“ಬೇರೆಯವರು ಮಕ್ಕಳು ಇಂಜನಿಯರಿಂಗ್ ಓದಿಸುವುದನ್ನು ನೋಡಿ ಆಶ್ಚರ್ಯ ಪಡೆಯುತ್ತಿದ್ದೆ ಆದರೆ ನಾನೇ ಮುಂದೊಂದು ದಿನಾ ನನ್ನ ಮಗಳಿಗೆ ಇಂಜನಿಯರ್ ಓದಿಸಬಹುದು ಎನ್ನುವ ಕಲ್ಪನೆ ನನಗೆ 6 ವರ್ಷದ ಹಿಂದೆ ಇರಲಿಲ್ಲ.” – ಗಾಯಿತ್ರಿ.
ಹುಬ್ಬಳ್ಳಿಯ ನವನಗರದ ನಿವಾಸಿ ಪ್ರಭಾ ಇತರ ಉದ್ಯೋಗಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮೇಣದ ಬತ್ತಿಯನ್ನು ತಯಾರಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಇವರ ಸ್ವಉದ್ಯೋಗದ ಕನಸುಗಳನ್ನು ಪೋಷಿಸಿ, ಸಾಕಾರಗೊಳಿಸಿದೆ
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿಯ ಮರಿಕುಂಬಿಮಠ ಅವಿಭಕ್ತ ಕುಟುಂಬ ‘ಕೂಡಿಬಾಳಿದರೆ ಸ್ವರ್ಗ ಸುಖ’ ಅನ್ನುವಂತೆ ಅವಿಭಕ್ತ ಕುಟುಂಬದವರಂತೆ ಇತರರಿಗೆ ಅನುಕರಣೀಯರಾಗಿಹರು.
‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ.
ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ.
ಅಮ್ಮಿನಬಾವಿಯಲ್ಲಿ ಹೆಚ್ಚು ಕೃಷಿಕರೇ ಇರುವುದು. ಇದೇ ಭಾಗದ ಕೆಲವು ಮುಸ್ಲಿಂ ಸಮುದಾಯದ ಪುರುಷರು ಗೌಂಡಿ, ಮೇಸ್ತ್ರಿ, ಗಾರೆ ಕಟ್ಟಡ ಕೆಲಸಕ್ಕೆ ಹೋಗುವವರಿದ್ದಾರೆ. ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪತ್ನಿಯರು ತಮ್ಮನ್ನು ತಾವು ಆಲಸ್ಯದಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಇವರು ಮನೆಯ ಬಿಡುವಿನ ವೇಳೆಯಲ್ಲಿ ಕಲಿತ ‘ಕಸೂತಿ ಕಲೆ’ಯಿಂದ ಜೀವನವನ್ನು ಹೆಣೆದುಕೊಂಡಿದ್ದಾರೆ.