Community HealthNews

‘ತಂಬಾಕು ಸೇವನೆ ನಿಲ್ಲಿಸೋಣ ಆರೋಗ್ಯವಂತರಾಗಿ ಜೀವನ ನಡೆಸೋಣ’

ವಿಶ್ವ ತಂಬಾಕು ಮುಕ್ತ ದಿನದ ಪ್ರಯುಕ್ತ ವಿವೇಕಾನಂದ ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಮೈಸೂರು ಜಿಲ್ಲಾ ಕಛೇರಿಯಲ್ಲಿ ನಡೆದ ಯೋಜನೆಯ ಸಿಬ್ಬಂದಿಗಳ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ವಿ. ವಿಜಯ್ ಕುಮಾರ್ ನಾಗನಾಳರವರು ತಂಬಾಕು ಸೇವನೆ ಸಮಾಜದ ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿದ್ದು ತಂಬಾಕು ವ್ಯಸನದಲ್ಲಿ ಜಗಿಯುವುದು ಮತ್ತು ದೂಮಪಾನ ಮಾಡುವುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ 06 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ. ಭಾರತದಲ್ಲಿ ಪ್ರತಿ ದಿನ ತಂಬಾಕು ಉಪಯೋಗಿಸುತ್ತಿರುವವರು 12 ಕೋಟಿಗೂ ಹೆಚ್ಚು ಜನರಿಗೆ ಆದರೆ ತಾವು ಬೀಡಿ ಸಿಗರೇಟ್ ಸೇದದಿದ್ದರೂ ಯಾರೋ ದೂಮಪಾನ ಮಾಡುವ ಚಟಕ್ಕೆ ಪ್ರಾಣ ತೆರುತ್ತಿದ್ದಾರೆ. ತನ್ನ ಆರೋಗ್ಯವನ್ನಷ್ಟೇ ಅಲ್ಲದೇ ಅಕ್ಕಪಕ್ಕದವರ, ಪ್ರೀತಿ ಪಾತ್ರರ, ಆರೋಗ್ಯವನ್ನು ಹಾಳು ಮಾಡುತ್ತಿರುವ ದೂಮಪಾನದ ದಾಸರು ಇಂದಾದರೂ ದುಶ್ಚಟವನ್ನು ಬಿಡಲು ಪಣ ತೊಡಬೇಕಾಗಿದೆ. ಆದರೆ ವಿದ್ಯಾವಂತರೇ ತಂಬಾಕು ಸೇವನೆ ಬಲಿಯಾಗುತ್ತಿರುವುದು ವಿಷಾಧನೀಯ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಯುವಜನಾಂಗ ವ್ಯಸನಗಳಿಗೆ ಬಲಿಯಾಗುವುದನ್ನು ತಡೆಗಟ್ಟುವ ಸಲುವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ವ್ಯಸನಮುಕ್ತ ಜೀವನದ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ. ಇದರೊಂದಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರೋಗ್ಯಕ್ಕೆ ಹಾನಿಕಾರ. ಮಧು, ಸಿಗರೇಟ್, ಗುಟ್ಕ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲಾಗುತ್ತಿದೆ. ತಂಬಾಕು ಸೇವೆನೆ ಚೇಳಿನ ವಿಷಕ್ಕಿಂತಲೂ ಹೆಚ್ಚು ವಿಷಕಾರಿ ಎಂದು ತಿಳಿದೂ ಜನರು ಇದಕ್ಕೆ ದಾಸರಾಗಿರುವುದು ನಿಜಕ್ಕೂ ವಿಷಾಧನೀಯ, ತಂಬಾಕು ಸೇವನೆಯಿಂದ ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ನಾನು ಸುಡುತ್ತಿರುವ ಸಿಗರೇಟ್ ನನ್ನನ್ನು ಮತ್ತು ನನ್ನ ಸುತ್ತಲ ಪ್ರಪಂಚವನ್ನು ಒಟ್ಟಾಗಿ ಸುಡುತ್ತದೆ ಎಂಬ ಅರಿವು ದೂಮಪಾನಿಗೆ ಇರಬೇಕು. ಇಂದು ಕೊರೋನ ಎಂಬ ಮಹಾಮಾರಿಗೆ ವಿಶ್ವವೇ ತಲ್ಲಣಿಸಿದ ಸಂದರ್ಭದಲ್ಲಿ ಕೊರೋನಾ ವೈರಸ್ ಹರಡಲು ತಂಬಾಕು ಕೂಡ ಮುಖ್ಯ ಕಾರಣವಾಗಿದೆ. ಗುಟ್ಕ ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಹಾಗೂ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಕೊರೋನಾ ಮನುಷ್ಯನ ಶರೀರಕ್ಕೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದನ್ನು ಅರಿತುಕೊಂಡು ಗುಟ್ಕ ಜಗಿದು ವಾಹನ ಚಲಿಸುತ್ತಿರುವ ಸಂದರ್ಭದಲ್ಲಿ ಉಗುಳಬಾರದು. ತಂಬಾಕು ಸೇವೆನೆಗೆ ಕಡಿವಾಣ ಹಾಕುವುದರಿಂದ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಹೊಣೆ ಎಂದು ನುಡಿದರು.
ತಮ್ಮ ಜೀವನದ ಪ್ರತಿದಿನ ತಂಬಾಕು ವಿರೋಧಿ ದಿನವಾಗಬೇಕು. ತಾನು, ಗುಟ್ಕ ದೂಮಾಪಾನ ಸೇವನೆ ಮಾಡದೇ ಇರಬಹುದು, ಆದರೆ ತಮ್ಮ ಕುಟುಂಬವನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಹೊಣೆ. ಸರಕಾರ ತಂಬಾಕು ಸೇವನೆಯ ದುಷ್ಪಾರಿಣಾಮಗಳ ಬಗ್ಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೆ ಇಂದು ಯುವಪೀಳಿಗೆ, ಉದ್ಯೋಗಸ್ಥರೆ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ. ಇದರಲ್ಲೂ ಇಳಿವಯಸ್ಸಿನ ಮಕ್ಕಳು ತಂಬಾಕು ದಾಸರಾಗುತ್ತೀರುವುದು ವಿಪರ್ಯಾಸ. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಎಲ್ಲಾ ಸಿಬ್ಬಂದಿಗಳು ತಮ್ಮ ಕುಟುಂಬವನ್ನು ತಂಬಾಕು ಸೇವನೆಯಿಂದ ಮುಕ್ತರನ್ನಾಗಿಸಿ ಸಮುದಾಯಕ್ಕೆ ಪ್ರೇರಣೆಯಾಗಿ ಎಂದು ಯೋಜನಾಧಿಕಾರಿ ಯು.ಎನ್ ಚಂದ್ರಶೇಖರ್ ರವರು ನುಡಿದರು.
ದಿವಾಕರ್ ರವರು ಸ್ವಾಗತವನ್ನು ಮಾಡುವುದರೊಂದಿಗೆ ಕಾರ್ಯಕ್ರಮದಲ್ಲಿ ಮಾದೇಶ, ಕೃಷ್ಣ, ವಾರಿಜ, ರಮ್ಯ, ಮಂಜುಳಾ, ಪ್ರಿಯಾಂಕ ಮತ್ತು ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಪ್ರಬಂಧಕರಾದ ಪದ್ಮನಾಭರವರು ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *