ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ವಸಹಾಯ ಸಂಘಗಳ ಸದಸ್ಯರ ಶ್ರಮದಾನ
Posted onಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಅರಣ್ಯ ಗಿಡಗಳ ನಾಟಿ ಹಾಗೂ ಪೋಷಣೆ ಕಾರ್ಯಕ್ರಮ
ಕೊರೋನಾ ವಿಪತ್ತಿನ ಸಮಯ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ಚಾಚಿದೆ. ಲಿಂಗಸಗೂರು ತಾಲೂಕಿನ ವಿವಿಧ ಭಾಗಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿದ್ದವು. ಅಂದು ದುಡಿದು ಅಂದೇ ಉಣ್ಣುವ ಅನಿವಾರ್ಯತೆಯಲ್ಲಿರುವ ಇಂತಹ ಕುಟುಂಬಗಳು ಹಸಿವಿನಿಂದ ಬಾಧಿತಗೊಂಡಿದ್ದವು. ಇಂತಹ ಕುಟುಂಬಗಳನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ […]
ಲಾಕ್ ಡೌನ್ ಕಾರಣದಿಂದಾಗಿ ತಾಲ್ಲೂಕಿನಲ್ಲಿ ಸಮಸ್ಯೆಗೆ ಸಿಲುಕಿದ್ದ ಕಲಾವಿದರು ಹಾಗೂ ಸಣ್ಣ ಸಣ್ಣ ವ್ಯಾಪಾರಿ ಕುಟುಂಬಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ಚಾಚಿದೆ. ಸಂಚಾರ ಕೈಗೊಂಡು ಸಾಬೂನು ಪುಡಿ ಮಾರುತ್ತಿದ್ದ ಕುಟುಂಬಗಳು, ಪೆನ್ನು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಪಿನ್ನುಗಳು, ಪಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬಗಳು, ಬೀದಿ ನಾಟಕ, ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕುಟುಂಬಗಳು ತೀರಾ ಸಂಕಷ್ಟದಲ್ಲಿದ್ದವು. ಮಾತಾ ಮಾಣಿಕೇಶ್ವರಿ ನಗರದಲ್ಲಿ ಗುಡಿಸಲಿನಲ್ಲಿ ವಾಸವಾಗಿರುವ ಈ ಕುಟುಂಬಗಳು ಆಹಾರದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದವು. ಇತ್ತೀಚೆಗೆ […]
ಯಾದಗಿರಿ ತಾಲ್ಲೂಕಿನ ಚಿರಂಜೀವಿ ನಗರ ಸಮೀಪವಿರುವ ಕುಷ್ಠರೋಗಿ ಕಾಲೊನಿಯಲ್ಲಿ ವಾಸವಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿತರಿಸಲಾಯಿತು. ಕಾಲೊನಿಯಲ್ಲಿ ಒಟ್ಟು ಹನ್ನೆರಡು ಕುಟುಂಬಗಳು ವಾಸವಾಗಿದ್ದು ಹೆಚ್ಚಿನ ಕುಟುಂಬಗಳು ಭಿಕ್ಷೆ ಬೇಡಿ ಹೊತ್ತಿನ ಊಟ ಗಳಿಸಿಕೊಳ್ಳುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳು ಮುಚ್ಚಲ್ಪಟ್ಟಿದ್ದರಿಂದ ಜನರ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಶ್ರದ್ಧಾ ಕೇಂದ್ರಗಳಿಗೆ ಜನರು ಬಾರದೇ ಕುಷ್ಠರೋಗಿಗಳ ಭಿಕ್ಷಾಪಾತ್ರೆ ಬರಿದಾಗಿಯೇ ಉಳಿದಿತ್ತು . ದೇವಸ್ಥಾನಕ್ಕೆ ಬಂದವರು ನೀಡುವ ಹಣ್ಣು […]
