NewsTraining

ಸ್ವ-ಸಹಾಯ ಸಂಘಗಳ ಗುಣಮಟ್ಟ ಸುಧಾರಣೆಯಲ್ಲಿ ಆಂತರಿಕ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಯಕದ್ದು- ಪಿ.ಗಂಗಾಧರ ರೈ

ಮೈಸೂರು ಕಳಸ್ತವಾಡಿ ಬ್ರಹ್ಮಪುರ ಸಂಕಲ್ಪ ಸೌಧದ ಸಭಾಂಗಣದಲ್ಲಿ ಜಿಲ್ಲೆಯ ಆಂತರಿಕಲೆಕ್ಕಪರಿಶೋಧಕರ ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸ್ವ-ಸಹಾಯ ಸಂಘಗಳ ದಾಖಲಾತಿ ಮತ್ತು ಲೆಕ್ಕಪರಿಶೋಧನೆ ಸಂಘಗಳ ಗುಣಮಟ್ಟ ಸುಧಾರಣೆ, ಸಂಘಗಳ ಸದಸ್ಯರಿಗೆ ಅವಶ್ಯವಿರುವ ತರಬೇತಿ ಹಾಗೂ ಮಾಹಿತಿಗಳನ್ನು ಪ್ರತಿ ತಾಲೂಕಿನಲ್ಲಿ ಆಂತರಿಕ ಲೆಕ್ಕಪರಿಶೋಧಕರು ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿಯವರು ಸೂಕ್ತ ತರಬೇತಿಗಳನ್ನು ಸ್ವ-ಸಹಾಯ ಸಂಘಗಳಿಗೆ ಸಂದರ್ಭಕ್ಕೆ ಅನುಗುಣವಾಗಿ ನೀಡಿ ಸ್ವ-ಸಹಾಯ ಸಂಘಗಳ ನಿರ್ವಹಣೆ ಬಗ್ಗೆ ಸದಸ್ಯರಿಗೆ ಸರಿಯಾದ ಅರಿವನ್ನು ಮೂಡಿಸಿ ಗುಣಮಟ್ಟದ ಸ್ವ-ಸಹಾಯ ಸಂಘಗಳನ್ನಾಗಿ ಪರಿಪರ್ತಿಸುವ ಜವಾಬ್ದಾರಿ ಆಂತರಿಕ ಲೆಕ್ಕಪರಿಶೋಧಕರದ್ದಾಗಿರುತ್ತೆಎಂದು ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ.ಗಂಗಾಧರ ರೈ ರವರು ನುಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಅತ್ಯಂತ ಆಸಕ್ತಿಯಿಂದ ಹುಟ್ಟುಹಾಕಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಇಂದು ರಾಜ್ಯಾಧ್ಯಂತ ಕಾರ್ಯನಿರ್ವಹಿಸುತ್ತಿದ್ದು ಲಕ್ಷಾಂತರ ಕುಟುಂಬಗಳು ಪಾಲುಧಾರ ಬಂಧುಗಳಾಗಿದ್ದು, ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಮಹಿಳೆಯರನ್ನು ಜಾಗೃತಿಗೊಳಿಸಿ ಆರ್ಥಿಕ ಪ್ರಜ್ಞಾವಂತಿಕೆ ಬೆಳಸುವ ಕೆಲಸ ಮಾಡುತ್ತಿದೆ. ಮಹಿಳೆಯರಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಮತ್ತು ಮುಂದಿನ ತನ್ನ ಕುಟುಂಬ ನಿರ್ವಹಣೆಗೆ ವಿಶೇಷ ಯೋಜನೆಗಳನ್ನು ರೂಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ 800 ವರ್ಷಗಳ ಇತಿಹಾಸಕ್ಕೆ ಯಾವುದೇ ಲೋಪಗಳು ಬಾರದಂತೆ ಕ್ಷೇತ್ರವನ್ನು ಮುನ್ನಡೆಸುತ್ತಾ ತಮ್ಮ ಬಿಡುವಿಲ್ಲದ ವೇಳೆಯಲ್ಲಿಯೂ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಕಾರ್ಯಗತಗಳಿಸುತ್ತಿರುವುದು ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಹೆಗ್ಗಳಿಕೆಯಾಗಿದ್ದು ಸಿಬ್ಬಂದಿಗಳಾದ ನಾವೆಲ್ಲ ಇದನ್ನು ಅರಿತುಕೊಂಡು ಪ್ರಾಮಾಣಿಕ ಮತ್ತು ಪಾರದರ್ಶಕ ಸೇವೆಯನ್ನು ನೀಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ನಿರ್ದೇಶಕರಾದ ವಿ. ವಿಜಯ್‍ಕುಮಾರ್ ನಾಗನಾಳರವರು ಮಾತನಾಡಿ ಜಗತ್ತಿನಾಧ್ಯಂತ ಮಾರಕವಾಗಿ ಬಾಧಿಸುತ್ತಿರುವ ಕೊರೋನಾ ಎಂಬ ಮಹಾಮಾರಿ ವೈರಾಣುವಿನಿಂದ ಜನಜೀವನ ತತ್ತರಗೊಂಡಿದ್ದರೂ ಗ್ರಾಮೀಣ ಭಾಗದ ಸ್ವ-ಸಹಾಯ ಸಂಘದ ಸದಸ್ಯರು ತಮ್ಮ ಸಂಘಗಳ ನಿರ್ವಹಣೆಯಲ್ಲಿ ಅಪಾರ ಕಾಳಜಿಯನ್ನು ವಹಿಸಿಕೊಂಡಿದ್ದು ಇದಕ್ಕೆ ಪೂರಕವಾಗಿ ಯೋಜನೆಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ಸಮರ್ಪಕ ಮಾಹಿತಿ ಹಾಗೂ ಸದಸ್ಯರಲ್ಲಿ ಮನೋಧೈರ್ಯವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಮತ್ತು ಆಂತರಿಕ ಲೆಕ್ಕಪರಿಶೋಧಕರು ಕ್ಲಪ್ತ ಸಮಯದಲ್ಲಿ ಸ್ಪಂದಿಸಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳು ಅರ್ಥಪೂರ್ಣವಾಗಿ ನಿರ್ವಹಣೆಯಾಗಿದೆ ಎಂದು ನುಡಿದರು.

ಈ ಪ್ರಗತಿಪರಿಶೀಲನಾ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳಾದ ರಮೇಶ್, ಜಿಲ್ಲಾ ಆಡಿಟ್ ಪ್ರಬಂಧಕರಾದ ಪದ್ಮನಾಭ, ಎಲ್ಲಾ ಆಂತರಿಕ ಲೆಕ್ಕಪರಿಶೋಧಕರು ಮತ್ತು ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಹಾಜರಿದ್ದರು.

3 thoughts on “ಸ್ವ-ಸಹಾಯ ಸಂಘಗಳ ಗುಣಮಟ್ಟ ಸುಧಾರಣೆಯಲ್ಲಿ ಆಂತರಿಕ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಯಕದ್ದು- ಪಿ.ಗಂಗಾಧರ ರೈ

Leave a Reply

Your email address will not be published. Required fields are marked *