ಲಾಕ್ ಡೌನ್ ಕಾರಣದಿಂದಾಗಿ ತಾಲ್ಲೂಕಿನಲ್ಲಿ ಸಮಸ್ಯೆಗೆ ಸಿಲುಕಿದ್ದ ಕಲಾವಿದರು ಹಾಗೂ ಸಣ್ಣ ಸಣ್ಣ ವ್ಯಾಪಾರಿ ಕುಟುಂಬಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ಚಾಚಿದೆ. ಸಂಚಾರ ಕೈಗೊಂಡು ಸಾಬೂನು ಪುಡಿ ಮಾರುತ್ತಿದ್ದ ಕುಟುಂಬಗಳು, ಪೆನ್ನು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಪಿನ್ನುಗಳು, ಪಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಬೀದಿ ನಾಟಕ, ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕುಟುಂಬಗಳು ತೀರಾ ಸಂಕಷ್ಟದಲ್ಲಿದ್ದವು. ಮಾತಾ ಮಾಣಿಕೇಶ್ವರಿ ನಗರದಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಈ ಕುಟುಂಬಗಳು ಆಹಾರದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದವು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಲ್ಲಿ ವಾಸವಾಗಿದ್ದ ಎಂಟು ಮನೆಗಳು ಸಂಪೂರ್ಣ ನಾಶವಾಗಿದ್ದರಿಂದ ಆ ಕುಟುಂಬಗಳೂ ತೊಂದರೆಗೆ ಸಿಲುಕಿತ್ತು. ಇಂತಹ ಕುಟುಂಬಗಳನ್ನು ಗುರುತಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂಜ್ಯರು ಪೂಜ್ಯರು ನೀಡಿದ ಕೊಡುಗೆಯನ್ನು ಸಂತ್ರಸ್ತರ ಮನೆ ಬಾಗಿಲಿಗೆ ತಲುಪಿಸಿದೆ. ಒಟ್ಟು ನಲವತ್ತೆರಡು ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಲಾಗಿದ್ದು ಈ ಕಾರ್ಯ ತೊಂದರೆಯಲ್ಲಿರುವ ಕುಟುಂಬಗಳಿಗೆ ನೆರವಾಗಿದೆ.
ಕಿಟ್ ಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶ್ರೀ ದಿನೇಶ್, ಎಎಸ್ಐ ರಾಮಣ್ಣ, ಸ್ಥಳೀಯ ಮುಖಂಡರಾದ ಶ್ರೀ ಬಸವಂತರೆಡ್ಡಿ, ಯೋಜನಾಧಿಕಾರಿ ರಾಘವೇಂದ್ರ ಪಟಗಾರ್, ರಾಜ್ಯ ಕಲಾವಿದರ ಸಂಘದ ಉಪಾಧ್ಯಕ್ಷರಾದ ಶ್ರೀ ಶರಣಪ್ಪ, ಬುಡಕಟ್ಟು ಅಲೆಮಾರಿ ಜನಾಂಗದ ಮುಖಂಡರಾದ ಶ್ರೀ ಶಂಕರ ಶಾಸ್ತಿ, ಆತ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಮಂಜುನಾಥ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ, ಸೇವಾಪ್ರತಿನಿಧಿ ನೇಹಾ ಉಪಸ್ಥಿತರಿದ್ದರು.
ಕಲಾವಿದರು ಹಾಗೂ ಕಿರು ವ್ಯಾಪಾರಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