ಕೋಲಾರ ತಾಲೂಕಿನ ತಲಗುಂದ ಗ್ರಾಮದಲ್ಲಿ ನೆಲೆನಿಂತಿದ್ದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ.ಸಿ ಒಡೆಯರ್ ಕಿಟ್ಗಳನ್ನು ವಿತರಿಸಿದರು. ತಲಗುಂದ ಕೆರೆಯಂಗಳದಲ್ಲಿ ಈ ಕುಟುಂಬಗಳು ವಾಸವಾಗಿದ್ದವು. ಹಳೆಯ ಸೀರೆ, ತಾಡಪಾಲ್ಗಳನ್ನು ಬಳಸಿಕೊಂಡು ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ನೆಲೆ ನಿಂತಿದ್ದ ಹಲವು ಅಲೆಮಾರಿ ಕುಟುಂಬಗಳು ಸಮಸ್ಯೆಗೆ ಸಿಲುಕಿದ್ದವು. ಯಾದಗಿರಿ, ವಿಜಯಪುರ, ಗದಗ ಭಾಗಗಳಿಂದ ಕೂಲಿಗೆಂದು ಬಂದ ಕುಟುಂಬಗಳು ಅಲ್ಲಿದ್ದವು. ಊರೂರು ತಿರುಗಿ ಹಳೆಯ ಬಟ್ಟೆಗಳನ್ನು ವಿಕೃಯಿಸುವುದು, ಕೂದಲು ಸಂಗ್ರಹಿಸಿ ಮಾರಾಟ ಮಾಡಿ ಗಳಿಕೆ […]
ಗರ್ಭಿಣಿಯರಿಗೆ ತಮ್ಮ ಆರೋಗ್ಯದ ಕುರಿತಾಗಿ ಕಾಳಜಿ ವಹಿಸುವಂತೆ ಮಾಹಿತಿ
ಕೋಲಾರ ತಾಲೂಕಿನ ಕಟಾರಿಪಾಳ್ಯದ ಸಂತ್ರಸ್ಥ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಲಕ ಧವಸಧಾನ್ಯಗಳ ಕಿಟ್ ವಿತರಿಸಲಾಯಿತು. ಕಳೆದ ಆರು ತಿಂಗಳ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ರಸ್ತೆ ರಿಪೇರಿ ಕೆಲಸಕ್ಕೆಂದು ಬಂದು ವಾಸವಾಗಿರುವ ಈ ಕುಟುಂಬಗಳು ಲಾಕ್ಡೌನ್ ಪರಿಣಾಮ ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ್ದವು. ಶೆಡ್ಗಳಲ್ಲಿ ವಾಸವಾಗಿರುವ ಈ ಕುಟುಂಬಗಳು ಕೆಲಸವಿಲ್ಲದ ಕಾರಣ ಕೈಯಲ್ಲಿ ಹಣವಿಲ್ಲದೇ, ಅಡುಗೆ ಮಾಡಿ ಉಣ್ಣೋಣವೆಂದರೆ ಮನೆಯಲ್ಲಿ ಧಾನ್ಯಗಳಿಲ್ಲದೇ ಸಂಕಟ ಅನುಭವಿಸುತ್ತಿದ್ದವು. ಯಾರಾದರೂ ಬಂದು ಊಟ ಪೂರೈಸಿ ಉಪಕಾರ […]
ಇವರ ಯಶಸ್ಸಿನ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಮಾಹಿತಿಯ ಬಲವಿದೆ
ಅಂದೇ ತಯಾರಿ. ಅಂದೇ ವ್ಯಾಪಾರ ಇವರ ಚಕ್ಕುಲಿಯ ಪ್ರಸಿದ್ದಿಯ ಗುಟ್ಟು.
ಕೆರೆ ಮಣ್ಣಿನಿಂದ ಮುಕ್ತಿಗೊಂಡಿತು ಎರೆಬೂದಿಹಾಳ ಕೆರೆ