಇದರ ಅಡಿಯಲ್ಲಿ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ 2019 ರಲ್ಲಿ ಪ್ರಾರಂಭಗೊಂಡಿದ್ದು, ಈ ಯೋಜನೆಯಿಂದ ಸಂಘದ ಸದಸ್ಯರಿಗೆ ಕೃಷಿಯೇತರ ಚಟುವಟಿಕೆಗಳಾದ ಗ್ಯಾರೇಜ್ ರಚನೆ ಮತ್ತು ಅಭಿವೃದ್ಧಿ, ಅಂಗಡಿ ವ್ಯಾಪಾರ, ಬೇಕರಿ, ವಾಹನ ಖರೀದಿ, ಟೈಲರಿಂಗ್ ಅಂಗಡಿ, ನರ್ಸರಿ, ಹಾಳೆ ತಟ್ಟೆ ಘಟಕ, ಸ್ಟುಡಿಯೋ, ಕ್ಯಾಟರಿಂಗ್ ಸರ್ವಿಸ್, ಸೆಂಟ್ರಿಂಗ್ ಸಾಮಾನು ಖರೀದಿ, ಬಟ್ಟೆ ವ್ಯಾಪಾರ ಹಾಗೂ ಇನ್ನಿತರ ಹಲವು ಉದ್ದೇಶಗಳಿಗೆ ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆಯಿಂದ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಪ್ರಯಾಸ್ ಸಿಡ್ಬಿ ಯೋಜನೆಯಿಂದ ರಾಜ್ಯದಲ್ಲಿ ಒಟ್ಟು 800 ಫಲಾನುಭವಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಇದುವರಗೆ ಒಟ್ಟು 49 ಮ0ದಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗಿದ್ದು, ಪ್ರಸ್ತುತ ಉಜಿರೆ ವಲಯದ ಬಿಲ್ಲರೋಡಿ ಪ್ರಗತಿಬಂಧು ತಂಡದ ಸದಸ್ಯರಾದ ಯಶೋಧರ ಗೌಡ ಇವರು ಸ್ವ ಉದ್ಯೋಗ ಪೂರಕವಾಗಿ ವಾಹನ ಖರೀದಿ ಉದ್ದೇಶಕ್ಕೆ 50 ನೇ ಸಾಲವಾಗಿ ರೂ. 5.00 ಲಕ್ಷ ಸಿಡ್ಬಿ ಸಾಲವನ್ನು ಪಡಕೊಂಡು ವಾಹನ ಖರೀದಿ ಮಾಡಿದ್ದು, ಸದ್ರಿ ವಾಹನದ ಕೀಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಎಲ್. ಹೆಚ್. ಮಂಜುನಾಥ್ ರವರು ಕೇಂದ್ರ ಕಛೇರಿ ಧರ್ಮಸ್ಥಳದಲ್ಲಿ ಹಸ್ತಾಂತರ ಮಾಡಿದರು. ಈ ಸಂದರ್ಭ ಬಿ. ಸಿ ವಿಭಾಗದ ನಿರ್ದೇಶಕರಾದ ಪಿ. ರಾಧಾಕೃಷ್ಣ ರಾವ್, ಬಿ. ಸಿ ವಿಭಾಗದ ಯೋಜನಾಧಿಕಾರಿಗಳಾದ ಸುಪ್ರೀತ್ ಎಸ್ ಜೈನ್, ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಜಯಕರ ಶೆಟ್ಟಿ, ಹಾಗೂ ವಲಯ ಮೇಲ್ವಿಚಾರಕಿ ಶ್ರೀಮತಿ ಅಶ್ವಿತಾ ಇವರುಗಳು ಉಪಸಿತರಿದ್ದರು.
ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ

2 thoughts on “ಪ್ರಯಾಸ್ ಸಿಡ್ಬಿ ಸಮೃದ್ಧಿ ಯೋಜನೆ”
Thumba olle yojane.keep it up. Namgu vehical loan sigbahuda.
OBALESH KH s/o hanumathappa.ko
Malalakere (post)
Davanagere (D)&(T)
pin code 577514